ರಾಜಕೀಯ ಪ್ರವೇಶಕ್ಕೆ ಕಂಗನಾ ರೆಡಿ..! ʼಈʼ ಪಕ್ಷದಿಂದ ಲೋಕಸಭೆ ಪ್ರವೇಶಿಸಲಿದ್ದಾರೆ ಬಿಟೌನ್‌ ಕ್ವೀನ್‌

Kangana Ranaut : ನಟಿ ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಬರುವ ಆಸಕ್ತಿಯನ್ನು ಹಲವು ಬಾರಿ ಬಹಿರಂಗಪಡಿಸಿದ್ದರು. ಇದೀಗ ʼರಾಜಕೀಯ ಪ್ರವೇಶಕ್ಕೆ ಕಾಲ ಕೂಡಿಬಂದಿದೆʼ ಎಂಬ ಅವರ ಹೇಳಿಕೆ ವೈರಲ್ ಆದ ಬೆನ್ನಲ್ಲೆ ಬಿಟೌನ್‌ ಕ್ವೀನ್‌ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ..

Written by - Krishna N K | Last Updated : Dec 21, 2023, 03:57 PM IST
  • ನಟಿ ಕಂಗನಾ ರಣಾವತ್ ಅವರು ರಾಜಕೀಯಕ್ಕೆ ಬರುವುದು ಫಿಕ್ಸ್‌.
  • ರಾಜಕೀಯ ಪ್ರವೇಶಕ್ಕೆ ಬಿಟೌನ್‌ ಕ್ವೀನ್‌ಗೆ ಕಾಲ ಕೂಡಿಬಂದಿದೆ.
  • ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು ಪಕ್ಕಾ ಆಗಿದೆ.
ರಾಜಕೀಯ ಪ್ರವೇಶಕ್ಕೆ ಕಂಗನಾ ರೆಡಿ..! ʼಈʼ ಪಕ್ಷದಿಂದ ಲೋಕಸಭೆ ಪ್ರವೇಶಿಸಲಿದ್ದಾರೆ ಬಿಟೌನ್‌ ಕ್ವೀನ್‌ title=

Kangana Ranaut election : ಚಿತ್ರರಂಗಕ್ಕೂ ರಾಜಕೀಯಕ್ಕೂ ಇರುವ ನಿಕಟ ಸಂಬಂಧ ಈಗಿಲ್ಲ. ಅನೇಕ ನಟರು ಸಿನಿಮಾದಿಂದ ರಾಜಕೀಯಕ್ಕೆ ಬಂದಿದ್ದಾರೆ. ರಾಜಕೀಯದಲ್ಲಿ ಕೆಲಸ ಮಾಡದ ಅನೇಕ ನಟರು ಮತ್ತೆ ಚಿತ್ರರಂಗಕ್ಕೆ ಬಂದಿದ್ದಾರೆ. ಅಲ್ಲೊಂದು ಇಲ್ಲೊಂದು ಎರಡು ದೋಣಿಯಲ್ಲಿ ಓಡಾಡುವವರೂ ಇದ್ದಾರೆ. ಇತ್ತೀಚೆಗಷ್ಟೇ ಈ ಪಟ್ಟಿಗೆ ಮತ್ತೊಬ್ಬ ಯುವ ನಾಯಕಿ ಸೇರ್ಪಡೆಯಾಗಲಿದ್ದಾರೆ.

ಹೌದು.. ಸದ್ಯ ಬಾಲಿವುಡ್‌ನಲ್ಲಿ ಕಂಗನಾ ರಣಾವತ್‌ ರಾಜಕೀಯ ಪ್ರವೇಶದ ಸುದ್ದಿ ವೈರಲ್ ಆಗಿದೆ. ರಾಜಕೀಯ ಪ್ರವೇಶ ಮಾತ್ರವಲ್ಲ, ಲೋಕಸಭಾ ಚುನಾವಣೆ ಸ್ಪರ್ಧೆಯ ಬಗ್ಗೆಯೂ ಕಂಗನಾ ಒಂದು ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ,‌ ಈಗಾಗಲೇ ಯಾವ ಪಕ್ಷ ಸೇರಬೇಕು ಎಂಬುವುದನ್ನೂ ಸಹ ಅವರು ನಿರ್ಧರಿಸಿದ್ದಾರಂತೆ.

ಇದನ್ನೂ ಓದಿ:BBK 10 : ಪ್ರೀತಿ, ಸ್ನೇಹ ಅಂತಿದ್ದ ಸಂಗೀತಾ-ತನಿಷಾ ಇಬ್ಬರಿಗೂ ಬೇಡವಾದ್ರಾ ಕಾರ್ತಿಕ್..!

ಕಂಗನಾ ರಣಾವತ್ ಮೊದಲಿನಿಂದಲೂ ಬಿಜೆಪಿ ಪಕ್ಷವನ್ನು ಬೆಂಬಲಿಸುವುದಾಗಿ ಹಲವು ಸುಳಿವುಗಳನ್ನು ನೀಡಿದ್ದಾರೆ. ಕೆಲ ದಿನಗಳಿಂದ ಕಂಗನಾ ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಬಾಲಿವುಡ್‌ನಲ್ಲಿ ಕೇಳಿ ಬರುತ್ತಿವೆ. ಕಾರಣ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದರು. 

ಕಂಗನಾ ಭಾನುವಾರ ಕುಲುವಿನಲ್ಲಿ ಜೆಪಿ ನಡ್ಡಾ ಅವರನ್ನು ಭೇಟಿಯಾದರು. ಇದಕ್ಕೆ ಸಂಬಂಧಿಸಿದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ರಾಜಕೀಯದಲ್ಲಿ ಆಸಕ್ತಿ ಇದೆ ಎಂದು ಈಗಾಗಲೇ ಹಲವು ಬಾರಿ ಬಹಿರಂಗ ಹೇಳಿಕೆ ನೀಡಿರುವ ಕಂಗನಾ, ಸದ್ಯದಲ್ಲೇ ಬಿಜೆಪಿ ಪರವಾಗಿ ರಾಜಕೀಯ ಪ್ರವೇಶಕ್ಕೆ ತಯಾರಿ ನಡೆಸಲಿದ್ದಾರೆ ಎಂಬ ಚರ್ಚೆ ಶುರುವಾಗಿದೆ. ಈ ಮಧ್ಯ ಅವರ ತಂದೆ ಅಮರ್‌ದೀಪ್ ಕೂಡ ಇತ್ತೀಚೆಗೆ ಅದೇ ವಿಷಯವನ್ನು ಖಚಿತಪಡಿಸಿದ್ದಾರೆ. 

ಇದನ್ನೂ ಓದಿ: "ಸಲಾರ್ ನೋಡೋಕೆ ಉಗ್ರಂ ತರ ಇದೆ ಅಂದ್ರೆ ಐ ಡೋಂಟ್ ಕೇರ್": ಟೀಕೆಗೆ ಟಕ್ಕರ್‌ ಕೊಟ್ಟ ನೀಲ್!

ಬಹುತೇಕ ವಿವಾದಗಳಿಗೆ ಕಾರಣವಾಗಿರುವ ಕಂಗನಾಳಂತಹ ನಾಯಕಿ ರಾಜಕೀಯಕ್ಕೆ ಬಂದರೆ ಯಾವ ರೇಂಜ್ ನಲ್ಲಿ ವಿವಾದಗಳು ಸೃಷ್ಟಿಯಾಗುತ್ತವೆ ಎಂಬುದು ಪ್ರೇಕ್ಷಕರ ಅಭಿಪ್ರಾಯ. ನಿರ್ಭೀತಿಯಿಂದ ಉತ್ತರ ನೀಡುವ ಕಂಗನಾ ರಾಜಕೀಯದಲ್ಲೂ ಅದನ್ನು ಮುಂದುರೆಸುತ್ತಾರಾ ಇಲ್ಲವೇ ತಮ್ಮ ವರ್ತನೆ ಬದಲಿಸಿಕೊಳ್ಳುತ್ತಾರಾ ಎಂಬ ಅನುಮಾನ ಕಾಡುತ್ತಿದೆ.

ಎಲ್ಲವು ಅಂದುಕೊಂಡಂತಾದರೆ ಬಿಜೆಪಿ ಪಕ್ಷದ ಮೂಲಕ ರಾಜಕೀಯ ಪ್ರವೇಶ ಮಾಡುವುದರ ಜೊತೆಗೆ 2024ರ ಲೋಕಸಭೆ ಚುನಾವಣೆಯಲ್ಲೂ ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಅಲ್ಲಿಯವರೆಗೂ ಕಂಗನಾ ಅವರ ಬಳಿ ಇದ್ದ ಸಿನಿಮಾಗಳನ್ನು ಮುಗಿಸಲು ಸಾಧ್ಯವೇ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಸದ್ಯ ಕಂಗನಾ ರಣಾವತ್ ಕೈಯಲ್ಲಿ ಎರಡು ಚಿತ್ರಗಳಿವೆ. ಅವುಗಳಲ್ಲಿ ಒಂದು 'ಎಮರ್ಜೆನ್ಸಿ'. ಈ ಚಿತ್ರವನ್ನು ತಾವೇ ನಿರ್ದೇಶನ ಮಾಡಿ ನಿರ್ಮಾಣ ಮಾಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News