ರಕ್ತದ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಕಿರಣ್ ಖೇರ್

ನಟಿ ಹಾಗೂ ಸಂಸದೆ ಕಿರನ್ ಖೇರ್ ಮಲ್ಟಿಪಲ್ ಮೈಲೋಮಾ - ರಕ್ತ ಕ್ಯಾನ್ಸರ್‌ ನಿಂದ ಚೇತರಿಸಿಕೊಂಡ ನಂತರ  ಮತ್ತೆ ಕೆಲಸ ಆರಂಭಿಸಿದ್ದಾರೆ.ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವರ್ಚುವಲ್ ಮೂಲಕ ಕೆಲಸ ಆರಂಭಿಸಿದ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ನಟ ಹಾಗೂ ಪತಿ ಅನುಮಪ್ ಖೇರ್ ಸಂತಸಗೊಂಡಿದ್ದಾರೆ.

Written by - Zee Kannada News Desk | Last Updated : Oct 9, 2021, 03:59 PM IST
  • ನಟಿ ಹಾಗೂ ಸಂಸದೆ ಕಿರನ್ ಖೇರ್ ಮಲ್ಟಿಪಲ್ ಮೈಲೋಮಾ - ರಕ್ತ ಕ್ಯಾನ್ಸರ್‌ ನಿಂದ ಚೇತರಿಸಿಕೊಂಡ ನಂತರ ಮತ್ತೆ ಕೆಲಸ ಆರಂಭಿಸಿದ್ದಾರೆ.ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವರ್ಚುವಲ್ ಮೂಲಕ ಕೆಲಸ ಆರಂಭಿಸಿದ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ನಟ ಹಾಗೂ ಪತಿ ಅನುಮಪ್ ಖೇರ್ ಸಂತಸಗೊಂಡಿದ್ದಾರೆ.
 ರಕ್ತದ ಕ್ಯಾನ್ಸರ್ ನಿಂದ ಚೇತರಿಸಿಕೊಂಡ ಕಿರಣ್ ಖೇರ್  title=
file photo

ನವದೆಹಲಿ: ನಟಿ ಹಾಗೂ ಸಂಸದೆ ಕಿರನ್ ಖೇರ್ ಮಲ್ಟಿಪಲ್ ಮೈಲೋಮಾ - ರಕ್ತ ಕ್ಯಾನ್ಸರ್‌ ನಿಂದ ಚೇತರಿಸಿಕೊಂಡ ನಂತರ  ಮತ್ತೆ ಕೆಲಸ ಆರಂಭಿಸಿದ್ದಾರೆ.ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವರ್ಚುವಲ್ ಮೂಲಕ ಕೆಲಸ ಆರಂಭಿಸಿದ ಚಿತ್ರಗಳನ್ನು ಹಂಚಿಕೊಂಡಿರುವುದಕ್ಕೆ ನಟ ಹಾಗೂ ಪತಿ ಅನುಮಪ್ ಖೇರ್ ಸಂತಸಗೊಂಡಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ನಟ ಅನುಪಮ್ ಖೇರ್ ಕುಟುಂಬ ಸದಸ್ಯರಿಗೆ ಕೊರೊನಾ ವೈರಸ್ !

ಬಿಜೆಪಿ ಸಂಸದೆ ಕಿರೋನ್ ಖೇರ್( Kirron Kher) ಅವರು ಬಹು ಮೈಲೋಮಾದಿಂದ (ರಕ್ತ ಕ್ಯಾನ್ಸರ್) ಬಳಲುತ್ತಿದ್ದಾರೆ ಮತ್ತು ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಹಿಂದೆ ಅನುಪಮ್ ಖೇರ್ ಅವರ ಪತ್ನಿಯ ಆರೋಗ್ಯದ ಬಗ್ಗೆ ಅಭಿಮಾನಿಗಳು ಪ್ರಶ್ನಿಸಿದಾಗ, ಹಿರಿಯ ನಟ ವಿಡಿಯೋದಲ್ಲಿ ಬಹಿರಂಗಪಡಿಸಿದ್ದು, "ಕಿರಣ್ ಸುಧಾರಿಸುತ್ತಿದ್ದಾಳೆ. ಆಕೆ ಉತ್ತಮವಾಗಿದ್ದಾಳೆ.ಆದರೆ ಮಲ್ಟಿಪಲ್ ಮೈಲೋಮಾಗೆ ಔಷಧಿಗಳು ಹಲವು ಅಡ್ಡಪರಿಣಾಮಗಳನ್ನು ಹೊಂದಿವೆ,ಅವಳ ಹಿತೈಷಿಗಳ ಪ್ರಾರ್ಥನೆಯೊಂದಿಗೆ, ಎಲ್ಲವೂ ಚೆನ್ನಾಗಿರುತ್ತದೆ" ಎಂದು ಹೇಳಿದ್ದರು.

 
 
 
 

 
 
 
 
 
 
 
 
 
 
 

A post shared by Kirron Kher (@kirronkhermp)

ಇದನ್ನೂ ಓದಿ: Kirron Kher: ಬಾಲಿವುಡ್ ನಟ ಅನುಪಮ್ ಖೇರ್ ಪತ್ನಿಗೆ 'ಬ್ಲಡ್​ ಕ್ಯಾನ್ಸರ್'..!

ಕಿರನ್ ಖೇರ್ ಅವರ ಕ್ಯಾನ್ಸರ್ ಬಗ್ಗೆ ವರದಿಗಳು ಬಂದ ನಂತರ, ಪತಿ ಅನುಪಮ್ ಖೇರ್ ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ದೃಢಪಡಿಸಿದರು.1983 ರಲ್ಲಿ ಪಂಜಾಬಿ ಚಲನಚಿತ್ರವಾದ ಆಸ್ರಾ ಪ್ಯಾರ್ ದಾದಲ್ಲಿ ಅವರು ಮೊದಲ ಬಾರಿಗೆ ಕಾಣಿಸಿಕೊಂಡರು.ನಂತರ ಅವರು 1988 ರಲ್ಲಿ ಬಿಡುಗಡೆಯಾದ ಪೆಸ್ಟೊಂಜಿಯಲ್ಲಿ ನಟಿಸಿದರು.ಸರ್ದಾರಿ ಬೇಗಂ, ದೇವದಾಸ್, ಖಮೋಶ್ ಪಾನಿ, ಹಮ್-ತುಮ್, ವೀರ್ ಜಾರಾ, ರಂಗ್ ದೇ ಬಸಂತಿ, ಖೂಬ್ಸುರತ್ ಮುಂತಾದ ಹಲವಾರು ಹಿಟ್ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. 1985 ರಲ್ಲಿ ಕಿರಣ್ ಅವರು ಅನುಪಮ್ ಖೇರ್ ಅವರನ್ನು ವಿವಾಹವಾದರು.

ಇದನ್ನೂ ಓದಿ-"ರಾಹುಲ್ ದ್ರಾವಿಡ್ ಭಾರತ ಕ್ರಿಕೆಟ್ ತಂಡಕ್ಕೆ ಪೂರ್ಣಾವಧಿ ಕೋಚ್ ಆಗಬಾರದು"

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News