Keerthy Suresh‌ Marriage : ಶೀಘ್ರದಲ್ಲೇ ನಟಿ ಕೀರ್ತಿ ಸುರೇಶ್ ಮದುವೆ

Keerthy Suresh‌ Marriage : ನಾಯಕಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ ತುಳಿಯಲು ಪೋಷಕರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ.

Written by - Chetana Devarmani | Last Updated : Aug 7, 2022, 06:09 PM IST
  • ನಟಿ ಕೀರ್ತಿ ಸುರೇಶ್ ಮದುವೆ ಫಿಕ್ಸ್
  • ಶೀಘ್ರದಲ್ಲೇ ನಟಿ ಕೀರ್ತಿ ಸುರೇಶ್ ಮದುವೆ
  • ಎಲ್ಲ ಭಾಷೆಗಳಲ್ಲೂ ಖ್ಯಾತಿ ಪಡೆದ ನಟಿ
Keerthy Suresh‌ Marriage : ಶೀಘ್ರದಲ್ಲೇ ನಟಿ ಕೀರ್ತಿ ಸುರೇಶ್ ಮದುವೆ  title=
ನಟಿ ಕೀರ್ತಿ ಸುರೇಶ್

Keerthy Suresh‌ Marriage : ನಾಯಕಿಯರ ಮದುವೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹೊಸ ಗಾಸಿಪ್ ಗಳು ಹರಿದಾಡುತ್ತಲೇ ಇರುತ್ತವೆ. ಆಪಲ್ ಬ್ಯೂಟಿ ಹನ್ಸಿಕಾ ಮೊನ್ನೆಯಷ್ಟೇ ಮದುವೆಯಾದರು. ಇತ್ತೀಚೆಗಷ್ಟೇ ಕಾಲಿವುಡ್ ನಲ್ಲಿ ಕೀರ್ತಿ ಸುರೇಶ್ ಕೂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ಮನೆಯವರು ನಿಶ್ಚಯಿಸಿದ ವರನೊಂದಿಗೆ ಸಪ್ತಪದಿ ತುಳಿಯಲು ಪೋಷಕರು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ವರ ಉದ್ಯಮಿಯಾಗಿದ್ದು, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಪ್ರಚಾರ ಮಾಡಲಾಗುತ್ತಿದೆ. ಮಲಯಾಳಂನಲ್ಲಿ ಬಾಲನಟಿಯಾಗಿ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ ಕೀರ್ತಿ ಸುರೇಶ್. ಆ ನಂತರ ತಮಿಳಿನಲ್ಲೂ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಬ್ಯೂಟಿ ಹಾಗೂ ಅಭಿನಯದ ಮೂಲಕ ತಮ್ಮದೇ ಆದ ಫ್ಯಾನ್‌ ಬೇಸ್‌ ಹೊಂದಿದ್ದಾರೆ. ಕೀರ್ತಿ ಸುರೇಶ್ ತೆಲುಗಿನಲ್ಲಿ ಸಾಲು ಸಾಲು ಚಿತ್ರಗಳ ಮೂಲಕ ತಮ್ಮ ಪ್ರತಿಭೆ ತೋರಿಸಿದ್ದಾರೆ. ಅಲ್ಲದೇ ದೊಡ್ಡ ಸ್ಟಾರ್‌ಗಳ ಜೊತೆ ದೊಡ್ಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಕೆಯ ಅಭಿನಯಕ್ಕೆ ದೇಶದಾದ್ಯಂತ ಮನ್ನಣೆ ಸಿಕ್ಕಿದೆ. ತಮ್ಮ ನಟನಾ ಕಲೆಯ ಮೂಲಕ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದಾರೆ. 

ಇದನ್ನೂ ಓದಿ : BBK OTT: ಭಾರತದ ರಾಷ್ಟ್ರಪತಿ ನರೇಂದ್ರ ಮೋದಿ ಎಂದ ‘ಬಿಗ್ ಬಾಸ್’ ಸ್ಪರ್ಧಿ!

ಎಲ್ಲ ಭಾಷೆಗಳಲ್ಲೂ ಖ್ಯಾತಿ ಪಡೆದ ನಟಿ : 

ಕೀರ್ತಿ ಸುರೇಶ್ ತನ್ನ ವೃತ್ತಿಜೀವನದ ಆರಂಭದಲ್ಲಿ ಮಲಯಾಳಂ ಮತ್ತು ತಮಿಳಿನ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆ ನಂತರ ತೆಲುಗಿನಲ್ಲಿ ಸ್ಟಾರ್ ಹೀರೋಯಿನ್ ಆದರು. ಆದಾಗ್ಯೂ, ನಟಿ ದಕ್ಷಿಣದ ಎಲ್ಲಾ ಭಾಷೆಗಳಲ್ಲಿ ನಟಿಸುವುದನ್ನು ಮುಂದುವರೆಸಿದ್ದಾರೆ. ಇದರಿಂದಾಗಿ ಎಲ್ಲೆಡೆ ಜನಪ್ರಿಯತೆ ಗಳಿಸಿರುವ ಅವರಿಗೆ ಸಾಲು ಸಾಲು ಆಫರ್ ಗಳು ಬರುತ್ತಿವೆ. ಕೀರ್ತಿ ಸುರೇಶ್ ಕೆಲವು ವೈಯಕ್ತಿಕ ವಿಚಾರಗಳಿಂದಾಗಿ ಆಗಾಗ ಸುದ್ದಿಯಲ್ಲಿರುತ್ತಾರೆ. ಅನೇಕ ಬಾರಿ ಇಂತಹ ವದಂತಿಗಳಿಂದ ಹೈಲೈಟ್ ಆಗುತ್ತಿದ್ದಾರೆ. 

ಮಹಾನಟಿ ಕೀರ್ತಿ ಸುರೇಶ್ ದೇಶಾದ್ಯಂತ ಕ್ರೇಜ್ ಹೆಚ್ಚಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಅದೇ ಸಮಯದಲ್ಲಿ, ಅವರ ಮದುವೆಯ ಬಗ್ಗೆ ಹಲವಾರು ವದಂತಿಗಳಿವೆ. ಈ ಹಿಂದೆ ಉದ್ಯಮಿಯೊಬ್ಬರನ್ನು ಮದುವೆಯಾಗಲು ಸಿದ್ಧರಾಗಿದ್ದಾರೆ ಎಂಬ ಸುದ್ದಿ ಇತ್ತು. ಆ ಬಳಿಕ ಅವರು ಚಿತ್ರರಂಗದ ಸೆಲೆಬ್ರಿಟಿಯನ್ನು ಮದುವೆಯಾಗಲಿದ್ದಾರೆ ಎಂಬ ಗಾಸಿಪ್‌ ಶುರುವಾಗಿತ್ತು. ಹೀಗೆ ಕೀರ್ತಿ ಸುರೇಶ್ ಬಗ್ಗೆ ಹಲವು ಸುದ್ದಿಗಳು ಹರಿದಾಡಿದ್ದವು.

ಇದನ್ನೂ ಓದಿ : Bigg Boss Kannada OTT: ಕನ್ನಡದ ಮೊದಲ ರಾಪರ್ ಈ ಬಿಗ್‌ ಬಾಸ್ ಸ್ಪರ್ಧಿ!!

ಕೀರ್ತಿ ಸುರೇಶ್ ಮದುವೆ ಫಿಕ್ಸ್ :

ಕೀರ್ತಿ ಸುರೇಶ್ ಅವರ ಮದುವೆಯ ಸುದ್ದಿಯು ಬಹಳ ದಿನಗಳಿಂದ ರಾಷ್ಟ್ರವ್ಯಾಪಿ ಹಾಟ್ ಟಾಪಿಕ್ ಆಗಿರುವ ವಿಷಯಗಳಲ್ಲಿ ಒಂದಾಗಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಈ ಸ್ಟಾರ್ ಹೀರೋಯಿನ್ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಇಂಡಸ್ಟ್ರಿಯಲ್ಲಿ ವೈರಲ್ ಆಗುತ್ತಿರುವ ಮಾಹಿತಿಯ ಪ್ರಕಾರ, ಕೀರ್ತಿ ಸುರೇಶ್ ಶೀಘ್ರದಲ್ಲೇ ಮದುವೆಯಾಗಲಿದ್ದಾರಂತೆ. ಇದೇ ತಿಂಗಳು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ. ಕೀರ್ತಿ ಸುರೇಶ್ ಅವರ ಮದುವೆಯ ಸುದ್ದಿ ವೈರಲ್ ಆಗುತ್ತಿರುವ ಸಂದರ್ಭದಲ್ಲಿ, ಅವರ ವರನ ವಿವರಗಳು ಸಹ ಬೆಳಕಿಗೆ ಬಂದಿವೆ. ಇತ್ತೀಚಿನ ಮಾಹಿತಿಯ ಪ್ರಕಾರ, ಕೀರ್ತಿ ಸುರೇಶ್ ರಾಜಕೀಯ ಹಾಗೂ ಉದ್ಯಮ ವಲಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿಯನ್ನು ಮದುವೆಯಾಗಲಿದ್ದಾರಂತೆ. 

ಈ ಬಗ್ಗೆ ಕೀರ್ತಿ ಸುರೇಶ್ ಆಗಲಿ ಅವರ ಆಪ್ತರಾಗಲಿ ಅಥವಾ ಕುಟುಂಬದವರಾಗಲಿ ಯಾವುದೇ ಸ್ಪಷ್ಟನೆ ನೀಡಿಲ್ಲ. ಈ  ರೀತಿ ಕೀರ್ತಿ ಸುರೇಶ್‌ ಮದುವೆಯಾಗುತ್ತಾರೆ ಎಂಬ ಗಾಸಿಪ್‌ ಒಂದು ಸಿನಿಮಾ ರಂಗದಲ್ಲಿ  ಹರಿದಾಡುತ್ತಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
 

Trending News