Pogaru Movie: 'ಪೊಗರು' ಸಿನಿಮಾದ ಬಗ್ಗೆ 'ಗುಡ್ ನ್ಯೂಸ್' ನೀಡಿದ ಆ್ಯಕ್ಷನ್‌ ಪ್ರಿನ್ಸ್..!

ಫೆಬ್ರವರಿ 19ರಂದು ಪೊಗರು ಪ್ರದರ್ಶನ! ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿದ್ದ ಧ್ರುವ ಸರ್ಜಾ, 'ಪೊಗರು' ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೆಬ್ರವರಿ 19ರ ಶುಕ್ರವಾರ ಈ ಸಿನಿಮಾವನ್ನು ತೆರೆಗೆ ತರುವುದಾಗಿ ಹೇಳಿಕೊಂಡಿದ್ದಾರೆ.

Last Updated : Jan 18, 2021, 09:07 PM IST
  • 'ಆ್ಯಕ್ಷನ್‌ ಪ್ರಿನ್ಸ್' ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ತೆರೆಕಂಡಿದ್ದು 2017ರ ಸೆಪ್ಟೆಂಬರ್‌ನಲ್ಲಿ! ಅವರನ್ನು ತೆರೆಮೇಲೆ ಅಭಿಮಾನಿಗಳು ಸಖತ್‌ ಮಿಸ್ ಮಾಡಿಕೊಳ್ಳುತ್ತಿದ್ದಾರೆ.
  • ಧ್ರುವ ನಟನೆಯ 4ನೇ ಸಿನಿಮಾ 'ಪೊಗರು' ಮೇಲೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
  • ಸಿನಿಮಾ ಕೂಡ ಸಾಕಷ್ಟು ಕಾರಣಗಳಿಂದ ತಡವಾಯ್ತು. ಸದ್ಯ ಆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತ ಇದ್ದವರಿಗೆ ನಟ ಧ್ರುವ ಸರ್ಜಾ ಒಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ!
Pogaru Movie: 'ಪೊಗರು' ಸಿನಿಮಾದ ಬಗ್ಗೆ 'ಗುಡ್ ನ್ಯೂಸ್' ನೀಡಿದ ಆ್ಯಕ್ಷನ್‌ ಪ್ರಿನ್ಸ್..! title=

ಬೆಂಗಳೂರು: 'ಆ್ಯಕ್ಷನ್‌ ಪ್ರಿನ್ಸ್' ಧ್ರುವ ಸರ್ಜಾ ಅಭಿನಯದ 'ಭರ್ಜರಿ' ಸಿನಿಮಾ ತೆರೆಕಂಡಿದ್ದು 2017ರ ಸೆಪ್ಟೆಂಬರ್‌ನಲ್ಲಿ! ಅವರನ್ನು ತೆರೆಮೇಲೆ ಅಭಿಮಾನಿಗಳು ಸಖತ್‌ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿಯೇ ಧ್ರುವ ನಟನೆಯ 4ನೇ ಸಿನಿಮಾ 'ಪೊಗರು' ಮೇಲೆ ಫ್ಯಾನ್ಸ್ ಸಖತ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆ ಸಿನಿಮಾ ಕೂಡ ಸಾಕಷ್ಟು ಕಾರಣಗಳಿಂದ ತಡವಾಯ್ತು. ಸದ್ಯ ಆ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತ ಕಾಯುತ್ತ ಇದ್ದವರಿಗೆ ನಟ ಧ್ರುವ ಸರ್ಜಾ ಒಂದು ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ!

ಫೆಬ್ರವರಿ 19ರಂದು ಪೊಗರು ಪ್ರದರ್ಶನ! ಇಂದು ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿದ್ದ ಧ್ರುವ ಸರ್ಜಾ(Dhruva Sarja), 'ಪೊಗರು' ರಿಲೀಸ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಫೆಬ್ರವರಿ 19ರ ಶುಕ್ರವಾರ ಈ ಸಿನಿಮಾವನ್ನು ತೆರೆಗೆ ತರುವುದಾಗಿ ಹೇಳಿಕೊಂಡಿದ್ದಾರೆ. ಕೊರೊನಾ, ಲಾಕ್‌ಡೌನ್‌ ಅಂತ 'ಪೊಗರು' ಕೆಲಸಗಳಿಗೆ ತಡೆ ಉಂಟಾಗಿತ್ತು. ಇದೀಗ ಅದೆಲ್ಲವನ್ನು ನಿವಾರಿಸಿಕೊಂಡು, ಶೇ.50ರಷ್ಟು ಮಾತ್ರ ಆಸನ ಭರ್ತಿಗೆ ಅವಕಾಶ ಇದ್ದರೂ ಕೂಡ ಚಿತ್ರವನ್ನು ತೆರೆಕಾಣಿಸುದವುಕ್ಕೆ 'ಪೊಗರು' ತಂಡ ಸಜ್ಜಾಗಿದೆ. ಇನ್ನು, ಕನ್ನಡದ ಜೊತೆಗೆ ತೆಲುಗು, ತಮಿಳು ಭಾಷೆಗಳಲ್ಲೂ ಈ ಚಿತ್ರ ತೆರೆಗೆ ಬರುತ್ತಿದೆ.

Kiccha Sudeep: 21ರಂದು ಸಿಹಿ ಸುದ್ದಿ ನೀಡಲಿರುವ ಫ್ಯಾಂಟಮ್ ತಂಡ : ಏನದು ಗುಡ್ ನ್ಯೂಸ್ ?

'ಪೊಗರು' ಸಿನಿಮಾದಲ್ಲಿ ಧ್ರುವಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಇನ್ನು, ಧ್ರುವ ಈ ಸಿನಿಮಾಕ್ಕಾಗಿ ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಮಯೂರಿ, ಧನಂಜಯ, ರವಿಶಂಕರ್, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ. ಚಂದನ್‌ ಶೆಟ್ಟಿ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಹಿನ್ನೆಲೆ ಸಂಗೀತ ಹೊಣೆ ವಿ. ಹರಿಕೃಷ್ಣ ಅವರದ್ದು. ವಿಜಯ್ ಮಿಲ್ಟನ್‌ ಛಾಯಾಗ್ರಹಣ ಮಾಡಿದ್ದಾರೆ. ಇನ್ನು, 'ಪೊಗರು' ಹಿಂದಿ ಡಬ್ಬಿಂಗ್‌ ವರ್ಷನ್‌ ಹಕ್ಕುಗಳು ಬರೋಬ್ಬರಿ 7.2 ಕೋಟಿ ರೂ.ಗಳಿಗೆ ಮಾರಾಟ ಆಗಿವೆ. ನಂದಕಿಶೋರ್ ನಿರ್ದೇಶನ ಮಾಡಿರುವ ಈ ಸಿನಿಮಾಗೆ ಬಿ.ಕೆ. ಗಂಗಾಧರ್ ಹಣ ಹಾಕಿದ್ದಾರೆ.

Video : ನಿವೇದಿತಾಗೆ ಚಂದನ್ ಹೇಗೆ ಕಿಸ್ ಮಾಡ್ತಾರೆ ಗೊತ್ತಾ..?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News