Viral Video: ಕಪಿಲ್ ಶರ್ಮಾ ಶೋ ಖ್ಯಾತಿಯ ಚಿಂಕಿ-ಮಿಂಕಿಯಿಂದ 'ನಾಚ್ ಮೇರಿ ರಾಣಿ' ಹಾಡಿನ ಡಾನ್ಸ್

ಕಪಿಲ್ ಶರ್ಮಾ ಷೋನಲ್ಲಿ ಕಾಣಿಸಿಕೊಂಡ ಅವಳಿ ಸಹೋದರಿಯರಾದ ಚಿಂಕಿ ಹಾಗೂ ಮಿಂಕಿ ತನ್ನ ವಿಶೇಷ ಹಾವಭಾವಗಳಿಗಾಗಿ ಹೆಸರುವಾಸಿಯಾಗಿದ್ದಾರೆ. ಈ ಇಬ್ಬರು ಸಹೋದರಿಯರ ಕಾಮಿಡಿ ವಿಡಿಯೋಗಳು ಕೂಡ ಇಂಟರ್ನೆಟ್ ನಲ್ಲಿ ಭಾರಿ ಪ್ರಸಿದ್ಧಿಯನ್ನು ಪಡೆದಿವೆ. ಸದ್ಯ ಈ ಸಹೋದರಿಯರ ಡಾನ್ಸ್ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಚಾರ ಪಡೆದುಕೊಳ್ಳುತ್ತಿದೆ.

Last Updated : Nov 28, 2020, 10:17 AM IST
  • ಚಿಂಕಿ-ಮಿಂಕಿ ತನ್ನ ವಿಶೇಷ ಹಾವಭಾವಗಳಿಗೆ ಹೆಸರುವಾಸಿಯಾಗಿದ್ದಾರೆ.
  • 'ಕಪಿಲ್ ಶರ್ಮಾ ಷೋ'ನಲ್ಲಿ ಈ ಸಹೋದರಿಯರ ಡೈಲಾಗ್ 'ಮುಝೆ ತೋ ಚಾಹಿಯೇ- ಇಸ್ಕಾ ಪತಾ ನಹಿ' ಭಾರಿ ವೈರಲ್ ಆಗಿತ್ತು.
  • ಸದ್ಯ ಈ ಸಹೋದರಿಯರ ಮತ್ತೊಂದು ವಿಡಿಯೋ ವೈರಲ್ ಆಗಿದೆ.
Viral Video: ಕಪಿಲ್ ಶರ್ಮಾ ಶೋ ಖ್ಯಾತಿಯ ಚಿಂಕಿ-ಮಿಂಕಿಯಿಂದ  'ನಾಚ್ ಮೇರಿ ರಾಣಿ' ಹಾಡಿನ ಡಾನ್ಸ್ title=

ಮುಂಬೈ: ದಿ ಕಪಿಲ್ ಶರ್ಮಾ ಷೋನಲ್ಲಿ ಕಾಣಿಸಿಕೊಂಡಿದ್ದ ಅವಳಿ ಸಹೋದರಿಯರಾದ ಚಿಂಕಿ-ಮಿಂಕಿ ತನ್ನ ವಿಶೇಷ ಹಾವಭಾವಗಳಿಗಾಗಿ ಭಾರಿ ಖ್ಯಾತಿ ಪಡೆದಿದ್ದಾರೆ. ಈ ಇಬ್ಬರು ಸಹೋದರಿಯರು ನೋಡಲು ಡಿಟ್ಟೋ ಸೇಮ್ ಆಗಿದ್ದಾರೆ. ಅವರಿಬ್ಬರ ಮಾತನಾಡುವ ಶೈಲಿ ಕೂಡ ಒಂದೇ ತೆರನಾಗಿದೆ. ಅವರಿಬ್ಬರೂ ಪರಸ್ಪರ ಯಾವ ರೀತಿಯ ಹೋಲಿಕೆ ಹೊಂದಿದ್ದಾರೆ ಎಂದರೆ, ಇಬ್ಬರಲ್ಲಿ ಚಿಂಕಿ ಯಾರು ಹಾಗೂ ಮಿಂಕಿ ಯಾರು ಎಂಬುದೇ ಜನರಿಗೆ ಗೊತ್ತಾಗುವುದಿಲ್ಲ. 

ಇದನ್ನು ಓದಿ- Video: ಯುವರತ್ನ'ನ ಪವರ್ ಫುಲ್ ಸ್ಟೆಪ್ ಗೆ ಪುನೀತ್ ರಾಜಕುಮಾರ್ ಅಭಿಮಾನಿಗಳು ಫಿದಾ

ಇತ್ತೀಚಿಗೆ ಈ ಇಬ್ಬರ ಸಯೋದರಿಯರ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಪ್ರಸಿದ್ಧಿಯನ್ನು ಪಡೆದುಕೊಂಡಿವೆ. ಆದರೆ, ಪ್ರಸ್ತುತ ಈ ಅವಳಿ ಸಹೋದರಿಯರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನು ಓದಿ- Viral Video: ಕಡಲು ತೀರದಲ್ಲಿ Transparent Dressನಲ್ಲಿ ಕಂಡು ಬಂದ Nora Fatehi

ಈ ವಿಡಿಯೋದಲ್ಲಿ ಚಿಂಕಿ-ಮಿಂಕಿ ನೋರಾ ಫತೇಹಿ (Nora Fatehi) ಹಾಗೂ ಗುರು ರಂಧಾವಾ ಅವರ ಇತ್ತೀಚಿಗೆ ಬಿಡುಗಡೆಯಾದ 'ನಾಚ್ ಮೇರಿ ರಾಣಿ ರಾಣಿ' ಹಾಡಿಗೆ ಹೆಜ್ಜೆ ಹಾಕಿದ್ದಾಳೆ. ಇವರಿಬ್ಬರ ಡ್ಯಾನ್ಸಿಂಗ್ ಮೂವ್ಸ್ ಗೆ ಅಭಿಮಾನಿಗಳು ಯಾವ ರೀತಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ಎಂದರೆ ಈ ವಿಡಿಯೋ ಯುಟ್ಯೂಬ್ ನಲ್ಲಿ ಭಾರಿ ವೈರಲ್ ಆಗುತ್ತಿದೆ.

ಇದನ್ನು ಓದಿ- Video: ಫ್ರೆಂಡ್ಸ್ ಜೊತೆ ಬೈಕ್ ನಲ್ಲಿ ಜಾಲಿ ರೈಡ್ ಹೊರಟ ಡಿ-ಬಾಸ್..!

ಇದಕ್ಕೂ ಮೊದಲು ಚಿಂಕಿ-ಮಿಂಕಿ 'ದಿ ಕಪಿಲ್ ಶರ್ಮಾ ಷೋ'ನಲ್ಲಿ ಕಾಣಿಸಿಕೊಂಡಿದ್ದರು. ಈ ಷೋ ನಲ್ಲಿ ಈ ಸಹೋದರಿಯರು ಹೇಳಿದ್ದ 'ಮುಝೆ ತೋ ಚಾಹಿಯೇ- ಇಸ್ಕಾ ಪತಾ ನಹಿ' ಭಾರಿ ವೈರಲ್ ಆಗಿತ್ತು.

Trending News