ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರಿಂದ ಲೋಕಾರ್ಪಣೆಯಾಯ್ತು ‘ಬ್ಯಾಟೆಮರ’ ಪುಸ್ತಕ

Written by - YASHODHA POOJARI | Edited by - Manjunath Naragund | Last Updated : Nov 2, 2023, 10:23 PM IST
  • ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಕ್ಕಾಗಿ ತುಡಿಯುತ್ತಿರುವ ಎ ಎಸ್ ಜಿ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುವ ಹುಮ್ಮಸ್ಸಿನಲ್ಲಿದ್ದಾರೆ.
  • ಅದಕ್ಕಾಗಿ ತಮ್ಮಲ್ಲಿನ ಪುಸ್ತಕ ಪ್ರೀತಿಯನ್ನು ತೆರೆದಿಟ್ಟಿದ್ದಾರೆ.
  • ನನ್ನ ಪ್ರಕಾರ, ಸಾಹೇಬ, ತೂತುಮಡಿಕೆ, ಒಂದ್ ಕಥೆ ಹೇಳ್ಲಾ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ಎ ಎಸ್ ಜಿ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ.
ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರಿಂದ ಲೋಕಾರ್ಪಣೆಯಾಯ್ತು ‘ಬ್ಯಾಟೆಮರ’ ಪುಸ್ತಕ title=

ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರಿಂದ ಲೋಕಾರ್ಪಣೆಯಾಯ್ತು ‘ಬ್ಯಾಟೆಮರ’ ಪುಸ್ತಕ..ಎ ಎಸ್ ಜಿ  ಪುಸ್ತಕ ಪ್ರೀತಿಗೆ ಜೊತೆಯಾದ ನಟರಾಜ್ ಬೂದಾಳ್ -ಜಯತೀರ್ಥ

ಬರಹಗಾರನಾಗಿ ಗುರುತಿಸಿಕೊಂಡಿರುವ ಎ ಎಸ್ ಜಿ ಮೊದಲ ಕಥಾಸಂಕಲನವನ್ನು ಕೋಟಿಗಾನಹಳ್ಳಿ ರಾಮಯ್ಯ ಮತ್ತು ರಾಜ್ ಬಿ ಶೆಟ್ಟಿ ಅವರು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನ ಕಲಾಗ್ರಾಮದ ಸಂಭಾಗಣದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ನಟರಾಜ್ ಬುದಾಳ್, ಜಯತೀರ್ಥ ಹಾಗೂ ದಯಾ ಗಂಗನಘಟ್ಟ ವಿಶೇಷ ಅತಿಥಿಗಳಾಗಿ ಆಗಮಿಸಿ ಎ ಎಸ್ ಜಿ ಪುಸ್ತಕ ಪ್ರೀತಿಗೆ ಜೊತೆಯಾದರು.

ಇದನ್ನೂ ಓದಿ: ರಾಜಕಾಲುವೆ, ಕೆರೆ ದುರಸ್ತಿಗೆ ಕೇಂದ್ರದ ಬಳಿ ಅನುದಾನಕ್ಕೆ ಪ್ರಸ್ತಾವನೆ

ಮೂಲತಃ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಆಲದಹಳ್ಳಿಯವರಾದ ಎ ಎಸ್ ಜಿ ತನ್ನ ಸುತ್ತಮುತ್ತಲಿನ ಕತೆಗಳನ್ನು ಅಕ್ಷರ ರೂಪಕ್ಕಿಳಿಸಿ ತಯಾರಿಸಿರುವ ಗ್ರಾಮೀಣ ಸೊಗಡಿನ ಕಥೆಗಳ ಗುಚ್ಛವೇ ಬ್ಯಾಟೆಮರ. ಎ ಎಸ್ ಜಿ ಅವರ ಈ ಪುಸ್ತಕ ಪ್ರೀತಿಗೆ ಕಾರಣ ಸಿನಿಮಾರಂಗ..

ಇದನ್ನೂ ಓದಿ: ಬಿಜೆಪಿ ಈಗ ಯಾರಿಗೂ ಬೇಡದ ಅನಾಥ ಶಿಶುವಾಗಿದೆ!: ಕಾಂಗ್ರೆಸ್ ವ್ಯಂಗ್ಯ

ಸಿನಿಮಾವನ್ನೇ ಉಸಿರಾಗಿಸಿಕೊಂಡು ಸಿನಿಮಾಕ್ಕಾಗಿ ತುಡಿಯುತ್ತಿರುವ ಎ ಎಸ್ ಜಿ ನಿರ್ದೇಶಕರಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುವ ಹುಮ್ಮಸ್ಸಿನಲ್ಲಿದ್ದಾರೆ. ಅದಕ್ಕಾಗಿ ತಮ್ಮಲ್ಲಿನ ಪುಸ್ತಕ ಪ್ರೀತಿಯನ್ನು ತೆರೆದಿಟ್ಟಿದ್ದಾರೆ. ನನ್ನ ಪ್ರಕಾರ, ಸಾಹೇಬ, ತೂತುಮಡಿಕೆ, ಒಂದ್ ಕಥೆ ಹೇಳ್ಲಾ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿರುವ ಎ ಎಸ್ ಜಿ ಡೈರೆಕ್ಟರ್ ಕ್ಯಾಪ್ ತೊಡ್ತಿದ್ದಾರೆ. ಈಗಾಗಲೇ ಕಥೆ ಸಿದ್ಧ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿ ತೊಡಗಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ಬರಹಗಾರನಾಗಿ ಅನುಭವವಿರುವ ಎ ಎಸ್ ಜಿ ತಮ್ಮ ಇಷ್ಟು ವರ್ಷದ ಪರಿಶ್ರಮವೆಲ್ಲವನ್ನೂ ಹಾಕಿ ಸಿನಿಮಾ ನಿರ್ದೇಶನಕ್ಕಿಳಿಯುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News