ಅಖಾಡಕ್ಕಿಳಿದ ಪೈಲ್ವಾನ್ ಟ್ರೈಲರ್ ; ಕುಸ್ತಿಗೆ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್

ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಕಿಚ್ಚನ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸುವಂತೆ ಮಾಡಿದೆ.ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಬಹುಭಾಷೆಗಳಲ್ಲಿ ತೆರಗೆ ಬರಲಿದೆ.

Last Updated : Aug 22, 2019, 06:34 PM IST
ಅಖಾಡಕ್ಕಿಳಿದ ಪೈಲ್ವಾನ್ ಟ್ರೈಲರ್ ; ಕುಸ್ತಿಗೆ ಕಿಚ್ಚು ಹಚ್ಚಿದ ಕಿಚ್ಚ ಸುದೀಪ್   title=
photo courtesy: movie still

ಬೆಂಗಳೂರು: ಕಿಚ್ಚ ಸುದೀಪ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರದ ಟ್ರೈಲರ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ಕಿಚ್ಚನ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಿಸುವಂತೆ ಮಾಡಿದೆ.ಅದ್ದೂರಿ ವೆಚ್ಚದಲ್ಲಿ ತಯಾರಾಗಿರುವ ಈ ಚಿತ್ರ ಬಹುಭಾಷೆಗಳಲ್ಲಿ ತೆರಗೆ ಬರಲಿದೆ.

ಪೈಲ್ವಾನ್ ಚಿತ್ರ ಕನ್ನಡದ ಜೊತೆಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರಕ್ಕಾಗಿ ದೇಹವನ್ನು ಹುರಿಗೊಳಿಸಿರುವ ಸುದೀಪ್ ಅವರ ಶ್ರಮ ಈ ಚಿತ್ರದ ಟ್ರೈಲರ್ ನಲ್ಲಿಯೇ ಎದ್ದು ಕಾಣುತ್ತದೆ. ಈ ಹಿಂದೆಯೇ ಪೈಲ್ವಾನ್  ಮೋಷನ್ ಪೋಸ್ಟರ್ ಹಾಗೂ ಟೀಸರ್ ಮೂಲಕ ಸಾಕಷ್ಟು ಕೂತೂಹಲ ಮೂಡಿಸಿತ್ತು. ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಮೂಲಕ ಕನ್ನಡಿಗರೇ ಆದ ಸುನಿಲ್ ಶೆಟ್ಟಿ ಈ ಚಿತ್ರದ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಪೈಲ್ವಾನ್ ಚಿತ್ರದ ಟ್ರೈಲರ್ ಕುಸ್ತಿ ಪಂದ್ಯದ ಹೋರಾಟವನ್ನು ತೋರಿಸುತ್ತಲೇ ಆಕ್ಷನ್ ಪ್ರಧಾನ ಚಿತ್ರ ಎನ್ನುವುದನ್ನು ಸಾರುತ್ತದೆ. ಪ್ರತಿ ಪ್ರೇಮ್ ನಲ್ಲಿಯೂ ಅಚ್ಚುಕಟ್ಟಾಗಿ ಮೂಡಿ ಬಂದಿರುವ ಟ್ರೈಲರ್ ಅಭಿಮಾನಿಗಳಿಗೆ ನಿಜಕ್ಕೂ ರಸದೌತಣ ನೀಡಲಿದೆ.ಹಳ್ಳಿಯ ಕುಸ್ತಿ ಅಖಾಡದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ಕುಸ್ತಿ ವೇದಿಕೆ ಟ್ರೈಲರ್ ನಲ್ಲಿ ಮೂಡಿ ಬಂದಿರುವುದರಿಂದ ಚಿತ್ರದ ಕಥೆಗೆ ಭಿನ್ನ ಆಯಾಮವಿದೆ ಎನ್ನುವುದು ತಿಳಿಯುತ್ತದೆ.

ಈ ಚಿತ್ರವನ್ನು ಎಸ್.ಕೃಷ್ಣ ನಿರ್ದೇಶಿಸಿದ್ದು ಮತ್ತು ಆರ್.ಆರ್.ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸ್ವಪ್ನಾ ಕೃಷ್ಣ ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ನೀಡಿದ್ದು, ಚಿತ್ರ ಮುಂದಿನ ತಿಂಗಳು ಸೆಪ್ಟೆಂಬರ್ 12 ರಂದು ತೆರೆಗೆ ಬರಲಿದೆ. ಪೈಲ್ವಾನ್ ಚಿತ್ರದ ತಾರಾಗಣದಲ್ಲಿ ನಾಯಕ ಕಿಚ್ಚ ಸುದೀಪ, ಸುನಿಲ್ ಶೆಟ್ಟಿ, ಆಕಾಂಕ್ಷಾ ಸಿಂಗ್ ಮತ್ತು ಸುಶಾಂತ್ ಸಿಂಗ್ ಇದ್ದಾರೆ.

ಪೈಲ್ವಾನ್ ಚಿತ್ರದ ಟ್ರೈಲರ್ ಗೆ ರಾಜಮೌಳಿ, ರಿತೇಶ್ ದೇಶಮುಖ್, ಶಿವ ಕಾರ್ತಿಕೆಯನ್, ಮುಂತಾದವರು ಶುಭ ಹಾರೈಸಿದ್ದಾರೆ. 

 

Trending News