ಕನ್ನಡತಿ ಸದ್ಯ ಎಲ್ಲೆಲ್ಲೂ ಈ ಧಾರಾವಾಹಿಯ ಹವಾ ಬಲು ಜೋರಾಗಿದೆ. ಈ ಕಥೆ ಶುರುನಲ್ಲಿಯೇ ತನ್ನ ಟೈಟಲ್ ಮೂಲಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಮತ್ತೊಂದು ವಿಶೇಷ ಅಂದ್ರೆ ಧಾರಾವಾಹಿಗಳನ್ನ ನೋಡದ ಅದೇಷ್ಟು ಜನ ಈ ಸೀರಿಯಲ್‌ನ್ನು ತಪ್ಪದೆ ವೀಕ್ಷಿಸ್ತಾರೆ. ಅಷ್ಟರ ಮಟ್ಟಿಗೆ ಈ ಕಥೆ ಸದ್ದು ಮಾಡ್ತಾಯಿದೆ. ಈ ಧಾರಾವಾಹಿಯ ಕಥೆ ತುಂಬಾನೆ ವಿಭಿನ್ನವಾಗಿದೆ ಜೊತೆಗೆ ಪ್ರತಿಯೊಂದು ಪಾತ್ರಕ್ಕೂ ಅದರದ್ದೇ ಆದ ಮಹತ್ವವನ್ನ ನೀಡಲಾಗಿದೆ. ಕನ್ನಡತಿ ಎಂದ ಕೂಡಾ ಥಟ್ ಅಂತ ತಲೆಗೆ ಬರೋದು ನಮ್ ಮಲೆನಾಡ ಹುಡುಗಿ ಭುವಿ. ಅಬ್ಬಬ್ಬಾ ಆಕೆಯ ಅಚ್ಚ ಕನ್ನಡ ನೋಡುಗರಿಗೆ ಖುಷಿ ನೀಡುತ್ತೆ. ಜೊತೆಗೆ ಎಷ್ಟೋ ಪದಗಳ ಉಚ್ಚಾರಣೆ ಹಾಗೂ ಅರ್ಥವನ್ನು ಅಚ್ಚುಕಟ್ಟಾಗಿ ತಿಳಿಸುತ್ತಾರೆ.
ಇದನ್ನೂ ಓದಿ: ಬೆಳ್ಳಿಪರದೆ ಮೇಲೆ ಜೊತೆಯಾಗಲಿದ್ದಾರೆ ಶಿವಣ್ಣ ಮತ್ತು ಪ್ರಭುದೇವ..!
ಇನ್ನೂ ಈ ಸೀರಿಯಲ್‌ನಲ್ಲಿ ಬರಿ ಕನ್ನಡ ಪಾಠ ಹೇಳಿಕೊಡೋದು ಪಾತ್ರವಲ್ಲದೆ, ಒಂದು ಸುಂದರ ಕುಟುಂಬ ಅಣ್ಣ-ತಂಗಿ, ಅಮ್ಮ-ಮಗ, ಅಣ್ಣ-ತಮ್ಮ ನಡುವೆ ಇರುವ ಪ್ರೀತಿ ಭಾಂದವ್ಯ, ಮುದ್ದು ಜೋಡಿ ಹಕ್ಕಿಗಳ ಸ್ನೇಹ, ಆ ಜೋಡಿಯನ್ನು ಒಂದು ಮಾಡಲು ಒಂದಿಷ್ಟು ಜನರ ಪ್ರಯತ್ನ ಇದೆಲ್ಲದರ ಜೊತೆಗೆ ಈ ಕುಟುಂಬವನ್ನು ಛಿದ್ರ ಮಾಡುವ ಪ್ರಯತ್ನದಲ್ಲಿರುವ ವಿಲನ್‌ಗಳು. ಆಹಾ ಎಲ್ಲವೂ ಎಳೆ ಎಳೆಯಾಗಿ ಬಿಡಿಸಿ ತಿಳಿಸಿದ್ದಾರೆ. ನೋಡುಗರಿಗೆ ಈ ಧಾರಾವಾಹಿ ತುಂಬಾನೆ ಇಷ್ಟವಾಗಿದೆ.
ಇಷ್ಟೆಲ್ಲಾ ಸದ್ದು ಮಾಡುತ್ತಿರುವ ಕನ್ನಡತಿ ಧಾರಾವಾಹಿಯ ತಂಡ ಸದ್ಯ ಸಖತ್ ಖುಷಿಯಲ್ಲಿದೆ. ಏನಪ್ಪಾ ಅಂದ್ರೆ ಈ ಧಾರಾವಾಹಿ ನೂರಲ್ಲ, ಇನ್ನೂರಲ್ಲ, ಬರೊಬ್ಬರಿ 500 ಎಪಿಸೋಡ್‌ಗಳನ್ನ ಭರ್ಜರಿಯಾಗಿ ಪೂರೈಸಿದೆ. ಈ ಖುಷಿಯನ್ನು ಕೇಕ್ ಕತ್ತರಿಸುವ ಮೂಲಕ ಕನ್ನಡತಿ ಟೀಮ್ ಸೆಲೆಬ್ರೇಟ್ ಮಾಡಿದೆ. ಇದರ ಜೊತೆಗೆ ಕನ್ನಡತಿ ಅಭಿಮಾನಿಗಳು 500ರ ಸಂಭ್ರಮಕ್ಕೆ ಕಮೆಂಟ್‌ಗಳ ಮೂಲಕ ಶುಭ ಹಾರೈಸುತ್ತಿದ್ದಾರೆ.
ಕನ್ನಡತಿ ಧಾರಾವಾಹಿಯಲ್ಲಿ ಮುಖ್ಯವಾಗಿ ಬರುವ ಅಂಶವೆಂದರೆ ʼಸರಿಗನ್ನಡಂ ಗೆಲ್ಗೆʼ.ಅದೇಷ್ಟೊ ಪರಭಾಷೆಯ ಶಬ್ದಗಳನ್ನು ನಾವೂ ದಿನ ನಿತ್ಯ ಬಳಸುತ್ತೇವೆ. ಆದ್ರೆ ಆ ಪದದ ಬಗ್ಗೆ ನಮಗೆ ಅಷ್ಟೊಂದು ಅರಿವಿರುವುದಿಲ್ಲ. ಇಲ್ಲಿ ಅಂತಹ ಶಬ್ದಗಳನ್ನು ಆಯ್ಕೆ ಮಾಡಿ ಆ ಪದ ಮೂಲ ಯಾವ ಭಾಷೆ, ಅದರ ಕನ್ನಡ ಅರ್ಥವೇನು ಹಾಗೂ ಹೇಗೆ ಉಚ್ಚಾರಣೆ ಮಾಡಬೇಕು ಎಂಬುವುದರ ಬಗ್ಗೆ ತಿಳಿಸಿಕೊಡುತ್ತಾರೆ. ಇದುವೇ ಈ ʼಸರಿಗನ್ನಡಂ ಗೆಲ್ಗೆʼಯ ಉದ್ದೇಶವಾಗಿದೆ. ವಿಶೇಷ ಅಂದ್ರೆ ಈ ಸಂಚಿಕೆಯನ್ನ ತಪ್ಪದೆ ವಿಕ್ಷೀಸುವ ಅದೆಷ್ಟೊ ಮಂದಿಯಿದ್ದಾರಂತೆ ಹಾಗೂ ಈ ಸಂಚಿಕೆಯನ್ನು ರೂಪಿಸುವ ಹಿಂದೆ ಅದೆಷ್ಟು ಜನರ ಪರಿಶ್ರಮವಿದೆಯಂತೆ. ಒಂದು ರಿರ್ಸಚ್ ಟೀಮ್ ಕೂಡಾ ಇದೆಯಂತೆ. ನಮ್ ರಂಜಿನಿ ರಾಘವನ್ ಅವ್ರ ಸ್ಪಷ್ಟ ಕನ್ನಡ ನೋಡಿ ಜನ ಫಿದಾ ಆಗಿದ್ದಾರೆ ಹಾಗೂ ಉತ್ತಮ ಕನ್ನಡ ಮಾತನಾಡುವ ಪ್ರಯತ್ನವನ್ನು ಕೂಡಾ ಜನ ಮಾಡ್ತಿದ್ದಾರಂತೆ.
ಸರಿಗನ್ನಡಂ ಗೆಲ್ಗೆ ಸಂಚಿಕೆಯಲ್ಲಿ ವಾರಕ್ಕೆ ಆರು ಶಬ್ದಗಳಂತೆ ಅದರ ಬಗ್ಗೆ ಕಂಪ್ಲೀಟ್ ಆಗಿ ತಿಳಿಸ್ತಾರೆ. ವಾರಕ್ಕೆ ಆರು ಪದಗಳಂತೆ ತಿಂಗಳಿಗೆ 312 ಪದಗಳ ಪರಿಚಯ ಮಾಡಿಕೊಡುವ ಪ್ರಯತ್ನವನ್ನು ಈ ತಂಡ ಮಾಡುತ್ತಿದೆ. ಅವ್ರ ಈ ವಿಭಿನ್ನ ಪ್ರಯತ್ನ ಕೂಡಾ ಸಕ್ಸಸ್ ಆಗಿದೆ. ಮತ್ತೊಂದು ವಿಚಾರ ಅಂದ್ರೆ ನಮ್ಮ ಕನ್ನಡ ಧಾರವಾಹಿ ಬೇರೆ ಭಾಷೆಯಲ್ಲಿ ಕೂಡಾ ಡಬ್ ಆಗ್ತಾಯಿದೆ. ಕನ್ನಡಿಗರ ಹವಾ ಇತರೆ ರಾಜ್ಯದಲ್ಲೂ ಸದ್ದು ಮಾಡ್ತಾಯಿದೆ.
ಇದನ್ನೂ ಓದಿ: ʼಡಿಯರ್ ವಿಕ್ರಮ್’ ಟ್ರೇಲರ್ ಬಿಡುಗಡೆ: ಈ ಓಟಿಟಿಯಲ್ಲಿ ಬರಲಿದೆ ನೀನಾಸಂ ಸತೀಶ್ ಅಭಿನಯದ ಸಿನಿಮಾ!
ಒಟ್ಟಿನಲ್ಲಿ ಕನ್ನಡತಿ ತಂಡ ಶುರುವಿಂದ ಇಲ್ಲಿಯವರೆಗೂ ಪ್ರತಿ ವರ್ಗದಲ್ಲೂ ಟಾಪ್‌ನಲ್ಲಿಯೆ ಇದೆ. ಸದ್ಯ 500ರ ಸಂಭ್ರಮದಲ್ಲಿರುವ ಕನ್ನಡತಿ ಆಂಡ್ ಟೀಮ್‌ಗೆ ನಮ್ ಕಡೆಯಿಂದ ಕಗ್ರಾಂಟ್ಸ್. ಮುಂದೆ ಕೂಡಾ ಹೀಗೇ ಸಾಕಷ್ಟು ಎಪಿಸೋಡ್‌ಗಳ ಮೂಲಕ ಪ್ರೇಕ್ಷಕರನ್ನ ರಂಜಿಸಲಿ ಎಂಬುವುದು ನಮ್ಮ ಆಶಯ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.