ನವದೆಹಲಿ: Kangana Ranaut on Farm Laws - ಕಂಗನಾ ರಣಾವತ್ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿವಾದಾತ್ಮಕ ಹೇಳಿಕೆಗಳನ್ನು ನೀಡುತಿದ್ದಾರೆ. ಕೃಷಿ ಕಾನೂನುಗಳ ವಾಪಸಾತಿ ಕುರಿತ ಪ್ರಧಾನಿ ನರೇಂದ್ರ ಮೋದಿಯವರ (PM Narendra Modi) ನಿರ್ಧಾರ ನಾಚಿಕೆಗೇಡಿನ ಸಂಗತಿ ಎಂದು ಕಂಗನಾ ರಣಾವತ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳುವುದರಿಂದ ಕೋಪಗೊಂಡ ಕಂಗನಾ, ಭಾರತವನ್ನು 'ಜಿಹಾದಿ ರಾಷ್ಟ್ರ' ಎಂದು ಬಣ್ಣಿಸಿದ್ದಾರೆ. ಇಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಪ್ರಧಾನಿ ಮೋದಿ ಅವರು ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
ಕಂಗನಾ ರಣಾವತ್ ಹೇಳಿದ್ದೇನು?
ಪ್ರಸ್ತುತ ಕಂಗನಾ ಟ್ವಿಟ್ಟರ್ ಖಾತೆಯನ್ನು ಅಮಾನತುಗೊಳಿಸಲಾಗಿದೆ, ಆದರೂ ಕೂಡ ಆಕೆ ತನ್ನ Instagram ಕಥೆಗಳನ್ನು ಅಪ್‌ಲೋಡ್ ಮಾಡುವ ಮೂಲಕ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾಳೆ. ಇನ್‌ಸ್ಟಾ ಸ್ಟೋರಿಯಲ್ಲಿ ಕೃಷಿ ಕಾನೂನುಗಳ ವಾಪಸಾತಿ ದುಃಖಕರ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಬಣ್ಣಿಸಿರುವ ಕಂಗನಾ, "ಸಂಸತ್ತಿನಲ್ಲಿ ಚುನಾಯಿತ ಸರ್ಕಾರದ ಬದಲಿಗೆ ಬೀದಿಯಲ್ಲಿರುವ ಜನರು ಕಾನೂನುಗಳನ್ನು ಮಾಡಲು ಪ್ರಾರಂಭಿಸಿದರೆ, ಅದು ಜಿಹಾದಿ ರಾಷ್ಟ್ರವಾಗಿದೆ. ಎಂದು ಹೇಳಿರುವ ಕಂಗನಾ, ಕೃಷಿ ಕಾನೂನು ರದ್ದತಿ (Farm Laws Withdrawn) ಬಯಸಿದ ಎಲ್ಲರಿಗೂ ಅಭಿನಂದನೆಗಳು" ಎಂದಿದ್ದಾಳೆ.
ಪ್ರಧಾನಿ ಮೋದಿ ಹೇಳಿದ್ದೇನು?
ಇಂದು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ್ದ ಪ್ರಧಾನಿ ಮೋದಿ, ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು. "ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಾವು ನಿರ್ಧರಿಸಿದ್ದೇವೆ ಎಂದು ಇಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ರೈತರು, ವಿಶೇಷವಾಗಿ ಸಣ್ಣ ರೈತರು ಹೆಚ್ಚಿನ ಶಕ್ತಿಯನ್ನು ಪಡೆಯಬೇಕು, ಅವರು ತಮ್ಮ ಉತ್ಪನ್ನಗಳಿಗೆ ಸರಿಯಾದ ಬೆಲೆ ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಹೆಚ್ಚು ಹೆಚ್ಚು ಆಯ್ಕೆಗಳನ್ನು ಪಡೆಯಬೇಕು ಎಂಬುದು ಉದ್ದೇಶವಾಗಿತ್ತು, ಇಂದು ನಾನು ಎಲ್ಲರಿಗೂ ಹೇಳಲು ಬಯಸುತ್ತೇನೆ. ಎಲ್ಲಾ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ನಿರ್ಧರಿಸಿದೆ. ನಾಡಿನ ರೈತರು (Farmers Protet), ದೇಶದ ಕೃಷಿ ತಜ್ಞರು, ನಾಡಿನ ರೈತ ಸಂಘಟನೆಗಳು ಹಲವು ವರ್ಷಗಳಿಂದ ನಿರಂತರವಾಗಿ ಈ ಬೇಡಿಕೆಯನ್ನು ಮುಂದಿಡುತ್ತಿದ್ದವು. ಈ ಹಿಂದೆಯೂ ಹಲವು ಸರಕಾರಗಳು ಈ ಕುರಿತು ಚಿಂತನೆ ನಡೆಸಿದ್ದವು.
ಈ ಬಾರಿಯೂ ಸಂಸತ್ತಿನಲ್ಲಿ ಚರ್ಚೆ ನಡೆದು, ಚಿಂತನೆ ನಡೆದು ಈ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ದೇಶದ ಮೂಲೆ ಮೂಲೆಗಳಲ್ಲಿ ಹಲವು ರೈತ ಸಂಘಟನೆಗಳು ಸ್ವಾಗತಿಸಿ ಬೆಂಬಲಿಸಿದ್ದವು ಅವರೆಲ್ಲರಿಗೂ ಇಂದು ನಾನು ತುಂಬಾ ಕೃತಜ್ಞನಾಗಿದ್ದೇನೆ. ನಮ್ಮ ಸರ್ಕಾರ, ರೈತರ ಕಲ್ಯಾಣಕ್ಕಾಗಿ, ವಿಶೇಷವಾಗಿ ಸಣ್ಣ ರೈತರ ಕಲ್ಯಾಣಕ್ಕಾಗಿ, ದೇಶದ ಕೃಷಿ ಕ್ಷೇತ್ರದ ಹಿತದೃಷ್ಟಿಯಿಂದ, ದೇಶದ ಹಿತದೃಷ್ಟಿಯಿಂದ, ಹಳ್ಳಿಯ ಬಡವರ ಉಜ್ವಲ ಭವಿಷ್ಯಕ್ಕಾಗಿ, ಸಂಪೂರ್ಣ ಪ್ರಾಮಾಣಿಕತೆಯಿಂದ, ಸಮರ್ಪಣಾ ಮನೋಭಾವದಿಂದ ರೈತರ ಕಡೆಗೆ, ಈ ಕಾನೂನನ್ನು ಉದಾತ್ತ ಉದ್ದೇಶದಿಂದ ತರಲಾಗಿದೆ, ಆದರೆ ಅಂತಹ ಪವಿತ್ರವಾದ ವಿಷಯ, ಸಂಪೂರ್ಣ ಶುದ್ಧ, ರೈತರ ಹಿತದೃಷ್ಟಿಯಿಂದ, ನಮ್ಮ ಪ್ರಯತ್ನಗಳ ಹೊರತಾಗಿಯೂ ನಾವು ಕೆಲವು ರೈತರಿಗೆ ವಿವರಿಸಲು ಸಾಧ್ಯವಾಗಲಿಲ್ಲ" ಎಂದು ಪ್ರಧಾನಿ ಹೇಳಿದ್ದಾರೆ.