'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' : ಹೇಗಿದೆ ಗೊತ್ತಾ ಹೊಸಬರ ಟ್ರೈಲರ್‌?

ಇದೀಗ ಹೊಸಬರ ತಂಡದ ಮತ್ತೊಂದು ಪ್ರಯತ್ನದ ಫಲವಾಗಿ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ.

Written by - Malathesha M | Last Updated : Feb 17, 2022, 01:34 PM IST
  • ಕನ್ನಡ ಚಿತ್ರರಂಗದಲ್ಲಿ ಹೊಸಬರ ಹವಾ ಶುರುವಾಗಿದೆ
  • ಹೊಸ ತಂಡಗಳ ಪ್ರಯತ್ನಕ್ಕೆ ಸಾಲು ಸಾಲು ಯಶಸ್ಸು ಸಿಗುತ್ತಿದೆ
  • ಲವ್, ಸಸ್ಪೆನ್ಸ್‌ ಮತ್ತು ಆಕ್ಷನ್ ಒಳಗೊಂಡ ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ಯ ಸಖತ್ ಸೌಂಡ್ ಮಾಡುತ್ತಿದೆ.
'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' : ಹೇಗಿದೆ ಗೊತ್ತಾ ಹೊಸಬರ ಟ್ರೈಲರ್‌? title=

ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಹೊಸಬರ ಹವಾ ಶುರುವಾಗಿದೆ. ಹೊಸ ತಂಡಗಳ ಪ್ರಯತ್ನಕ್ಕೆ ಸಾಲು ಸಾಲು ಯಶಸ್ಸು ಸಿಗುತ್ತಿದೆ. ಇದೀಗ ಹೊಸಬರ ತಂಡದ ಮತ್ತೊಂದು ಪ್ರಯತ್ನದ ಫಲವಾಗಿ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಸಿನಿಮಾದ ಟ್ರೈಲರ್‌ ರಿಲೀಸ್‌ ಆಗಿದೆ.

ವಿಶೇಷ ಏನಪ್ಪಾ ಅಂದ್ರೆ 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾ(Radha Searching Ramana Missing)ದ ಟ್ರೇಲರ್‌ ಅನ್ನು ಮಾಜಿ ಪೊಲೀಸ್‌ ಕಮಿಷನರ್‌ ರಿಲೀಸ್‌ ಮಾಡಿದ್ದಾರೆ. ಇನ್ನು ಹೊಸಬರ ತಂಡಕ್ಕೆ ನಟ ವಸಿಷ್ಠ ಸಿಂಹ ಕೂಡ ಸಾಥ್‌ ನೀಡಿದ್ದಾರೆ. ಲವ್, ಸಸ್ಪೆನ್ಸ್‌ ಮತ್ತು ಆಕ್ಷನ್ ಒಳಗೊಂಡ ಟ್ರೇಲರ್ ಯೂಟ್ಯೂಬ್ ನಲ್ಲಿ ಸದ್ಯ ಸಖತ್ ಸೌಂಡ್ ಮಾಡುತ್ತಿದೆ.

ಇದನ್ನೂ ಓದಿ : ಮತ್ತೆ ಬಂದರು ಮೀರಾ ಜಾಸ್ಮಿನ್ ..! ಹೇಗಿದೆ ಗೊತ್ತಾ ಹೊಸ ಲುಕ್..?

ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ

ಮೈಸೂರು ಮೂಲದ ಅಮೇರಿಕನ್‌ ಪ್ರಜೆ ಯಶಸ್ವಿ ಶಂಕರ್ ‌ ಈ ಸಿನಿಮಾ ನಿರ್ಮಾಣ‌ ಮಾಡಿದ್ದಾರೆ. 'ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್' ಮೂಲಕ ರಾಘವ್(Raghav) ಹೀರೋ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಎಂ.ಎನ್. ಶ್ರೀಕಾಂತ್ ನಿರ್ದೇಶಕ ಮಾಡಿರುವ ಚಿತ್ರದಲ್ಲಿ ಸಂಜನಾ ಬುರ್ಲಿ ನಾಯಕಿಯಾಗಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಈ ಮೂಲಕ ಚಂದನವನದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳ ಲಿಸ್ಟ್‌ಗೆ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ.

No description available.

ಅಂದಹಾಗೆ ಸಿನಿಮಾದಲ್ಲಿ ರಾಘವ್ ಕಾಲೇಜ್ ಬಾಯ್(College Boy) ಪಾತ್ರ ಮಾಡಿದ್ದಾರೆ. ಸಿನಿಮಾ ಪಾತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ. ಆಕ್ಟಿಂಗ್, ಡ್ಯಾನ್ಸ್ ಕಲಿತಿದ್ದಾರೆ. ತಿಂಗಳುಗಳ ಕಾಲ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾಗೆ ವಿಶ್ವಜಿತ್ ರಾವ್ ಛಾಯಾಗ್ರಾಹಕರಾಗಿದ್ದು, ಸಿಕ್ಕಾಪಟ್ಟೆ ಕುತೂಹಲ ಹುಟ್ಟಿಸಿದೆ.‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News