Bollywood Actress: 19 ಸಿನಿಮಾ ಫ್ಲಾಪ್‌.. 4000 ಕೋಟಿ ಗಳಿಕೆ, ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ.!

Bollywood Actress Success Stroy : ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಚಿತ್ರಗಳನ್ನು ನೀಡಿ ಕೋಟಿಗಟ್ಟಲೆ ಲಾಭ ಗಳಿಸಿದ ಅನೇಕ ಬಾಲಿವುಡ್‌ ನಟಿಯರಿದ್ದಾರೆ. ಇಂದು ಅವರಲ್ಲಿ ಒಬ್ಬರ ಬಗ್ಗೆ ಹೇಳುತ್ತಿದ್ದೇವೆ. 

Written by - Chetana Devarmani | Last Updated : Feb 18, 2024, 11:01 AM IST
  • ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ
  • ಬಾಕ್ಸಾಫೀಸ್‌ನಲ್ಲಿ 4000 ಕೋಟಿ ಗಳಿಕೆ
  • ಬಾಲಿವುಡ್ ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರು
Bollywood Actress: 19 ಸಿನಿಮಾ ಫ್ಲಾಪ್‌.. 4000 ಕೋಟಿ ಗಳಿಕೆ, ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ.!  title=

Bollywood most successful actress : ಬಾಲಿವುಡ್ ನಲ್ಲಿ ಟಾಪ್ ನಟಿಯರಲ್ಲಿ ಒಬ್ಬರು ಈಕೆ. ಮದುವೆಯಾಗಿ ಇಬ್ಬರು ಮಕ್ಕಳಾದ ಮೇಲೆಯೂ ಬಾಲಿವುಡ್‌ನ ಟಾಪ್‌ ನಟಿಯರ ಪಟ್ಟಿಯಲ್ಲಿದ್ದಾರೆ ಈ ಬೆಡಗಿ. ಬಾಕ್ಸ್ ಆಫೀಸ್‌ನಲ್ಲಿ ಸುಮಾರು 4000 ಕೋಟಿ ಗಳಿಸಿದರು. 19 ಫ್ಲಾಪ್ ಸಿನಿಮಾ ಕೊಟ್ಟರೂ ಬಾಲಿವುಡ್ ನ ಟಾಪ್ ಹೀರೋಯಿನ್ ಗಳ ಪಟ್ಟಿಗೆ ಸೇರ್ಪಡೆಯಾಗಿರುವ ಈ ಚೆಲುವೆ ಯಾರು ಗೊತ್ತಾ.

ಈ ನಟಿ ಬೇರೆ ಯಾರೂ ಅಲ್ಲ ಬಾಲಿವುಡ್‌ ಬೆಬೋ ಕರೀನಾ ಕಪೂರ್ ಖಾನ್. ಇತರ ನಟಿಯರಿಗಿಂತ ಹೆಚ್ಚು ಕಲೆಕ್ಷನ್‌ ಮಾಡಿದ ಬಾಲಿವುಡ್ ಬೆಡಗಿಯರ ಪಟ್ಟಿಯಲ್ಲಿ ಕರೀನಾಸಹ ಒಬ್ಬರು. ವರದಿಯ ಪ್ರಕಾರ, ಕರೀನಾ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿ. ಕರೀನಾ ಅವರ ಸಹೋದರಿ ಕರಿಷ್ಮಾ 22 ಹಿಟ್‌ ಸಿನಿಮಾ ನೀಡಿದ್ದಾರೆ. ಕತ್ರಿನಾ 22 ಮತ್ತು ರಾಣಿ ಮುಖರ್ಜಿ 21 ಹಿಟ್ ಚಿತ್ರಗಳನ್ನು ನೀಡಿದ್ದಾರೆ.

ಇದನ್ನೂ ಓದಿ: Nayanthara Remuneration: ಸಂಭಾವನೆಗಾಗಿ ಗಂಡನ ಸಿನಿಮಾನೇ ಕೈಬಿಟ್ಟ ನಯನತಾರಾ!? 

ಪ್ರಿಯಾಂಕಾ ಚೋಪ್ರಾ 18 ಹಿಟ್‌, ಕಾಜೋಲ್ ಸುಮಾರು 14 ಹಿಟ್‌ ಸಿನಿಮಾ ನೀಡಿದ್ದಾರೆ. ಆದರೆ ಕರೀನಾ ಇವರೆಲ್ಲರನ್ನೂ ಮೀರಿಸಿದ್ದಾರೆ. ಕರೀನಾ ಕಪೂರ್‌ ಸುಮಾರು 23 ಹಿಟ್‌ ಸಿನಿಮಾ ನೀಡಿದ್ದು, ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯಾಗಿದ್ದಾರೆ. ಬಜರಂಗಿ ಭಾಯಿಜಾನ್, 3 ಈಡಿಯಟ್ಸ್, ಕಭಿ ಖುಷಿ ಕಭಿ ಗಮ್, ಐತ್ರಾಜ್, ಜಬ್ ವಿ ಮೆಟ್ ಹೀಗೆ ಸೂಪರ್‌ ಹಿಟ್ ಸಿನಿಮಾಗಳನ್ನು ಕರೀನಾ ನೀಡಿದ್ದಾರೆ. 

ವರದಿಗಳ ಪ್ರಕಾರ, ಅನೇಕ ನಾಯಕಿಯರ ಸಿನಿಮಾಗಳು 3000 ಕೋಟಿ ರೂ.ಗಿಂತ ಹೆಚ್ಚು  ಗಳಿಸಿವೆ. ಇದರಲ್ಲಿ ದೀಪಿಕಾ ಪಡುಕೋಣೆ ಮತ್ತು ಅನುಷ್ಕಾ ಶರ್ಮಾ ಹೆಸರು ಸಹ ಸೇರಿವೆ. 'ಬಾಹುಬಲಿ' ಚಿತ್ರದಿಂದಾಗಿ ತಮನ್ನಾ ಭಾಟಿಯಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಐಶ್ವರ್ಯಾ ರೈ, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್ ಮತ್ತು ನಯನತಾರಾ ನಟನೆಯ ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ 2000 ಕೋಟಿಗಿಂತ ಹೆಚ್ಚು ಗಳಿಸಿವೆ. ಕರೀನಾ ಕಪೂರ್ ಬಾಕ್ಸ್ ಆಫೀಸ್‌ನಲ್ಲಿ 4000 ಕೋಟಿ ರೂ.ಗಿಂತ ಹೆಚ್ಚು ಗಳಿಸಿದ್ದಾರೆ. ಆದರೆ ಕರೀನಾ ನಟಿಸಿದ 19 ಚಿತ್ರಗಳು ಫ್ಲಾಪ್‌ ಆಗಿವೆ.   

ಇದನ್ನೂ ಓದಿ: 'ಶಾರುಖ್ ಖಾನ್....' ಪ್ರಿಯಾಮಣಿ ಕಿಂಗ್ ಖಾನ್ ಬಗ್ಗೆ ಹೀಗೆ ಹೇಳಿದ್ದೇಕೆ? 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News