Kantara Teaser Released: ಸ್ಯಾಂಡಲ್‌ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸುತ್ತಿರುವ 'ಕಾಂತಾರ' ಪ್ರೀಕ್ವೆಲ್ ಟೀಸರ್ ರಿಲೀಸ್ ಆಗಿ ಧೂಳೆಬ್ಬಿಸಿದೆ. ಟೀಸರ್ ಸಮೇತ ಚಿತ್ರದ ಮುಹೂರ್ತ ನೆರವೇರಿಸಿದೆ ಚಿತ್ರತಂಡ, ಇದೀಗ ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಘೋಷಿಸಿದ್ದು, ಹೊಂಬಾಳೆ ಸಂಸ್ಥೆ ಬಹಳ ಅದ್ಧೂರಿಯಾಗಿ ಚಿತ್ರವನ್ನು ನಿರ್ಮಾಣ ಮಾಡಲಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ 'ಕಾಂತಾರ' ಸಿನಿಮಾ 350 ಕೋಟಿ ರೂ. ಗಳಿಕೆ ಕಂಡು ಬಾಕ್ಸಾಫೀಸ್ ಶೇಕ್ ಮಾಡಿತ್ತು. ವಿದೇಶಗಳಲ್ಲೂ ಜನ ಕ್ಯೂ ನಿಂತು ಟಿಕೆಟ್ ಖರೀದಿಸಿ ಸಿನಿಮಾ ನೋಡಿದ್ದರು.
ಕಾಂತಾರ ಪ್ರೀಕ್ವೆಲ್ ಬರುತ್ತದೆ ಎಂದಾಗಲೇ ನಿರೀಕ್ಷೆ ಮೂಡಿಸಿ, ಟೀಸರ್ ನೋಡಿದ ಮೇಲೆ ಆ ನಿರೀಕ್ಷೆ ದುಪ್ಪಟ್ಟಾಗಿದೆ. ರಿಷಬ್ ಶೆಟ್ಟಿ ಈ ಬಾರಿ ಮತ್ತೊಂದು ಅದ್ಭುತ ಪ್ರಪಂಚ ತೋರಿಸುವ ಪ್ರಯತ್ನದಲ್ಲಿದ್ದು, ಕದಂಬರ ಸಾಮ್ರಾಜ್ಯದ ಕಾಲಘಟ್ಟಕ್ಕೆ ಕರೆದುಕೊಂಡು ಹೋಗಿ ಪಂಜುರ್ಲಿ, ಗುಳಿಗ ದೈವಗಳ ಹುಟ್ಟಿನ ಕತೆ ಹೇಳುವ ಪ್ರಯತ್ನ ಮಾಡುತ್ತಿರುವಂತೆ ಕಾಣುತ್ತಿದೆ. ಕಾಂತಾರ ಚಾಪ್ಟರ್-1ರಲ್ಲಿ ರಿಷಬ್ ಲುಕ್ ಅಂತೂ ಮೈ ಜುಮ್ ಎನಿಸುವಂತಿದ್ದು, ಫಸ್ಟ್‌ಲುಕ್‌ನಲ್ಲಿ ರಿಷಬ್ ಕಿವಿಗೆ ತೊಟ್ಟಿರುವ ಓಲೆ ಪಂಜರ್ಲಿ ದೈವದ ಕೊಂಬಿನಂತೆ ಕಾಣುತ್ತಿದೆ. ಇನ್ನು ತ್ರಿಶೂಲ, ಕೊಡಲಿ ಹಿಡಿದ ಖಡಕ್ ಲುಕ್ ಅಂತೂ ಹುಬ್ಬೇರಿಸುವಂತಿದ್ದು, ಅಜನೀಶ್ ಲೋಕನಾಥ್ ಬಿಜಿಎಂ ಕಾಡುವಂತಿದೆ. ಒಟ್ಟಾರೆ ಟೀಸರ್ ಟೆಸ್ಟ್‌ನಲ್ಲಿ ರಿಷಬ್ ಫಸ್ಟ್ ಕ್ಲಾಸ್‌ನಲ್ಲಿ ಪಾಸ್ ಆಗಿದ್ದಾರೆ.
ಇದನ್ನೂ ಓದಿ: Kantara -1 teaser: ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಸರಳಪೂಜೆಯೊಂದಿಗೆ ಚಿತ್ರಕ್ಕೆ ಚಾಲನೆ
ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಳಿ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ 'ಕಾಂತಾರ-1' ಸಿನಿಮಾ ಏಕಕಾಲಕ್ಕೆ ರಿಲೀಸ್ ಆಗಲಿದ್ದು, ಸದ್ಯ ಹೊಂಬಾಳೆ ಯೂಟ್ಯೂಬ್ ಚಾನಲ್‌ನಲ್ಲಿ ಒಂದೇ ಒಂದು ಟೀಸರ್ ರಿಲೀಸ್ ಮಾಡಿದ್ದಾರೆ. ಕನ್ನಡದಲ್ಲಿ ಟೀಸರ್ ನೋಡಲು ಸಿಗುತ್ತಿದ್ದು, ಆದರೆ ಪರಭಾಷಿಕರು ನಮ್ಮ ಭಾಷೆಯಲ್ಲಿ ಟೀಸರ್ ಯಾಕೆ ರಿಲೀಸ್ ಮಾಡಿಲ್ಲ ಎಂದು ಕೇಳುತ್ತಿದ್ದಾರೆ. ವಿಶೇಷವೇನೆಂದರೆ ಹೊಂಬಾಳೆ ಸಂಸ್ಥೆ 6 ಭಾಷೆಗಳಲ್ಲಿ ಟೀಸರ್ ಅಪ್‌ಲೋಡ್ ಮಾಡಿದೆ. ಸಾಕಷ್ಟು ಜನರಿಗೆ ಎಲ್ಲಾ ಭಾಷೆಗಳಲ್ಲಿ ಟೀಸರ್ ಬಂದಿರೋದು ಗೊತ್ತಾಗುತ್ತಿಲ್ಲ. ಸೆಟ್ಟಿಂಗ್ಸ್‌ನಲ್ಲಿ ಭಾಷೆ ಬದಲಾವಣೆಯ ಅವಕಾಶ ನೀಡಲಾಗಿದೆ. ಹಾಗಾಗಿ ಇಂಗ್ಲೀಷ್ ಬಿಟ್ಟು 6 ಭಾಷೆಗಳಲ್ಲಿ ಸೆಟ್ಟಿಂಗ್ಸ್ ಬದಲಿಸಿಕೊಂಡು ಟೀಸರ್ ನೋಡಬಹುದಾಗಿದೆ.
ಹೊಂಬಾಳೆ ಸಂಸ್ಥೆ ಪ್ಯಾನ್ ಇಂಡಿಯಾ ಸಿನಿಮಾಗಳ ಟೀಸರ್ ಅನ್ನು ಒಂದೇ ಭಾಷೆಯಲ್ಲಿ ರಿಲೀಸ್ ಮಾಡುವ ಪ್ರಯತ್ನ ಮಾಡುತ್ತಿದ್ದು, 5 ಭಾಷೆಗಳಿಗೆ 5 ಬೇರೆ ಬೇರೆ ವಿಡಿಯೋಗಳನ್ನು ಶೇರ್ ಮಾಡುವ ಬದಲು ಒಂದೇ ವಿಡಿಯೋದಲ್ಲಿ 5 ಭಾಷೆಗಳ ಟೀಸರ್ ತೋರಿಸುವ ಪ್ರಯತ್ನ ಈಗ 'ಕಾಂತಾರ' ಟೀಸರ್‌ನಲ್ಲಿ ನೋಡಬಹುದು. ಮುಂದೆ ಇದೇ ಪ್ರಯತ್ನವನ್ನು 'ಸಲಾರ್' ಟ್ರೈಲರ್‌ನಲ್ಲೂ ಮಾಡುವಂತೆ ಕಾಣುತ್ತಿದ್ದು, ಒಂದೇ ಟೀಸರ ವಿಡಿಯೋ ಶೇರ್ ಮಾಡಿ 5 ಭಾಷೆಗಳಲ್ಲಿ ಆಡಿಯೋ ಸೆಟ್ಟಿಂಗ್ಸ್ ಬದಲಿಸಿಕೊಂಡು ನೋಡುವ ಕೊಡುವಂತೆ ಕಾಣುತ್ತಿದೆ. ಆ ಮೂಲಕ ಹೊಸ ಬೆಳವಣಿಗೆಗೆ ಹೊಂಬಾಳೆ ಸಂಸ್ಥೆ ಕೈಹಾಕಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.