Keerthy Suresh: ಈ ಖ್ಯಾತ ನಟನಿಗೆ ʻಅಳಿಯಂದ್ರೇ..ʼ ಅಂತ ಕರೀತಾರಂತೆ ನಟಿ ಕೀರ್ತಿ ಸುರೇಶ್ ತಾಯಿ.!

Keerthy Suresh Mother : ಖ್ಯಾತ ನಟಿ ಕೀರ್ತಿ ಸುರೇಶ್ ಅವರ ತಾಯಿ ತಮ್ಮನ್ನು ಅಳಿಯ ಅಂತ ಕರೆಯುತ್ತಾರೆ ಎಂಬ ಸತ್ಯವನ್ನು ಬಿಚ್ಚಿಟ್ಟ ಖ್ಯಾತ ನಟನ ವಿಡಿಯೋ ವೈರಲ್ ಆಗಿದೆ.  

Written by - Chetana Devarmani | Last Updated : Mar 11, 2024, 11:59 AM IST
  • ಖ್ಯಾತ ನಟಿ ಕೀರ್ತಿ ಸುರೇಶ್
  • ನಟಿ ಕೀರ್ತಿ ಸುರೇಶ್ ತಾಯಿ
  • ಖ್ಯಾತ ನಟನಿಗೆ ಅಳಿಯ ಎಂದ ಕೀರ್ತಿ ಅಮ್ಮ
Keerthy Suresh: ಈ ಖ್ಯಾತ ನಟನಿಗೆ ʻಅಳಿಯಂದ್ರೇ..ʼ ಅಂತ ಕರೀತಾರಂತೆ ನಟಿ ಕೀರ್ತಿ ಸುರೇಶ್ ತಾಯಿ.! title=

Keerthy Suresh Mother Menaka: ಖ್ಯಾತ ನಟಿ ಕೀರ್ತಿ ಸುರೇಶ್ ಅವರ ತಾಯಿ ತನಗೆ ಅಳಿಯ ಅಂತಲೇ ಕರೆಯುವುದು ಎಂದು ಖ್ಯಾತ ನಟ ಹೇಳಿರುವ ವಿಡಿಯೋ ವೈರಲ್ ಆಗಿದೆ. ತಮಿಳು, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಹಲವು ಸಿನಿಮಾಗಳನ್ನು ಮಾಡಿ ಖ್ಯಾತಿ ಪಡೆದ ನಟಿ ನಟಿ ಕೀರ್ತಿ ಸುರೇಶ್. ತಮ್ಮ ಪ್ರತಿಭೆ ಮತ್ತು ಸೌಂದರ್ಯದ ಮೂಲಕ ಕೋಟ್ಯಾಂತರ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಸದ್ಯ ಅಟ್ಲಿ ನಿರ್ದೇಶನದ ಹಿಂದಿ ಚಿತ್ರದಲ್ಲಿ ಕೀರ್ತಿ ಬ್ಯುಸಿಯಾಗಿದ್ದಾರೆ.

ಖ್ಯಾತ ನಟಿಯಾಗಿರುವ ಕೀರ್ತಿ ಸುರೇಶ್ ಮದುವೆ ಬಗ್ಗೆ ಹಲವು ಗಾಸಿಪ್ ಗಳು ಆಗಾಗ್ಗೆ ಹರಿದಾಡುತ್ತವೆ. ಇತ್ತೀಚೆಗೆ ಅವರು ಅನಿರುದ್ಧ್ ಜೊತೆಗಿರುವ ಫೋಟೋ ವೈರಲ್ ಆಗಿತ್ತು. ಇದನ್ನು ನೋಡಿದ ನೆಟ್ಟಗರು ಇವರಿಬ್ಬರೂ ಪ್ರೀತಿಸುತ್ತಿದ್ದಾರೆ ಎಂಬ ಅನುಮಾನ ಹುಟ್ಟುಹಾಕಿದರು. ಇಬ್ಬರು ಡೇಟಿಂಗ್ ಮಾಡುತ್ತಿರಬೇಕು ಎಂಬ ವದಂತಿ ಶುರುವಾಯ್ತು. 

ಇದನ್ನೂ ಓದಿ: ಅಪ್ಪ ಅಮಿತಾಬ್‌ʼನಿಂದ ದೂರವಾದ್ರಾ ಪುತ್ರ ಅಭಿಷೇಕ್ ಬಚ್ಚನ್‌ ? 

ಆ ಬಳಿಕ ನಟಿ ಕೀರ್ತಿ ಸುರೇಶ್ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹರಡಿತ್ತು. ಭೈರವ ಚಿತ್ರದ ಪೂಜೆಯಲ್ಲಿ ಭಾಗವಹಿಸಿದ್ದ ಕೀರ್ತಿ ಸುರೇಶ್ ಮತ್ತು ಸತೀಶ್ ಫೋಟೋ ಹಿಡಿದು ಗುಟ್ಟಾಗಿ ಮದುವೆಯಾಗಿದ್ದಾರೆ ಎಂಬ ವದಂತಿ ಹಬ್ಬಿತು. 

ಈ ಬಗ್ಗೆ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟ ಸತೀಶ್, ತಮ್ಮನ್ನು ಕೀರ್ತಿ ಅವರ ಅಮ್ಮ ʻಅಳಿಯʼ ಅಂತಲೇ ಕರೆಯುತ್ತಾರೆ ಎಂದು ಹೇಳಿದ್ದರು. "ಆ ವದಂತಿ ಹಬ್ಬಿದಾಗ ಕೀರ್ತಿ ಸುರೇಶ್ ಅವರ ಅಮ್ಮ ಮೇನಕಾ ನನೆಗೆ ಕರೆ ಮಾಡಿದ್ದರು. ಅಭಿನಂದನೆಗಳು ಅಳಿಯ ಎಂದರು, ಇದನ್ನು ಕೇಳಿ ನಾನು ಶಾಕ್ ಆದೆ." ಎಂದು ಸತೀಶ್‌ ಹೇಳಿದ್ದಾರೆ. ಕಾಮಿಡಿ ನಟನಾಗಿರುವ ಸತೀಶ್, ಹಲವು ಚಿತ್ರಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇದೀಗ ನಾಯಕನಾಗಿಯೂ ನಟಿಸುತ್ತಿದ್ದಾರೆ.

ಇದನ್ನೂ ಓದಿ: Sridevi to Pavitra Gowda: ಮದುವೆಯಾದ ನಟರನ್ನು ಪ್ರೀತಿಸಿದ ನಟಿಯರಿವರು.! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News