Kartik Aaryan: ತಮ್ಮ ಕೈಯಿಂದ ಕಿಯಾರಾ ಸ್ಯಾಂಡಲ್ ಎತ್ತಿಕೊಟ್ಟ ಕಾರ್ತಿಕ್ ಆರ್ಯನ್.. ವಿಡಿಯೋ ವೈರಲ್‌!

Kartik-Kiara advani sandal Video: ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿಯ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ಕಾರ್ತಿಕ್‌ ಆರ್ಯನ್‌ ಫ್ಯಾನ್ಸ್‌ ಫುಲ್‌ ಫಿದಾ ಆಗಿದ್ದಾರೆ.   

Written by - Chetana Devarmani | Last Updated : Jun 21, 2023, 08:44 PM IST
    • ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿಯ ವಿಡಿಯೋ
    • ತಮ್ಮ ಕೈಯಿಂದ ಕಿಯಾರಾ ಸ್ಯಾಂಡಲ್ ಎತ್ತಿಕೊಟ್ಟ ಕಾರ್ತಿಕ್ ಆರ್ಯನ್
    • ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್‌
Kartik Aaryan: ತಮ್ಮ ಕೈಯಿಂದ ಕಿಯಾರಾ ಸ್ಯಾಂಡಲ್ ಎತ್ತಿಕೊಟ್ಟ ಕಾರ್ತಿಕ್ ಆರ್ಯನ್.. ವಿಡಿಯೋ ವೈರಲ್‌! title=

 Hold Kiara Advani Sandals: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಹುಡುಗಿಯರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದ್ದಾರೆ. ಇದು ಅವರ ಪ್ರತಿಯೊಬ್ಬ ಅಭಿಮಾನಿಗೂ ತಿಳಿದಿದೆ. ಕಾರ್ತಿಕ್ ನ ಕೂಲ್ ಲುಕ್ ನಿಂದ ಹಿಡಿದು ಅವನ ಮುದ್ದಾದ ಗೆಸ್ಚರ್ ವರೆಗೆ ಹುಡುಗಿಯರ ಹಾಟ್‌ ಫೆವರೇಟ್‌ ಆಗಿದ್ದಾರೆ. ಇದೀಗ ಅವರ ಮತ್ತೊಂದ ವಿಡಿಯೋ ವೈರಲ್‌ ಆಗಿದೆ. ಇದನ್ನು ನೋಡಿದ ಹುಡುಗಿಯರ ಮನಸಿನಲ್ಲಿ ಅವರ ಮೇಲಿನ ಗೌರವ ಹೆಚ್ಚಾಗಿದೆ.

ಕಾರ್ತಿಕ್ ಆರ್ಯನ್ ಅವರು ಕಿಯಾರಾ ಅಡ್ವಾಣಿಗಾಗಿ ಮಾಡಿದ ಈ ಕೆಲಸ ಅಭಿಮಾನಿಗಳ ಮನ ಗೆಲ್ಲುತ್ತಿದೆ. ಕಿಯಾರಾ ಅಡ್ವಾಣಿ ಮತ್ತು ಕಾರ್ತಿಕ್‌ ಆರ್ಯನ್‌ ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಸತ್ಯಪ್ರೇಮ್ ಕಿ ಕಥಾ' ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ಜನರ ಹೃದಯವನ್ನು ಗೆಲ್ಲುವ ಕೆಲಸವನ್ನು ಕಾರ್ತಿಕ್‌ ಮಾಡಿದ್ದಾರೆ. 

ಇದನ್ನೂ ಓದಿ: Disha Patani Sexy look: ಸೀರೆಯಲ್ಲಿ‌ ಸಖತ್ ಹಾಟ್‌ ದಿಶಾ ಪಟಾನಿ.. ವಿಡಿಯೋ ನೋಡಿ ಮೈಮರೀತಿರಾ!

ಕಾರ್ತಿಕ್ ಮತ್ತು ಕಿಯಾರಾ ವಿಡಿಯೋ ವೈರಲ್  

ವಾಸ್ತವವಾಗಿ, ಕಾರ್ತಿಕ್ ಮತ್ತು ಕಿಯಾರಾ ತಮ್ಮ ಹೊಸ ಹಾಡು 'ಸನ್ ಸಜ್ನಿ' ರಿಲೀಸ್‌ಗಾಗಿ ಮುಂಬೈನ ಅಂಧೇರಿಗೆ ಆಗಮಿಸಿದರು. ಈ ವೇಳೆ ಇಬ್ಬರೂ ಒಟ್ಟಿಗೆ ಡ್ಯಾನ್ಸ್ ಕೂಡ ಮಾಡಿದ್ದಾರೆ. ಈವೆಂಟ್‌ನಿಂದ ಹೊರಬಂದ ವಿಡಿಯೋದಲ್ಲಿ, ಕಿಯಾರಾ ನೃತ್ಯ ಮಾಡಲು ತನ್ನ ಚಪ್ಪಲಿಯನ್ನು ಬಿಟ್ಟು, ವೇದಿಕೆಯ ಮೇಲೆ ಹೋಗುತ್ತಿರುವುದು ಕಂಡುಬರುತ್ತದೆ. ಕಾರ್ತಿಕ್ ಕೈಗಳನ್ನು ಹಿಡಿದುಕೊಂಡು ಅವರನ್ನು ಕರೆದೊಯ್ಯುತ್ತಾರೆ ಮತ್ತು ನಂತರ ಇಬ್ಬರೂ ನೃತ್ಯ ಮಾಡುತ್ತಾರೆ.

 

 
 
 
 
 

 

ಅದಾದ ನಂತರ, ಕಿಯಾರಾ ಹಿಂತಿರುಗುತ್ತಾರೆ. ಆಗ ಕಾರ್ತಿಕ್ ಚಪ್ಪಲಿಯನ್ನು ತನ್ನ ಕೈಗಳಿಂದ ಎತ್ತಿಕೊಂಡು ಕಿಯಾರಾ ಪಾದಗಳ ಮುಂದೆ ಇಡುತ್ತಾರೆ. ಇದಾದ ನಂತರ, ಕಿಯಾರಾ ಚಪ್ಪಲಿಯನ್ನು ಧರಿಸುವಾಗಲೂ, ಕಾರ್ತಿಕ್ ಅವರ ಕೈಯನ್ನು ಹಿಡಿದಿರುತ್ತಾರೆ. ಇಬ್ಬರ ಈ ಸ್ವೀಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲವರು ಇದನ್ನು ಪಬ್ಲಿಸಿಟಿ ಎಂದೂ ಕರೆಯುತ್ತಿದ್ದರೆ, ಕೆಲವರು ಕಾರ್ತಿಕ್ ಅವರ ಸಂಭಾವಿತ ನಡವಳಿಕೆ ಎಂದು ಕರೆಯುತ್ತಿದ್ದಾರೆ.

ಇದನ್ನೂ ಓದಿ: Alia Bhatt: ಆಲಿಯಾ ಭಟ್‌ ಮಂಗಳಸೂತ್ರದಲ್ಲಿದೆ ಒಂದು ಹಿಡನ್‌ ಸೀಕ್ರೇಟ್‌.. ಇದಕ್ಕಿದೆ ವಿಶೇಷ ಅರ್ಥ! ಗೆಸ್‌ ಮಾಡ್ರಿ ನೋಡೋಣ..

ಕಾರ್ತಿಕ್ ಮತ್ತು ಕಿಯಾರಾ ಅಭಿನಯದ 'ಸತ್ಯಪ್ರೇಮ್ ಕಿ ಕಥಾ' ಚಿತ್ರ ಜೂನ್ 29 ರಂದು ಬಿಡುಗಡೆಯಾಗಲಿದೆ. ಕಾರ್ತಿಕ್ ಮತ್ತು ಕಿಯಾರಾ ಜೋಡಿಯನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಇಬ್ಬರೂ ಈ ಹಿಂದೆ 'ಭೂಲ್ ಭುಲೈಯಾ 2' ನಲ್ಲಿ ಕಾಣಿಸಿಕೊಂಡಿದ್ದರು. ಅದು ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಆಗಿತ್ತು.

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

  

Trending News