ಕೀರ್ತಿ ಸುರೇಶ್ ಮದುವೆ ಆಗೋದು ಇವರನ್ನೇ! ಸ್ಪಷ್ಟನೆ ಕೊಟ್ಟ 'ಮಹಾನಟಿ'ಯ ತಂದೆ

Keerthy Suresh Marriage: ಸೌತ್ ಸಿನಿರಂಗದ ಮಹಾನಟಿ ಕೀರ್ತಿ ಸುರೇಶ್‌ ತಮ್ಮ ಅಭಿನಯದಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇನ್ನು ಈ ನಟಿಯ ಮದುವೆ ಬಗ್ಗೆ ಸಾಕಷ್ಟು ಗಾಳಿ ಸುದ್ದಿಗಳು ಹರಿದಾಡುತ್ತಿದ್ದವು. ಸದ್ಯ ಈ ಬಗ್ಗೆ ಕೀರ್ತಿ ಸುರೇಶ್ ತಂದೆ ಸುರೇಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.  

Written by - Savita M B | Last Updated : Sep 17, 2023, 12:28 PM IST
  • ಒಂದಿಷ್ಟು ಫ್ಲಾಫ್‌ ಒಂದಿಷ್ಟು ಹಿಟ್‌ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಸೌತ್‌ ಸುಂದರಿ
  • ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾ ಮುಂದೆ ಸಾಗುತ್ತಿದ್ದಾರೆ
  • ವೈಯಕ್ತಿಕ ವಿಚಾರವಾಗಿಯೂ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ.
ಕೀರ್ತಿ ಸುರೇಶ್ ಮದುವೆ ಆಗೋದು ಇವರನ್ನೇ! ಸ್ಪಷ್ಟನೆ ಕೊಟ್ಟ 'ಮಹಾನಟಿ'ಯ ತಂದೆ  title=

Keerthy Suresh‌: ಒಂದಿಷ್ಟು ಫ್ಲಾಫ್‌ ಒಂದಿಷ್ಟು ಹಿಟ್‌ ಸಿನಿಮಾಗಳನ್ನು ನೀಡುತ್ತಾ ಬಂದಿರುವ ಸೌತ್‌ ಸುಂದರಿ ಕೀರ್ತಿ ಸುರೇಶ್ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುತ್ತಾ ಮುಂದೆ ಸಾಗುತ್ತಿದ್ದಾರೆ. ಈ ನಟಿಯ ಬದುಕಲ್ಲಿ ದೊಡ್ಡ ತಿರುವು ನೀಡಿದ್ದು "ಮಹಾನಟಿ". 

ಇನ್ನು ಕೀರ್ತಿ ಸುರೇಶ್‌ ಅವರ ವೃತ್ತಿ ಬದುಕು ಒಂದೆಡೆಯಾದರೆ, ಅವರ ವೈಯಕ್ತಿಕ ವಿಚಾರವಾಗಿಯೂ ಅವರು ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಹೌದು ನಟಿ ಮದುವೆ ವಿಚಾರವಾಗಿ ತಮಿಳಿನ ನಟರೊಂದಿಗೆ, ಸಂಗೀತ ನಿರ್ದೇಶಕರೊಂದಿಗೆ ಇವರ ಹೆಸರು ತಳುಕು ಹಾಕಿಕೊಳ್ಳುತ್ತಲೇ ಇರುತ್ತದೆ. 

ಇದನ್ನೂ ಓದಿ-ಶೈನಿಂಗ್ ಲುಕ್‌ನಲ್ಲಿ ʼಓ ಮೈ ಕಡುವಲೆʼ ಖ್ಯಾತಿಯ ನಟಿ ಫೋಟೊಸ್‌ ವೈರಲ್

ಆದರೆ ಕಳೆದ ಕೆಲವು ದಿನಗಳಿಂದ ಕೀರ್ತಿ ಸುರೇಶ್‌ ಸದ್ಯ ಭಾಕ್ಸಾಫಿಸ್‌ನಲ್ಲಿ ಭರ್ಜರಿ ಹವಾ ಸೃಷ್ಟಿಸಿರುವ "ಜವಾನ್"‌ ಸಿನಿಮಾದ ಸಂಗೀತ ನಿರ್ದೇಶಕ ಅನಿರುದ್ಧ್‌ ಅವರನ್ನು ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿತ್ತು. ಇದೀಗ ಸ್ವತಃ ಕೀರ್ತಿ ಸುರೇಶ್‌ ಅವರ ತಂದೆ ಸುರೇಶ್ ಕುಮಾರ್ ಈ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. 

ಕೀರ್ತಿ ಸುರೇಶ್‌ ಅವರ ಮದುವೆ ವಿಚಾರವಾಗಿ ಮಾದ್ಯಮದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದ್ದು, ಬಹುತೇಕ ಮಾದ್ಯಮಗಳು ಸೌತ್‌ ಸುಂದರಿ ಕೀರ್ತಿ ಸುರೇಶ್‌ ಅನಿರುದ್ಧ್ ರವಿಚಂದರ್‌ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ... ಮುಂದಿನ ಜನೇವರಿಯಲ್ಲಿ ಅವರಿಬ್ಬರ ಮದುವೆ ಎಂದು ಸುದ್ದಿಯನ್ನು ಹಬ್ಬಿಸಿದ್ದರು. ಈ ಸುದ್ದಿ ವೈರಲ್‌ ಆಗುತ್ತಿದ್ದಂತೆ ಕೀರ್ತಿ ಅವರ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. 

"ಕೀರ್ತಿ ಸುರೇಶ್‌ ಹಾಗೂ ಅನಿರುದ್ಧ್‌ ಬಗ್ಗೆ ಸುದ್ದಿ ಹರಿದಾಡುತ್ತಿರುವುದು ಮೊದಲೇನಲ್ಲ...ಸುಮ್ಮನೇ ಸುಳ್ಳು ಸುದ್ದಿಗಳನ್ನು ಬಿತ್ತರಿಸಬೇಡಿ" ಎಂದು ಸುರೇಶ್‌ ಕುಮಾರ್‌ ಪ್ರತಿಕ್ರಿಸಿದ್ದಾರೆ.

ಇದನ್ನೂ ಓದಿ-SIIMA 2023: ಸುದೀಪ್ ನಟನೆಯ ವಿಕ್ರಾಂತ್ ರೋಣ ಮಡಿಲಿಗೆ ಎರಡು ಸೈಮಾ ಪ್ರಶಸ್ತಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

 

Trending News