ಕನ್ನಡದ ಫೇಮಸ್ ಸೀರಿಯಲ್‌ ನಟ - ನಟಿಯ ಮಧ್ಯೆ ಅಫೇರ್? ಸೆಟ್ಟಲ್ಲೇ ಬಿತ್ತು ಪತ್ನಿಯ ಚಪ್ಪಲಿ ಏಟು!

ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್‌ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡ ಬಗ್ಗೆ ವದಂತಿಗಳು ಶುರುವಾಗಿವೆ. ಎರಡು ದಿನಗಳ ಹಿಂದೆ ಈ ಧಾರಾವಾಹಿಯ ಸೆಟ್ಟಲ್ಲಿ ದೊಡ್ಡ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ನಟನ ಪತ್ನಿ ಹಾಗೂ ಸೀರಿಯಲ್‌ ನಟಿಯ ನಡುವೆ ಜಗಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 

Written by - Chetana Devarmani | Last Updated : Nov 29, 2023, 01:08 PM IST
  • ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿ
  • ಯುವ ನಟಿಯೊಂದಿಗೆ ವಿವಾಹಿತ ನಟನ ಅಫೇರ್
  • ನಟನ ಪತ್ನಿ ಹಾಗೂ ಸೀರಿಯಲ್‌ ನಟಿಯ ನಡುವೆ ಜಗಳ
ಕನ್ನಡದ ಫೇಮಸ್ ಸೀರಿಯಲ್‌ ನಟ - ನಟಿಯ ಮಧ್ಯೆ ಅಫೇರ್? ಸೆಟ್ಟಲ್ಲೇ ಬಿತ್ತು ಪತ್ನಿಯ ಚಪ್ಪಲಿ ಏಟು! title=
File Image

Kannada Serial Controversy : ಕನ್ನಡ ಕಿರುತೆರೆಯಲ್ಲಿ ಪ್ರಸಿದ್ಧ ಧಾರಾವಾಹಿಯ ವಿವಾಹಿತ ನಟ ಅದೇ ಸೀರಿಯಲ್‌ನ ಯುವ ನಟಿಯೊಂದಿಗೆ ಅಫೇರ್ ಇಟ್ಟುಕೊಂಡ ಬಗ್ಗೆ ವದಂತಿಗಳು ಶುರುವಾಗಿವೆ. ಎರಡು ದಿನಗಳ ಹಿಂದೆ ಈ ಧಾರಾವಾಹಿಯ ಸೆಟ್ಟಲ್ಲಿ ದೊಡ್ಡ ಗಲಾಟೆ ನಡೆದಿದೆ ಎನ್ನಲಾಗುತ್ತಿದೆ. ನಟನ ಪತ್ನಿ ಹಾಗೂ ಸೀರಿಯಲ್‌ ನಟಿಯ ನಡುವೆ ಜಗಳವಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. 

ವರದಿಯ ಪ್ರಕಾರ, ಕನ್ನಡದ ಜನಪ್ರಿಯ ಸೀರಿಯಲ್‌ ಸೆಟ್ಟನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಕಳೆದ ಕೆಲವು ದಿನಗಳಿಂದ ಈ ನಟ ಮತ್ತು ನಟಿಯ ಮಧ್ಯೆ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಇದು ಸೀರಿಯಲ್‌ ಸೆಟ್ ನಲ್ಲಿದ್ದವರಿಗೂ ಗೊತ್ತಿತ್ತು ಎನ್ನಲಾಗಿದೆ. ಇಬ್ಬರೂ ವಿದೇಶಿ ಪ್ರವಾಸಕ್ಕೆ ಹೋಗಿದ್ದರು ಎಂದು ಸಹ ಹೇಳಲಾಗ್ತಿದೆ.  

ಇದನ್ನೂ ಓದಿ: ಮತ್ತೆ ಪ್ರೇಮಕಥೆಯತ್ತ ದಿಯಾ ಹೀರೋ.. ಪೃಥ್ವಿ ಅಂಬಾರ್ ನಟನೆಯ ‘ಜೂನಿ’ ಸಿನಿಮಾದ ಫಸ್ಟ್ ಲುಕ್ ರಿಲೀಸ್ 

ಇವರಿಬ್ಬರ ಅಫೇರ್‌ ಬಗ್ಗೆ ತಿಳಿದ ನಾಯಕನ ಹೆಂಡತಿ ಸಿಕ್ಕಾಪಟ್ಟಟೆ ಗಲಾಟೆ ಮಾಡಿದ್ದಾರಂತೆ ಎನ್ನಲಾಗಿದೆ. ನಾಯಕಿಗೆ ಎಲ್ಲರ ಮುಂದೆ ಸೆಟ್ಟಿನಲ್ಲೇ ಚಪ್ಪಲಿಯಲ್ಲಿ ಹೊಡೆದಿದ್ದಾರೆ ಎಂದು ವರದಿಯಾಗಿದೆ. ಈ ಧಾರಾವಾಹಿಗೆ ನಾಯಕನ ಪತ್ನಿ ಕೂಡ ನಿರ್ಮಾಪಕಿ ಆಗಿದ್ದಾರೆ. 

ಈ ಘಟನೆ ಬಳಿಕ ನಾಯಕಿ ಸೀರಿಯಲ್‌ನಲ್ಲಿ ನಟಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ. ಮನರಂಜನಾ ವಾಹಿನಿಗೆ ಪತ್ರ ಬರೆದು ಈ ವಿಚಾರ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಆದಷ್ಟು ಬೇಗ ಸೀರಿಯಲ್‌ನ್ನೇ ಮುಗಿಸಲು ವಾಹಿಸಿ ನಿರ್ಧಿರಿಸಿದೆ ಎನ್ನಲಾಗ್ತಿದೆ. ಇದೇ ನಟಿ ಸಿನಿಮಾರಂಗಕ್ಕೆ ಸಹ ಕಾಲಿಟ್ಟಿದ್ದು, ಚೊಚ್ಚಲ ಸಿನಿಮಾ ರಿಲೀಸ್ ಆಗಬೇಕಿದೆ.

ಕಿರುತೆರೆ ಲೋಕದಲ್ಲಿ ಈ ವಿಚಾರದ ಬಗ್ಗೆ ಗುಸುಪಿಸು ನಡೆಯುತ್ತಿದ್ದು, ಅವರು ಯಾರು ಅನ್ನೋದ ಮಾಹಿತಿ ಹೊರಬಿದ್ದಿಲ್ಲ ಎನ್ನಲಾಗಿದೆ. ಈ ವಿಚಾರ ಗಾಳಿಸುದ್ದಿಯಂತೆ ಎಲ್ಲೆಡೆ ಸುತ್ತುತ್ತಿದ್ದು, ಸೀರಿಯಲ್‌ ತಂಡವಾಗಲಿ ಅಥವಾ ವಾಹಿನಿಯಾಗಲಿ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. (ಸೂಚನೆ: ಈ ಸುದ್ದಿಯನ್ನು ಬರೆಯಲು ವರದಿಗಳ ಸಹಾಯ ಪಡೆದಿದ್ದು, ಇದರ ಸತ್ಯಾಸತ್ಯತೆಯನ್ನು ಜೀ ಕನ್ನಡ ನ್ಯೂಸ್‌ ಖಾತ್ರಿ ಪಡಿಸುವುದಿಲ್ಲ.)

ಇದನ್ನೂ ಓದಿ: ರೋಹಿತ್ ಶರ್ಮಾ ಪತ್ನಿಗೂ ಸಲ್ಮಾನ್ ಖಾನ್‌ಗೂ ಇದೇ ನಂಟು.. ಇವರಿಬ್ಬರು ಸಂಬಂಧಿಯಾದದ್ದು ಹೀಗೆ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News