ಇಟಲಿ & ಬಾಂಗ್ಲಾ ಫ್ಯಾನ್ಸ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್..!

ರಾಕಿಂಗ್ ಸ್ಟಾರ್ ಯಶ್ ಅವರು ಬಾಂಗ್ಲಾ ಮತ್ತು ಇಟಲಿಯ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಖತ್ ವೈರಲ್ ಆಗುತ್ತಿವೆ.     

Written by - YASHODHA POOJARI | Last Updated : Jul 30, 2022, 02:41 PM IST
  • ಪತ್ನಿ ರಾಧಿಕಾ ಪಂಡಿತ್ ಜೊತೆಗೆ ವಿದೇಶಿ ಪ್ರವಾಸದಲ್ಲಿ ರಾಕಿಂಗ್ ಸ್ಟಾರ್ ಯಶ್
  • ಇಟಲಿ ಮತ್ತು ಬಾಂಗ್ಲಾ ಅಭಿಮಾನಿಗಳ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡ ‘ರಾಕಿ ಬಾಯ್’
  • ವಿದೇಶಿ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ ಸೂಪರ್ ಸ್ಟಾರ್ ಯಶ್
ಇಟಲಿ & ಬಾಂಗ್ಲಾ ಫ್ಯಾನ್ಸ್ ಜೊತೆಗೆ ರಾಕಿಂಗ್ ಸ್ಟಾರ್ ಯಶ್..! title=
ವಿದೇಶಿ ಅಭಿಮಾನಿಗಳ ಪ್ರೀತಿಗೆ ಯಶ್ ಧನ್ಯವಾದ

ಬೆಂಗಳೂರು: KGF-2 ಬಳಿಕ ರಾಕಿಂಗ್ ಸ್ಟಾರ್ ಯಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ‘ರಾಕಿ ಭಾಯ್’ ಹೊಸ ಸಿನಿಮಾಗಾಗಿ ತಲೆಗೆ ಹುಳ ಬಿಟ್ಟುಕೊಂಡವರಂತೆ ಜನ ಕಾಯುತ್ತಿದ್ದಾರೆ. ಸ್ಟಾರ್ ನಿರ್ದೇಶಕ ನರ್ತನ್ ಜೊತೆ ಯಶ್ ಸಿನಿಮಾ ಮಾಡ್ತಾರೆ ಅನ್ನೋದು ಸದ್ಯಕ್ಕೆ ಸುದ್ದಿಯಲ್ಲಿದೆ.

KGF-2 ವಿಶ್ವದಾದ್ಯಂತ ಸಖತ್ ಸುದ್ದಿ ಮಾಡಿರೋ ಸಿನಿಮಾ. ಪ್ರತಿಯೊಬ್ಬರೂ ಕೂಡ ಈ ಸಿನಿಮಾ ನೋಡಿ ಎಂಜಾಯ್ ಮಡಿದ್ದಾರೆ. ಯಶ್ ಅಭಿನಯಕ್ಕೆ ಮಾರುಹೋಗಿರುವ ಸಿನಿಪ್ರೇಮಿಗಳು ಫಿಲ್ಮ್ ಅಂದ್ರೆ ಹಿಂಗಿರಬೇಕು ಅಂತಾ ಇಂದಿಗೂ ಸಹ ಮಾತನಾಡಿಕೊಳ್ತಿದ್ದಾರೆ.

ಇದನ್ನೂ ಓದಿ: Vikrant Rona : ಧರೆಗುರುಳಿದ ‘ವಿಕ್ರಾಂತ್ ರೋಣ’ ಕಟೌಟ್..!

KGF ಭರ್ಜರಿ ಸಕ್ಸಸ್ ಬಳಿಕ ಯಶ್ ಪತ್ನಿ ರಾಧಿಕಾ ಪಂಡಿತ್ ಜೊತೆಗೆ ಜಾಲಿ ಮೂಡ್‍ನಲ್ಲಿದ್ದಾರೆ. ಬಾಂಗ್ಲಾ ಮತ್ತು ಇಟಲಿ ಟ್ರಿಪ್‍ನಲ್ಲಿ ಫುಲ್ ಬ್ಯುಸಿ ಆಗಿರುವ ಯಶ್ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ರಾಧಿಕಾ ಪಂಡಿತ್ ಕೆಲವು ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸದ್ಯ ಸಖತ್ ವೈರಲ್ ಆಗುತ್ತಿವೆ.     

 
 
 
 

 
 
 
 
 
 
 
 
 
 
 

A post shared by Yash (@thenameisyash)

ಈ ಪೈಕಿ ರಾಕಿಂಗ್ ಸ್ಟಾರ್ ಯಶ್ ಅವರು ಬಾಂಗ್ಲಾ ಮತ್ತು ಇಟಲಿಯ ಅಭಿಮಾನಿಗಳ ಜೊತೆ ಕ್ಲಿಕ್ಕಿಸಿಕೊಂಡಿರುವ ಫೋಟೋ ಸಖತ್ ಸೌಂಡ್ ಮಾಡುತ್ತಿದೆ. ಈ ಫೋಟೋಗೆ ‘ಗಡಿಯಾಚೆಗೂ ಪ್ರೀತಿಸೋ ಅಭಿಮಾನಿಗಳಿಗೆ ನನ್ನ ತೋಳು ನಿಮಗಾಗಿ ಕಾದಿರುತ್ತೆ’ ಅನ್ನೋ ಅರ್ಥದಲ್ಲಿ ಕ್ಯಾಪ್ಶನ್ ನೀಡಲಾಗಿದೆ. ಯಶ್ ಈಗ ಎಲ್ಲೆ ಹೋದ್ರೂ ಅವರನ್ನು ಸುತ್ತುವರೆಯೋ ಅಭಿಮಾನಿಗಳ ಸಂಖ್ಯೆ ಜಾಸ್ತಿಯಾಗುತ್ತಿದೆ.  

ಇದನ್ನೂ ಓದಿ: ಕಿಚ್ಚ ಸುದೀಪ್‌ 'ವಿಕ್ರಾಂತ್‌ ರೋಣ'..! ಮೊದಲ ದಿನವೇ ಹಲವು ದಾಖಲೆ ಉಡೀಸ್..!‌

ನಿಮಗೆ ಗೊತ್ತಿರೋ ಹಾಗೆ KGF-2 ಸಿನಿಮಾ 1000 ಕೋಟಿ ರೂ. ಕ್ಲಬ್ ಸೇರಿದೆ. ಈಗ ಅಭಿಮಾನಿಗಳಲ್ಲಿ ಕಾಡುತ್ತಿರೋ ಪ್ರಶ್ನೆ ಏನಪ್ಪಾ ಅಂದ್ರೆ ಟ್ರಿಪ್ ಮುಗಿದ ಮೇಲೆ ಯಶ್ ಮಾಡೋ ಕೆಲ್ಸ ಏನು...? ಯಾವ ಸಿನಿಮಾ ಒಪ್ಪಿಕೊಂಡಿದ್ದಾರೆ..? ಏನು ಗುಡ್ ನ್ಯೂಸ್ ಕೊಡುತ್ತಾರೆ ಅನ್ನೋದು.  

ಯಶ್ ತಮ್ಮ ಮುಂದಿನ ಸಿನಿಮಾಗಾಗಿ ಫಿಟ್ನೆಸ್ ಕೂಡ ಮೇಂಟೇನ್ ಮಾಡ್ತಾ ಇದ್ದಾರೆ ಅನ್ನೋ ಸುದ್ದಿ ಕೂಡ ಹಬ್ಬಿದೆ. ಒಟ್ನಲ್ಲಿ ವಿದೇಶ ಪ್ರವಾಸದ ವೇಳೆ ಅಭಿಮಾನಿಗಳಿಗೆ ಯಶ್ ತೋರಿಸಿರೋ ಪ್ರೀತಿಗೆ ಎಲ್ಲಾರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News