Kareena Kapoor Upcoming Film: ತಾನು ಗರ್ಭಿಣಿಯಾಗಿರುವ ಕುರಿತು ಆಲಿಯಾ ಭಟ್ ಮಾಡಿದ ಘೋಷಣೆ ಮಾಡಿದ ಬಳಿಕ, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮತ್ತು ಕರೀನಾ ಕಪೂರ್ ಅವರು ಗರ್ಭಿಣಿಯಾಗಿರುವ ಕುರಿತಾದ ಚರ್ಚೆಗಳು ಇದೀಗ ಮಾಧ್ಯಮಗಳಲ್ಲಿ ಕೇಳಿ ಬರಲಾರಂಭಿಸಿವೆ. ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಈ ನಾಯಕಿಯರ ಚಿತ್ರಗಳನ್ನು ಪ್ರಕಟಿಸಿ ಅವರು ಗರ್ಭಿಣಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಇತ್ತೀಚೆಗೆ, ಕರೀನಾ ಕಪೂರ್ ಖಾನ್ ತನ್ನ ಪತಿ ಸೈಫ್ ಅಲಿ ಖಾನ್ ಅವರೊಂದಿಗೆ ಯುರೋಪ್ನಿಂದ ಹಿಂದಿರುಗಿದಾಗ, ತೈಮೂರ್ ಮತ್ತು ಜಹಾಂಗೀರ್ ನಂತರ ಕರೀನಾ ಮೂರನೇ ಬಾರಿಗೆ ಗರ್ಭಿಣಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೂ ಮೊದಲು ಈ ಕುರಿತು ಲೈಟಾಗಿ ಪ್ರತಿಕ್ರಿಯೆ ನೀಡಿದ್ದ , ಕರೀನಾ ತನ್ನ ಪತಿ ಸೈಫ್ ಅಲಿ ಖಾನ್ ಈಗಾಗಲೇ ದೇಶದ ಜನಸಂಖ್ಯೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದು ಹೇಳುವ ಮೂಲಕ ಈ ಚರ್ಚೆಗೆ ಕುಮ್ಮಕ್ಕು ನೀಡಿದ್ದಳು. ಆದರೆ ಇದೀಗ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಕರೀನಾ ಈ ವದಂತಿಗಳ ಕುರಿತು ವ್ಯಂಗ್ಯವಾಡಿದ್ದಾರೆ ಮತ್ತು 'ಜನರು ತಾನು ಗರ್ಭಿಣಿ ಎಂದು ಹೇಳುವುದರ ಅರ್ಥವೇನು?' 'ನಾನು ಮಕ್ಕಳನ್ನು ತಯಾರಿಸುವ ಯಂತ್ರವಾಗಿದ್ದೇನೆ? ಎಂದು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾಳೆ. 'ಶೀ ಇಸ್ ಪ್ರೆಗ್ನೆಂಟ್... ಇಸ್ ಶೀ ಹ್ಯಾವಿಂಗ್ ಅನದರ್ ಬೇಬಿ?' ಎಂದು ಪ್ರಶ್ನಿಸಲಾಗುತ್ತಿದೆ. 'ಅದು ನನ್ನ ವೈಯಕ್ತಿಕ ಆಯ್ಕೆ, ಅದನ್ನು ನನಗೆ ಬಿಡಬೇಕು' ಎಂದು ಕರೀಂದ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಆಗಸ್ಟ್ನಲ್ಲಿ ಕರೀನಾ ಅಭಿನಯದ 'ಲಾಲ್ ಸಿಂಗ್ ಚಡ್ಡಾ' ಚಿತ್ರ ಬಿಡುಗಡೆಯಾಗಲಿದ್ದು, ಅದರ ಪ್ರಚಾರ ಕಾರ್ಯದಲ್ಲಿ ಕರೀನಾ ನಿರತಳಾಗಿದ್ದಾಳೆ ಎಂಬುದು ಇಲ್ಲಿ ಉಲ್ಲೇಖನೀಯ.
ಇದನ್ನೂ ಓದಿ-‘ಕಿಚ್ಚ’ನಿಗೆ ಥ್ಯಾಂಕ್ಸ್ ಹೇಳಿ ಗುಡ್ಡಿ ಫ್ರೆಂಡ್ ಭಾಸ್ಕರ್ ಬಗ್ಗೆ ರಾಜಮೌಳಿ ಟ್ವೀಟ್
ಆಲಿಯಾಗೆ ಗರ್ಭಧಾರಣೆಯ ಸಲಹೆಗಳನ್ನು ನೀಡಿಲ್ಲ
ತನ್ನ ಸೋದರಸಂಬಂಧಿ ರಣಬೀರ್ ಕಪೂರ್ ಅವರ ಪತ್ನಿ ಆಲಿಯಾಗೆ ಗರ್ಭಧಾರಣೆಗೆ ಸಂಬಂಧಿಸಿದ ಸಲಹೆಗಳನ್ನು ನೀಡಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿರುವ ಕರೀನಾ ಇಲ್ಲ ಎಂದು ಹೇಳಿದ್ದಾಳೆ. 'ಯಾರಾದರೂ ನನಗೆ ಟಿಪ್ಸ್ ಕೊಟ್ಟರೆ, ಅದು ನನಗೆ ಇಷ್ಟವಾಗುವುದಿಲ್ಲ. ಹೀಗಾಗಿ ನಾನೂ ಕೂಡ ಯಾರಿಗೂ ಟಿಪ್ಸ್ ಕೊಡುವುದಿಲ್ಲ' ಎಂದು ಕರೀನಾ ಹೇಳಿದ್ದಾಳೆ. ಆದರೆ, ಕರೀನಾ ತನ್ನ ಗರ್ಭಾವಸ್ಥೆಯ ಅನುಭವಗಳ ಬಗ್ಗೆ 'ಪ್ರೆಗ್ನೆನ್ಸಿ ಬೈಬಲ್' ಎಂಬ ಪುಸ್ತಕವನ್ನೂ ಕೂಡ ಬರೆದಿದ್ದಾರೆ ಎಂಬುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ-ಶೂಟಿಂಗ್ ನಲ್ಲಿ 4 ಚಿನ್ನ, 2 ಕಂಚಿನ ಪದಕ ಗೆದ್ದ ತಮಿಳು ನಟ ಅಜಿತ್
ಅಮೀರ್ ಕಾಳಜಿ ವಹಿಸಿದ್ದಾರೆ
ಲಾಲ್ ಸಿಂಗ್ ಚಡ್ಡಾ ಚಿತ್ರೀಕರಣದ ವೇಳೆ ಕರೀನಾ ಎರಡನೇ ಬಾರಿಗೆ ಗರ್ಭಿಣಿಯಾಗಿದ್ದಳು. ಇದನ್ನು ನಿರ್ಮಾಪಕ-ನಟ ಅಮೀರ್ ಖಾನ್ಗೆ ಹೇಳಿದಾಗ ಅವರು ಸ್ವಲ್ಪವೂ ಅಸಮಾಧಾನಗೊಳ್ಳಲಿಲ್ಲ ಮತ್ತು ಶೂಟಿಂಗ್ ಸಮಯದಲ್ಲಿ ಅವರು ತಮ್ಮ ಸಂಪೂರ್ಣ ಕಾಳಜಿ ವಹಿಸಿದ್ದರು ಎಂದು ಕರೀನಾ ಹೇಳಿದ್ದಾಳೆ. ಕೊರೊನಾ ಕಾಲವಾಗಿದ್ದ ಕಾರಣ, ಚಿತ್ರೀಕರಣದ ವೇಳೆ ಸೆಟ್ನಲ್ಲಿ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ಚಿತ್ರದ ಚಿತ್ರೀಕರಣದ ವೇಳೆ ತೈಮೂರ್ನನ್ನು ದೆಹಲಿಯಲ್ಲಿ ತನ್ನೊಂದಿಗೆ ಇರಿಸಿಕೊಳ್ಳುತ್ತಿದ್ದೆ ಎಂದು ಕರೀನಾ ಹೇಳಿದ್ದಾಳೆ. ಆ ಸಮಯದಲ್ಲಿ, ಸೈಫ್ ಕೂಡ ತೈಮೂರ್ ಅನ್ನು ನೋಡಿಕೊಳ್ಳಲು ಅನೇಕ ಬಾರಿ ಶೂಟಿಂಗ್ನಲ್ಲಿ ಹಾಜರಿರುತ್ತಿದ್ದರು ಎಂದು ಕರೀನಾ ಹೇಳಿದ್ದಾರೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.