ಕನ್ನಡದ ಜನಪ್ರಿಯ ಕಿರುತೆರೆ ಜೋಡಿಗೆ ಈಗ ಕಂಕಣ ಭಾಗ್ಯ...!

Written by - CHARITHA PATEL | Edited by - Manjunath N | Last Updated : May 13, 2022, 03:40 PM IST
  • ಸದ್ಯ ಈ ಎಲ್ಲ ನಟ ನಟಿಯರು ಬೇರೇ ಬೇರೇ ಕೆಲಸಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ ಕೂಡಾ.. ಇದೀಗಾ ಮತ್ತೊಂದು ಹೊಸ ವಿಚಾರ ಎಲ್ಲಡೆ ಸದ್ದು ಮಾಡ್ತಾಯಿದೆ..
  • ಅದೇನಪ್ಪಾ ಅಂದ್ರೆ, ತನು ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಐಶ್ವರ್ಯ ಸದ್ಯ ಹೊಸ ಜೀವನಕ್ಕೆ ಕಾಲಿಡುವ ತಯಾರಿಯಲ್ಲಿದ್ದಾರೆ..
ಕನ್ನಡದ  ಜನಪ್ರಿಯ ಕಿರುತೆರೆ ಜೋಡಿಗೆ ಈಗ ಕಂಕಣ ಭಾಗ್ಯ...!  title=

ಒಂದು ಟೈಮ್‌ನಲ್ಲಿ ಕನ್ನಡದ ವಿಭಿನ್ನ ಕಥಾಹಂದರ ಧಾರವಾಹಿಗಳ ಪೈಕಿ ಪ್ರೇಕ್ಷಕರಿಗೆ ಅಥಿ ಹೆಚ್ಚು ಹುಚ್ಚೆಬ್ಬಿಸಿದಂತ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿ ಕೂಡಾ ಒಂದು..ಅಬ್ಬಬ್ಬ ಸತತ ಆರು ವರ್ಷಗಳ ಕಾಲ ನೋಡಿಗರಿಗೆ ಥ್ರಿಲ್ಲ್‌, ಫನ್‌,ಎಮೋಶನ್‌,ಫ್ಯಾಮಿಲಿ ಸೆಂಟಿಮೆಂಟ್ ಈ ಎಲ್ಲಾ ಜಾನರ್‌ಗಳನ್ನ ಒಳಗೊಂಡು ನೋಡುಗರಿಗೆ ಫುಲ್‌ ಪ್ಯಾಕ್ದ್  ಎಂಟರ್‌ಟೈನ್‌ಮೆಂಟ್‌ ನೀಡಿದ ಧಾರವಾಹಿ ಅಂತಾ ಹೇಳಿದ್ರೆ ತಪ್ಪಾಗಲ್ಲ..

ಅಗ್ನಿಸಾಕ್ಷಿ ಧಾರವಾಹಿಯ ಎಲ್ಲಾ ಪಾತ್ರಗಳು ಕೂಡಾ ಇಂದಿಗೂ ಫೇಮಸ್‌ ಸಿದ್ದಾರ್ಥ್‌,ಅಖಿಲ್‌ ಸನ್ನಿದಿ, ಮಾಯ ಅಂಜಲಿ, ಚಂದ್ರಿಕಾ, ತನು ಹೀಗೇ ಪ್ರತಿಯೊಂದು ಪಾತ್ರಕ್ಕು ಫ್ಯಾನ್‌ ಫಾಲೋವರ್ಸ್‌ ಇದ್ದಾರೆ..

No description available.

ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!

ಸದ್ಯ ಈ ಎಲ್ಲ ನಟ ನಟಿಯರು ಬೇರೇ ಬೇರೇ ಕೆಲಸಗಳಲ್ಲಿ ಸಖತ್‌ ಬ್ಯುಸಿಯಾಗಿದ್ದಾರೆ ಕೂಡಾ.. ಇದೀಗಾ ಮತ್ತೊಂದು ಹೊಸ ವಿಚಾರ ಎಲ್ಲಡೆ ಸದ್ದು ಮಾಡ್ತಾಯಿದೆ.. ಅದೇನಪ್ಪಾ ಅಂದ್ರೆ, ತನು ಪಾತ್ರದ ಮೂಲಕ ಪ್ರೇಕ್ಷಕರಿಗೆ ಹತ್ತಿರವಾದ ನಟಿ ಐಶ್ವರ್ಯ ಸದ್ಯ ಹೊಸ ಜೀವನಕ್ಕೆ ಕಾಲಿಡುವ ತಯಾರಿಯಲ್ಲಿದ್ದಾರೆ.. 

ಹೌದು ಇತ್ತಿಚೆಗಷ್ಟೆ ನಟಿ ಐಶ್ವರ್ಯ ಹಾಗೂ ನಟ ವಿನಯ್ ಗುರು ಹಿರಿಯರ ಸಮ್ಮುಖದಲ್ಲಿ ಎಂಗೇಜ್ಮೆಂಟ್ ​ ಮಾಡಿಕೊಂಡಿದ್ದರು.. ಇದೀಗ ಮೇ 19ರಂದು ಐಶ್ವರ್ಯ ತಾವು ಪ್ರೀತಿಸಿದ ಹುಡುಗನ ಜೊತೆ ಸಪ್ತಪದಿ ತುಳಿಯಲು ಸಜ್ಜಾಗಿದ್ದಾರೆ.. ಇನ್ನೂ ಮದುವೆ ಅಂದಾಕ್ಷಣ ಕಪಲ್ಸ್‌ ಫೋಟೋ ಶೂಟ್‌ ಮಾಡಿಸೋದು ಈಗಿನ ಟ್ರೆಂಡ್‌ ಆಗಿದೆ.. ಅದರಲ್ಲೂ ಸೆಲಬ್ರೆಟಿ ಜೋಡಿ ಅಂದ್ರೆ ಕಮ್ಮಿನಾ.. ಅಬ್ಬಬ್ಬ ವಿನಯ್‌ ಹಾಗೂ ಐಶ್ವರ್ಯ ಕೂಡಾ ಸೂಪರ್‌ ಆಗಿ ಪ್ರೀ ವೆಡ್ಡಿಂಗ್‌ ಶೂಟ್‌ ಮಾಡಿಸಿದ್ದು ಜೋಡಿ ಸಖತ್‌ ಆಗಿ ಕಾಣಿಸಿದ್ದಾರೆ..ಅತ್ತ ಹಾಟ್‌ ಲುಕ್‌ಗೂ ಸೈ ಟ್ರೇಡಿಶನಲ್‌ ವೇರ್‌ನಲ್ಲು ಸೂಪರ್‌ ನಮ್‌ ಐಶ್ವರ್ಯ ಅಂತೂ ತಮ್ಮ ಹುಡುಗನ ಜೊತೆ ಮುದ್ದಾಗಿ ಕಾಣಿಸಿದ್ದಾರೆ.. ಸದ್ಯ ಈ ಫೋಟೊಗಳು ಸೋಶಿಲ್‌ ಮೀಡಿಯಾದಲ್ಲಿ ಸದ್ದು ಮಾಡ್ತಾ ಇವೆ..

No description available.

ಇನ್ನು ನಟ ವಿನಯ್​ ಸಹ ಹಲವು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.ಮಹಾದೇವಿ, ಜೀವನದಿ, ಅಗ್ನಿಸಾಕ್ಷಿ, ಮಹಾಸತಿ ಹೀಗೆ ಹಲವು ಸೀರಿಯಲ್​ಗಳಲ್ಲಿ ವಿನಯ್ ಅಭಿನಯಿಸಿದ್ದಾರೆ ಕನ್ನಡತಿ ಧಾರಾವಾಹಿಯಲ್ಲಿ ವಿನಯ್​ ಬ್ಯುಸಿ ಆಗಿದ್ದಾರೆ. ಇವರಿಬ್ಬರು ಒಟ್ಟಿಗೆ ತಮ್ಮ ವೃತ್ತಿ ಜೀವನ ಶುರುಮಾಡಿದ ಈ ಜೋಡಿ,ಸಾಗರ್​ ಪುರಾಣಿಕ್​​ ಅವರ ನಿರ್ಮಾಣದ ಮಹಸತಿ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ರು.ಇನ್ನೂ ಮತ್ತೊಂದು ವಿಚಾರ ಅಂದ್ರೆ ಐಶ್ವರ್ಯಾರಂತೆ ವಿನಯ್ ಕೂಡ ಉತ್ತರ ಕರ್ನಾಟಕದವರು. ಅವರಿಬ್ಬರು ಬಹುಕಾಲದ ಸ್ನೇಹಿತರು. 'ಮಹಾಸತಿ' ನಂತರ ಕೂಡ ವಿನಯ್, ಐಶ್ವರ್ಯಾ ಉತ್ತಮ ಸ್ನೇಹಿತರಾಗಿದ್ದರು. ಲಾಕ್‌ಡೌನ್ ಟೈಮ್‌ನಲ್ಲಿ ನಾಗರಾಜ್ ಪಾಟೀಲ್ ಅವರ ನಿರ್ದೇಶನದ  ಕಿರುಚಿತ್ರ ಒಂದರಲ್ಲಿ  ಐಶ್ವರ್ಯಾ ನಟಿಸಿದ್ರೂ, ವಿಶೇಷ ಅಂದ್ರೆ ವಿನಯ್ ಆ ಚಿತ್ರದ ಹೀರೋ ಆಗಿದ್ದರು.

ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ

ತಮಿಳಿನಲ್ಲಿ ಒಂದು ಧಾರಾವಾಹಿಯಲ್ಲಿ 1 ವರ್ಷ ಐಶ್ವರ್ಯಾ ಸಾಲಿಮಠ ನಟಿಸಿದ್ದರು.ಚಂದು ಬಿ ಗೌಡ ನಟನೆಯ 'ತಮಟೆ' ಸಿನಿಮಾದಲ್ಲಿಯೂ ಅವರು ಬಣ್ಣ ಹಚ್ಚಿದ್ದರು. 'ಯಾರಿವಳು', 'ನಾಗಕನ್ನಿಕೆ' ಧಾರಾವಾಹಿಗೂ ಕೂಡ ಐಶ್ವರ್ಯಾ ಡಬ್ಬಿಂಗ್ ಮಾಡುತ್ತಿದ್ದಾರೆ. ಸದ್ಯ ಸಾಂಡಲ್‌ವುಡ್‌ ಸ್ಮಾಲ್‌ ಸ್ಕ್ರೀನ್‌ನಲ್ಲಿ ಈ ಜೋಡಿ ಫುಲ್‌ ಬ್ಯುಸಿಯಾಗಿದೆ..

ಒಟ್ಟಿನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನವ ಜೋಡಿಗೆ ನಮ್‌ ಕಡೆಯಿಂದ ಕೂಡಾ ಬೆಸ್ಟ್‌ ವಿಶ್ಶಸ್‌...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News