ವೈರಲ್ ಆಗ್ತಾ ಇದೆ ಕಾರ್ತಿಕ್ ಜಯರಾಂ ಮತ್ತು ಅಪರ್ಣಾ ಫೋಟೋಗಳು...! ಅಸಲಿ ವಿಚಾರವೇನು ಗೊತ್ತೇ?

ಕಾರ್ತಿಕ್‌ ಜಯ್‌ರಾಮ್‌.. ಕನ್ನಡದ ಕಿರುತೆರೆಯಲ್ಲಿ ತಮ್ಮ ವಿಭಿನ್ನ ನಟನೆಯಿಂದ ಮನೆಗೆದ್ದೋರು... ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ JK ಎಂದೇ ಫೇಮಸ್‌ ಆದವರು. 

Written by - CHARITHA PATEL | Edited by - Manjunath N | Last Updated : May 31, 2022, 10:12 PM IST
  • ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ JK ಎಂದೇ ಫೇಮಸ್‌ ಆದವರು.
  • ಅದರಲ್ಲೂ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಅವ್ರ ಖಡಕ್‌ ಮಾತು ಅವ್ರ ಆಟಿಟ್ಯೂಡ್‌ ನೋಡಿ ಪ್ರತಿಯೊಬ್ಬರೂ ಫಿದಾ ಆಗಿದ್ರು.
  • ಸೀರಿಯಲ್‌ನಲ್ಲಿ ತನ್ನ ಪತ್ನಿಯನ್ನು ಕರಿಯುತ್ತಿದ್ದ ರೀತಿ ಈಗ್ಲೂ ಜೆಕೆ ಅಭಿಮಾನಿಗಳ ಕಿವಿಯಲ್ಲಿ ಗುನುಗ್ತಿದೆ..
ವೈರಲ್ ಆಗ್ತಾ ಇದೆ ಕಾರ್ತಿಕ್ ಜಯರಾಂ ಮತ್ತು ಅಪರ್ಣಾ ಫೋಟೋಗಳು...! ಅಸಲಿ ವಿಚಾರವೇನು ಗೊತ್ತೇ?   title=

ಬೆಂಗಳೂರು: ಕಾರ್ತಿಕ್‌ ಜಯ್‌ರಾಮ್‌.. ಕನ್ನಡದ ಕಿರುತೆರೆಯಲ್ಲಿ ತಮ್ಮ ವಿಭಿನ್ನ ನಟನೆಯಿಂದ ಮನೆಗೆದ್ದೋರು... ಅಶ್ವಿನಿ ನಕ್ಷತ್ರ ಧಾರಾವಾಹಿ ಮೂಲಕ JK ಎಂದೇ ಫೇಮಸ್‌ ಆದವರು. ಅದರಲ್ಲೂ ಅಶ್ವಿನಿ ನಕ್ಷತ್ರ ಧಾರಾವಾಹಿಯಲ್ಲಿ ಜೆಕೆ ಅವ್ರ ಖಡಕ್‌ ಮಾತು ಅವ್ರ ಆಟಿಟ್ಯೂಡ್‌ ನೋಡಿ ಪ್ರತಿಯೊಬ್ಬರೂ ಫಿದಾ ಆಗಿದ್ರು. ಸೀರಿಯಲ್‌ನಲ್ಲಿ ತನ್ನ ಪತ್ನಿಯನ್ನು ಕರಿಯುತ್ತಿದ್ದ ರೀತಿ ಈಗ್ಲೂ ಜೆಕೆ ಅಭಿಮಾನಿಗಳ ಕಿವಿಯಲ್ಲಿ ಗುನುಗ್ತಿದೆ..

ಅಗ್ನಿಸಾಕ್ಷಿ’, ‘ನಾಗಿಣಿ 2’ ‘ಸಿಯಾ ಕೆ ರಾಮ್’ ಹೀಗೇ  ಮುಂತಾದ ಧಾರಾವಾಹಿಗಳಲ್ಲಿ ಕಾರ್ತಿಕ್‌ ಜಯ್‌ರಾಮ್‌ ವಿಶೇಷ ಪಾತ್ರಗಳ ಮೂಲಕ ರಂಜಿಸಿದ್ದಾರೆ.. ಅದರಲ್ಲೂ ಜೆಕೆ ಕನ್ನಡ ಮಾತ್ರದಲ್ಲದೆ ಪರಭಾಷೆಯಲ್ಲೂ ಮಿಂಚಿದ್ದು ಅಲ್ಲಿ ಕೂಡಾ ಅಭಿಮಾನಿಗಳನ್ನು ಹೊಂದಿದ್ದಾರೆ....

 No description available.

ಇದೀಗ ಜೆಕೆ ಬಗ್ಗೆ ಹೇಳೋಕೆ ಒಂದು ಪ್ರಮುಖ ಕಾರಣಯಿದೆ.. ಅದೇನಪ್ಪಾ ಅಂದ್ರೆ ಸದ್ಯ ಜೆಕೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಆ ಒಂದು ಫೋಟೋ ಇದೀಗ ಎಲ್ಲೆಡೆ ಸದ್ದು ಮಾಡ್ತಾಯಿದೆ. ಜೆಕೆ ಸದ್ಯ ವೈಯಕ್ತಿಕ ವಿಚಾರವಾಗಿ ಬಹಳ ಸದ್ದು ಮಾಡುತ್ತಿದ್ದಾರೆ. ಫ್ಯಾಶನ್‌ ಡಿಸೈನರ್‌ ಅಪರ್ಣ ಸಮಾಂತ್‌ ಜೊತೆ ಜೆಕೆ ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ...ಜೆಕೆ ಜೊತೆ ಇರುವ ಫೋಟೋವನ್ನು ಅಪರ್ಣ ಸಮಂತಾ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ..ಮಾತ್ರವಲ್ಲದೆ ಲೈಫ್‌ಲೈನ್‌ ಎಂದು ಕೂಡಾ ಬರೆದುಕೊಂಡಿದ್ದಾರೆ.. ಆ ಫೋಸ್ಟ್‌ ನೋಡಿದ ಅಭಿಮಾನಿಗಳು ಜೆಕೆಗೆ ಶುಭಾಶಯ ತಿಳಿಸಿದ್ದಾರೆ.No description available.

ಜೆಕೆ ಹಾಗೂ ಅಪರ್ಣ ಪ್ರೀತಿಸ್ತಾಯಿದ್ದಾರಾ..? ಇನ್ನೇನು ದಾಂಪತ್ಯಾ ಜೀವನಕ್ಕೆ ಕಾಲಿಡಲಿದ್ದಾರಾ ಎಂಬ ಕುತೂಹಲ ಪ್ರೇಕ್ಷಕರು ಹಾಗೂ ನೆಟ್ಟೆಗರನ್ನು ಕಾಡುತ್ತಿದೆ. ಆದ್ರೆ ಈ ಎಲ್ಲಾ ಪ್ರಶ್ನೆಗಳಿಗೂ ಜೆಕೆ ಉತ್ತರ ನೀಡಿದ್ದು.. ಅಪರ್ಣ ನನ್ನ ಸೇಹಿತೆ, ನಾವಿಬ್ಬರು ಗುಡ್‌ ಫ್ರೆಂಡ್ಸ್‌ ಎಂದು ಉತ್ತರ ನೀಡಿದ್ದಾರೆ. ಪ್ರತಿಯೊಬ್ಬರ ಪ್ರಶ್ನೆಗೂ ಫುಲ್‌ಸ್ಟಾಪ್‌ ಇಟ್ಟಿದ್ದಾರೆ.

ಇದನ್ನು ಓದಿ: ಪ್ರೀತಿ, ಕಂಬನಿ, ಭಾವನೆಗಳ ಬೆಲೆ ಹೇಳಲಿದ್ದಾನೆ ನಮ್ಮ 'ಚಾರ್ಲಿ'..!

ಇನ್ನು ಕಾರ್ತಿಕ್‌ ಜಯರಾಮ್‌ ಕನ್ನಡ ಸೀರಿಯಲ್‌ಗಳಲ್ಲಿ ಮಾತ್ರವಲ್ಲದೆ ಕನ್ನಡ ಬಿಗ್‌ಬಾಸ್‌ ಸೀಸನ್‌ 5ರಲ್ಲಿ ರನ್ನರ್‌ಅಪ್‌ ಆಗಿ ಮಿಂಚಿದ್ರು. ಬೆಳ್ಳಿತೆರೆಯಲ್ಲಿ ಕೆಂಪೇಗೌಡ, ವಿಷ್ಣುವರ್ಧನ, ಜರಾಸಂಧ, ವರದನಾಯಕ, ವಿಸ್ಮಯ, ಆ ಕರಾಳ ರಾತ್ರಿ, ಮೇ 1st, ಪುಟ 109, ಓ ಪುಷ್ಪ ಐ ಹೇಟ್ ಟಿಯರ್ಸ್ ಹೀಗೆ ಸಾಕಷ್ಟು ಚಿತ್ರಗಳಲ್ಲಿ  ಕಾರ್ತಿಕ್ ಜಯಾರಾಮ್ ಅಭಿನಯಿಸಿದ್ದಾರೆ.

ಇ‌ನ್ನು ಅಪರ್ಣಾ ಸಮಂತಾ ಬಗ್ಗೆ ಹೇಳೋದಾದ್ರೆ ಇವ್ರು ಫ್ಯಾಶನ್ ಡಿಸೈನರ್.ಫ್ಯಾಶನ್ ಲೋಕದಲ್ಲಿ ಅಪರ್ಣಾ ಸಮಂತಾ ಒಳ್ಳೆಯ  ಹೆಸರುಗಳಿಸಿದ್ದಾರೆ.

ಒಟ್ಟಿನಲ್ಲಿ ಕಾರ್ತಿಕ್‌ ಹಾಗೂ ಅಪರ್ಣಾ ಬಗ್ಗೆ ಒಂದಿಷ್ಟು ಊಹಾಪೊಹಗಳು ಮನೆ ಮಾಡಿದ್ದು, ಸದ್ಯದಲ್ಲೇ ಎಲ್ಲದಕ್ಕೂ ಬ್ರೇಕ್‌ ಸಿಗಲಿದೆ.No description available.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News