Kantara Teaser: ಕಾಂತಾರ ಟೀಸರ್‌ ರಿಲೀಸ್‌! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ?

Kantara Teaser: 'ಕಾಂತಾರ' ಚಿತ್ರದ ಟೈಟಲ್ ಮತ್ತು ಫಸ್ಟ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿತ್ತು. ಈಗ‌ ಚಿತ್ರದ ಟೀಸರ್ ರಿಲೀಸ್‌ ಆಗಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.

Written by - Chetana Devarmani | Last Updated : Apr 14, 2022, 05:50 PM IST
  • ಕೊರೊನಾ ಬಳಿಕ ಇದೀಗ ಸಾಲು, ಸಾಲಾಗಿ ಸಿನಿಮಾಗಳು ತೆರೆಗೆ ಬರುತ್ತಿವೆ
  • ನಿರ್ದೇಶಕ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಚಿತ್ರ
  • 'ಕಾಂತಾರ' ಚಿತ್ರದ ಟೀಸರ್ ರಿಲೀಸ್‌
Kantara Teaser: ಕಾಂತಾರ ಟೀಸರ್‌ ರಿಲೀಸ್‌! ದೆವ್ವದ ಕಥೆ ಹೇಳಲು ಬರುತ್ತಿದ್ದರಾ ರಿಷಬ್ ಶೆಟ್ಟಿ? title=
ಕಾಂತಾರ

ಕೊರೊನಾ ಬಳಿಕ ಇದೀಗ ಸಾಲು, ಸಾಲಾಗಿ ಸಿನಿಮಾಗಳು ತೆರೆಗೆ ಬರುತ್ತಿವೆ.  ನಿರ್ದೇಶಕ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿದ ಕಾಂತಾರ ಚಿತ್ರ ಬಿಡುಗಡೆ ಸಜ್ಜಾಗಿದೆ. ಇದೀಗ 'ಕಾಂತಾರ' ಚಿತ್ರದ ಟೀಸರ್ ರಿಲೀಸ್‌ ಆಗಿದ್ದು, ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹೊತ್ತು ಬಂದಿದೆ.

ಇದನ್ನೂ ಓದಿ: KGF: Chapter 2: ಕನ್ನಡದ ‘ರಾಕಿ’ ಅಬ್ಬರಕ್ಕೆ ಬಾಲಿವುಡ್ ಶೇಕ್ ಶೇಕ್..!

'ಕಾಂತಾರ' ಚಿತ್ರದ ಟೈಟಲ್ ಮತ್ತು ಫಸ್ಟ್ ಮೂಲಕ ಸಿನಿಪ್ರಿಯರಲ್ಲಿ ಕುತೂಹಲ ಕೆರಳಿಸಿತ್ತು. ಈಗ‌ ಚಿತ್ರದ ಟೀಸರ್ ರಿಲೀಸ್‌ ಆಗಿದ್ದು, ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದೆ. ಈ ಚಿತ್ರಕ್ಕೂ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡಿದೆ.

ಚಿತ್ರದಲ್ಲಿರುವ ಪಾತ್ರಗಳನ್ನು ಅಚ್ಚುಕಟ್ಟಾಗಿ ಟೀಸರ್‌ನಲ್ಲಿ ರಿವೀಲ್ ಮಾಡಲಾಗಿದೆ.  ನಟ ರಿಷಬ್ ಶೆಟ್ಟಿ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಅಚ್ಚುತ್ ಕುಮಾರ್, ಕಿಶೋರ್ ಸೇರಿದಂತೆ ಹಲವು ಪಾತ್ರಗಳನ್ನು ಪರಿಚಯ ಮಾಡಲಾಗಿದೆ.

ಇದನ್ನೂ ಓದಿ: ಕೆಜಿಎಫ್ 2 ಅಧೀರಾಗೆ ಸೇರಿದ್ದು ಎಂದ ಸಂಜಯ್ ದತ್ ಪತ್ನಿ..!

'ಕಾಂತಾರ'ದ ಮೂಲಕ ನಿರ್ದೇಶಕ ‌ರಿಷಬ್ ಶೆಟ್ಟಿ ಹೊಸ ಕಥೆಯನ್ನು ಹೇಳಲು ಹೊರಟಿದ್ದಾರೆ. ಒಂದು ಸಂಸ್ಕ್ರತಿ, ಒಂದು ಪ್ರಾಂತ್ಯದ ಜನರ ಜೀವನ, ಕಟ್ಟು ಪಾಡುಗಳನ್ನು ಹೇಳಲು ಹೊರಟಿದ್ದಾರೆ ಎನ್ನುವುದನ್ನು ಟೀಸರ್ ರಿವೀಲ್ ಮಾಡಿದೆ. ಇದರೊಂದಿಗೆ ಒಂದಷ್ಟು, ದ್ವೇಷ, ಜಗಳ, ಪ್ರೀತಿ, ಹೀರೊಯಿಸಂ ಜತೆ ರಿಷಬ್ ಶೆಟ್ಟಿಯ ಸಿಂಪಲ್ ಎಂಟ್ರಿ, ಮ್ಯಾನರಿಸಂ ಎಲ್ಲರ ಗಮನ ಸೆಳೆಯುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News