ಹೀರೋ ಆದ ಸಿಂಗರ್ ನವೀನ್ ಸಜ್ಜು.. ʼಲೋ ನವೀನʼನಿಗೆ ಸಾಥ್ ಕೊಟ್ಟ ಸ್ಯಾಂಡಲ್‌ವುಡ್!

ಮೈಸೂರು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದ್ದು, ಸಹ ನಟರು ಹಾಗೂ ತಂತ್ರಜ್ಞರ ಪಟ್ಟಿ ಅಂತಿಮಗೊಂಡಿದೆ. ಚಿತ್ರದ ನಾಯಕಿಯಾಗಿ ಹೊಸಬರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ಚಿತ್ರತಂಡ ಪರಿಚಯ ಮಾಡಲಿದೆ. 

Written by - YASHODHA POOJARI | Edited by - Puttaraj K Alur | Last Updated : Jul 27, 2024, 02:48 PM IST
  • ಹೀರೋ ಆದ ಸಿಂಗರ್ ನವೀನ್ ಸಜ್ಜು.. 'ಲೋ ನವೀನʼನಿಗೆ ಸಾಥ್ ಕೊಟ್ಟ ಸ್ಯಾಂಡಲ್‌ವುಡ್!
  • ಟೈಟಲ್ ರಿಲೀಸ್ ಮಾಡಿ ಸಾಥ್ ನೀಡಿದ ಸ್ಯಾಂಡಲ್‌ವುಡ್‌ನ 100 ಜನ ನಟ- ನಟಿಯರು
  • ಮೈಸೂರು, ಮಂಡ್ಯ ಮತ್ತು ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ
ಹೀರೋ ಆದ ಸಿಂಗರ್ ನವೀನ್ ಸಜ್ಜು.. ʼಲೋ ನವೀನʼನಿಗೆ ಸಾಥ್ ಕೊಟ್ಟ ಸ್ಯಾಂಡಲ್‌ವುಡ್! title=
ಸಿಂಗರ್ ನವೀನ್ ಸಜ್ಜು ಈಗ ಹೀರೋ...

Singer Naveen Sajju: ತಮ್ಮ ವಿಶಿಷ್ಟ ಕಂಠ ಹಾಗೂ ಗಾಯನದ ಮೂಲಕ ಕನ್ನಡ ಸಿನಿ ರಸಿಕರು ಹಾಗೂ ಸಂಗೀತ ಪ್ರೇಮಿಗಳ ಮನ ಗೆದ್ದಿರುವ ʼಲೂಸಿಯಾʼ ಖ್ಯಾತಿಯ ಗಾಯಕ ನವೀನ್‌ ಸಜ್ಜು ನಾಯಕ ನಟನಾಗಿ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡುತ್ತಿದ್ದಾರೆ. ನವೀನ್ ಹೊಸ ಪಯಣಕ್ಕೆ ಕನ್ನಡ ಚಿತ್ರರಂಗದ ತಾರೆಯರು ಸಾಥ್ ಕೊಟ್ಟಿದ್ದಾರೆ. ʼಲೋ ನವೀನʼ ಸಿನಿಮಾದ ಟೈಟಲ್‌ಅನ್ನು ಸ್ಯಾಂಡಲ್‌ವುಡ್‌ ಹಾಗೂ ಕಿರುತೆರೆಯ 100 ಜನ ನಟ- ನಟಿಯರು ತಮ್ಮ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಗಳ ಮೂಲಕ ನವೀನ್ ಸಜ್ಜು ಚೊಚ್ಚಲ ಸಿನಿಮಾಗೆ ಶುಭ ಕೋರಿದ್ದಾರೆ. 

ʼಲೋ ನವೀನʼ... ಹಳ್ಳಿ ಸೊಗಡಿನ ಚಿತ್ರವಾಗಿದ್ದು. ಸ್ವತಃ ನವೀನ್‌ ಸಜ್ಜು ಅವರೇ ಈ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಧನುರ್ದಾರಿ ಪವನ್‌ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಮೂರು ಜನ ಸಿನಿಮಾಟೋಗ್ರಾಫರ್‌ಗಳಿರುವುದು ವಿಶೇಷ. ಬಿಗ್‌ ಬಾಸ್‌ ಖ್ಯಾತಿಯ ಅಕ್ಷತಾ ಪಾಂಡವಪುರ ಹಾಗೂ ಪ್ರಸನ್ನ ಸಾಗರ ಅವರ ವಸ್ತ್ರ ವಿನ್ಯಾಸ ʼಲೋ ನವೀನʼ ಚಿತ್ರಕ್ಕಿದೆ. ನವೀನ್‌ ಸಜ್ಜು(NS) ಸ್ಟುಡಿಯೋ ಬ್ಯಾನರ್‌ ಅಡಿ ತಯಾರಾಗುತ್ತಿರುವ ಈ ಸಿನಿಮಾಗೆ ಅನಿವಾಸಿ ಭಾರತೀಯರಾದ ವರ್ಜೀನಿಯಾ ನಿವಾಸಿ ಕೀರ್ತಿ ಸ್ವಾಮಿ ಬಂಡವಾಳ ಹೂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Naveen Sajju Official (@naveensajju)

ಇದನ್ನೂ ಓದಿ: ಒಂದು ಕಾಲದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದ ಈ ನಟಿ, ಇಂದು ಐದು ನಿಮಿಷಕ್ಕೆ 5 ಕೋಟಿ ಸಂಭಾವನೆ ಪಡೆಯುತ್ತಾರೆ..ಯಾರೀಕೆ ಗೊತ್ತಾ..?

ಮೈಸೂರು, ಮಂಡ್ಯ, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಕ್ಕೆ ಯೋಜನೆ ಹಾಕಿಕೊಂಡಿದ್ದು, ಸಹ ನಟರು ಹಾಗೂ ತಂತ್ರಜ್ಞರ ಪಟ್ಟಿ ಅಂತಿಮಗೊಂಡಿದೆ. ಚಿತ್ರದ ನಾಯಕಿಯಾಗಿ ಹೊಸಬರನ್ನು ಈ ಚಿತ್ರದ ಮೂಲಕ ಚಂದನವನಕ್ಕೆ ಚಿತ್ರತಂಡ ಪರಿಚಯ ಮಾಡಲಿದೆ. 

ನವೀನ್ ಸಜ್ಜು ಮುಖ್ಯಪಾತ್ರದಲ್ಲಿ ನಟಿಸಿರುವ ʼಮ್ಯಾನ್‌ಷನ್‌ ಹೌಸ್‌ ಮುತ್ತುʼ ಚಿತ್ರವು ಬಿಡುಗಡೆಗೆ ಸಿದ್ಧಗೊಂಡಿರುವ ಹೊತ್ತಿನಲ್ಲೇ ʼಲೋ ನವೀನʼ ಚಿತ್ರ ಸೆಟ್ಟೇರಿದೆ. ಕಲರ್ಸ್‌ ಕನ್ನಡದ ʼಚುಕ್ಕಿ ತಾರೆʼ ಧಾರಾವಾಹಿಯಲ್ಲಿ ಮಾಗಡಿ ರೋಡ್‌ ಮಲ್ಲಿಕಾರ್ಜುನನಾಗಿ ತಮ್ಮ ನಟನಾ ಕೌಶಲ್ಯದಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದ ಸಿಂಗರ್ ನವೀನ್‌ ಸಜ್ಜು ಬೆಳ್ಳಿ ತೆರೆಯ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಇದನ್ನೂ ಓದಿ: ಮೊದಲ ದಿನ ಶೂಟಿಂಗ್‌ಗೆ ಹೋಗುವ ಮುನ್ನ.. ಕೀರ್ತಿ ಸುರೇಶ್‌ಗೆ ತಾಯಿ ಮೇನಕಾ ನೀಡಿದ 2 ಸಲಹೆಗಳಿವು!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News