ಇನ್ಮುಂದೆ ಪ್ರಸಾರವಾಗಲ್ಲ ಜನಪ್ರಿಯ ಟಿವಿ ಶೋ ʼಕಾಫಿ ವಿತ್‌ ಕರಣ್‌ʼ..!

2004ರಲ್ಲಿ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ‘ಕಾಫಿ ವಿತ್ ಕರಣ್‘ ಮೊದಲ ಶೋ ಪ್ರಸಾರವಾಗಿತ್ತು. ಮೊದಲ ಸೀಸನ್‌ನಲ್ಲೇ ಜನಮನ ಗೆದ್ದ ಶೋ ಎಂದು ಖ್ಯಾತಿ ಗಳಿಸಿತ್ತು. ಆ ಬಳಿಕ 2019 ರವರೆಗೆ ಆರು ಸೀಸನ್‌ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ. 

Written by - Bhavishya Shetty | Last Updated : May 4, 2022, 05:00 PM IST
  • ʼಕಾಫಿ ವಿತ್‌ ಕರಣ್‌ʼ ಶೋ ಸ್ಥಗಿತ
  • ಸ್ಪಷ್ಟನೆ ನೀಡಿದ ನಿರ್ದೇಶಕ ಕರಣ್ ಜೊಹಾರ್
  • ಆರು ಸೀಸನ್‌ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿತ್ತು
ಇನ್ಮುಂದೆ ಪ್ರಸಾರವಾಗಲ್ಲ ಜನಪ್ರಿಯ ಟಿವಿ ಶೋ ʼಕಾಫಿ ವಿತ್‌ ಕರಣ್‌ʼ..!  title=
Koffee With Karan

ಮುಂಬೈ: ಹಿಂದಿ ಕಿರುತೆರೆಯ ಜನಪ್ರಿಯ ಟಿವಿ ಶೋಗಳಲ್ಲಿ ಒಂದಾಗಿರುವ ʼಕಾಫಿ ವಿತ್‌ ಕರಣ್‌ʼ ಇನ್ನು ಮುಂದೆ ಪ್ರಸಾರವಾಗುವುದಿಲ್ಲ. ಹೀಗಂತ ಶೋ ನಡೆಸಿಕೊಡುತ್ತಿದ್ದ ಸಿನಿಮಾ ನಿರ್ಮಾಪಕ, ನಿರ್ದೇಶಕ ಕರಣ್ ಜೊಹಾರ್ ಸ್ಪಷ್ಟಪಡಿಸಿದ್ದಾರೆ. ಈ ಸುದ್ದಿ ತಿಳಿದ ಅಭಿಮಾನಿಗಳು ಶಾಕ್‌ ಆಗಿದ್ದಾರೆ. 

ಇದನ್ನು ಓದಿ: ನಟನಿಗೆ "ಗೆಟ್‌ ಔಟ್‌ ಆಫ್‌ ಮೈ ಸ್ಟುಡಿಯೋ" ಎಂದ ನಿರೂಪಕಿ: ವಿಡಿಯೋ ವೈರಲ್‌

2004ರಲ್ಲಿ ಸ್ಟಾರ್ ವರ್ಲ್ಡ್ ವಾಹಿನಿಯಲ್ಲಿ ‘ಕಾಫಿ ವಿತ್ ಕರಣ್‘ ಮೊದಲ ಶೋ ಪ್ರಸಾರವಾಗಿತ್ತು. ಮೊದಲ ಸೀಸನ್‌ನಲ್ಲೇ ಜನಮನ ಗೆದ್ದ ಶೋ ಎಂದು ಖ್ಯಾತಿ ಗಳಿಸಿತ್ತು. ಆ ಬಳಿಕ 2019 ರವರೆಗೆ ಆರು ಸೀಸನ್‌ಗಳಲ್ಲಿ ಕಾರ್ಯಕ್ರಮ ಪ್ರಸಾರವಾಗಿದೆ. 

ಇನ್ನು ಕಾರ್ಯಕ್ರಮ ಸ್ಥಗಿತಗೊಳಿಸುವುದರ ಬಗ್ಗೆ ಟ್ವೀಟ್‌ ಮಾಡಿ ಪೋಸ್ಟ್‌ ಮಾಡಿರುವ  ಕರಣ್ ಜೊಹಾರ್‌, "ಕಾಫಿ ವಿತ್ ಕರಣ್ ಕಾರ್ಯಕ್ರಮ ನನ್ನ ಮತ್ತು ನಿಮ್ಮ ಜೀವನದ ಭಾಗವಾಗಿತ್ತು. ಈ ಶೋ ಹಿಂದಿ ಕಿರುತೆರೆ ರಂಗದಲ್ಲಿ ಹೆಚ್ಚು ಪ್ರಭಾವ ಬೀರಿತ್ತು. ಆದರೆ ಈ ಕಾರ್ಯಕ್ರಮ ಇನ್ನು ಮರಳಿ ಬರುವುದಿಲ್ಲ ಎನ್ನುವುದನ್ನು ಭಾರವಾದ ಹೃದಯದೊಂದಿಗೆ ಹೇಳುತ್ತಿದ್ದೇನೆ" ಎಂದು ಸ್ಪಷ್ಟನೆ ನೀಡಿದ್ದಾರೆ. 

ಶಾರುಖ್ ಖಾನ್ ಮತ್ತು ಕಾಜಲ್ ಮೊದಲ ಎಪಿಸೋಡ್‌ನಲ್ಲಿ ಕರಣ್ ಜತೆ ಭಾಗವಹಿಸಿದ್ದರು. ಆ ಬಳಿಕ ಬಾಲಿವುಡ್ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸೆಲೆಬ್ರಿಟಿಗಳು ಅತಿಥಿಗಳಾಗಿ ಭಾಗವಹಿಸಿದ್ದರು. 

ಇದನ್ನು ಓದಿ: Sonu Nigam: "ಅವರು ಹಿಂದಿಯಲ್ಲಿ ಏಕೆ ಮಾತನಾಡಬೇಕು?": ಗಾಯಕ ಸೋನು ನಿಗಮ್

ಇನ್ನು ಸುದ್ದಿ ತಿಳಿದ ಅಭಿಮಾನಿಗಳು ದುಃಖ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಗಳಾದ ಭೂಮಿ ಪೆಡ್ನೇಕರ್, ತನುಜ್ ವಿರ್ವಾನಿ, ಹುಮಾ ಖುರೇಷಿ , ನೇಹಾ ಭಾಸಿನ್ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಸಹ ಕಾಮೆಂಟ್ ಮಾಡಿ ಬೇಸರ ವ್ತಕ್ಯಪಡಿಸಿದ್ದಾರೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News