ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ನಟಿ ಕಂಗನಾ..? ಸ್ಟಷ್ಟನೇ ನೀಡಿದ ಬಿಟೌನ್‌ ಕ್ವೀನ್‌

Kanganaʼs Marriage : ಬಾಲಿವುಡ್‌ ನಟಿ ಕಂಗನಾ ರನೌತ್‌ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ. ತಮ್ಮ ಮದುವೆಯ ವಿಚಾರವಾಗಿ ಮಾತನಾಡಿರುವ ಬಿಟೌನ್‌ ಕ್ವೀನ್‌, ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿಡುವ ಬಗ್ಗೆ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಇದರ ಬಗ್ಗೆ ಇನ್ನಷ್ಟು ಇಂಟ್ರೆಸ್ಟಿಂಗ್‌ ವಿಷಯ ಇಲ್ಲಿದೆ..  

Written by - Krishna N K | Last Updated : Oct 26, 2023, 06:16 PM IST
  • ನಟಿ ಕಂಗನಾ ರನೌತ್‌ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಹಂಚಿಕೊಂಡಿದ್ದಾರೆ.
  • ತಮ್ಮ ಮದುವೆಯ ವಿಚಾರವಾಗಿ ಬಿಟೌನ್‌ ಕ್ವೀನ್‌ ಗುಟ್ಟು ಬಿಟ್ಟುಕೊಟ್ಟಿದ್ದಾರೆ.
  • ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವಿಷಯ ರಿವಿಲ್‌ ಮಾಡಿದ್ದಾರೆ.
ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ನಟಿ ಕಂಗನಾ..? ಸ್ಟಷ್ಟನೇ ನೀಡಿದ ಬಿಟೌನ್‌ ಕ್ವೀನ್‌ title=
Kanghana Marriage

Kangana Ranaut : ಬಿಟೌನ್‌ ಸುಂದರಿ ಕಂಗನಾ ರನೌತ್‌ ʼತೇಜಸ್‌ʼ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಈ ನಟಿ ಸಂದರ್ಶನವೊಂದರಲ್ಲಿ ತಮ್ಮ ಮದುವೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಎಂಬ ವಿಷಯ ರಿವಿಲ್‌ ಮಾಡಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿದ ನಟಿ "ಪ್ರತಿ ಹೆಣ್ಣಿಗೂ ಮದುವೆ ಹಾಗು ಕುಟುಂಬ ಒಂದು ಕನಸಾಗಿರುತ್ತದೆ. ನಾನೂ ಸಹ ಫ್ಯಾಮಿಲಿ ಪರ್ಸನ್‌. ಆದರಿಂದ ನನಗೆ ಮದುವೆ ತುಂಬಾ ಮುಖ್ಯ. ಇನ್ನು ಐದು ವರ್ಷಗಳಲ್ಲಿ ನಾನು ಮದುವೆಯಾಗಿ ಒಂದು ಫ್ಯಾಮಿಲಿಯ ಭಾಗವಾಗಿರುತ್ತೇನೆ. ನನಗೆ ಲವ್‌ ಕಮ್‌ ಅರೇಂಜ್‌ ಮ್ಯಾರೇಜ್‌ ಆದರೆ ಒಳ್ಳೆಯದು ಅಂತ ಅನಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮನೆ ಶೋಧಿಸಿದ ಅರಣ್ಯಾಧಿಕಾರಿಗಳ ಕ್ರಮ ಕಾನೂನುಬಾಹಿರ..! ಹೈಕೋರ್ಟ್‌ ಮೊರೆ ಹೋದ ನಟ ಜಗ್ಗೇಶ್‌

ತಮ್ಮ ಹಳೆಯ ರಿಲೇಷನ್‌ ಶಿಪ್‌ ಬಗ್ಗೆ ಮಾತನಾಡಿದ ನಟಿ, ಪ್ರತಿ ಬಾರಿಯು ರಿಲೇಷನ್‌ ಶಿಪ್‌ನಲ್ಲಿ ಸಕ್ಸಸ್‌ ಕಾಣುವುದಿಲ್ಲ. ನೀವು ಚಿಕ್ಕ ವಯಸ್ಸಿನಲ್ಲಿ ನಿಮ್ಮ ರಿಲೇಷನ್‌ ಶಿಪ್‌ನಲ್ಲಿ ಗೆಲುವು ಕಾಣಲಿಲ್ಲ ಅಂದರೆ ಅದು ಒಳ್ಳೆಯದು. ನನಗೂ ಆ ರೀತಿಯೇ ಆಗಿರುವುದು. ಅವತ್ತು ಆ ನನ್ನ ಹಳೆಯ ರಿಲೇಷನ್‌ ಶಿಪ್‌ ಗೆದ್ದಿದ್ದರ, ನನ್ನ ಇಷ್ಟು ವರ್ಷಗಳು ವ್ಯರ್ಥವಾಗುತ್ತಿತ್ತು. ನನ್ನ ಅದೃಷ್ಟದಿಂದ ಆ ಸಂಬಂಧ ಮುಂದುವರೆಯಲಿಲ್ಲ. ನನ್ನನ್ನ ದೇವರು ಕಾಪಾಡಿದ ಅಂತ ಅನಿಸುತ್ತದೆ ಎಂದಿದ್ದಾರೆ.

ಇನ್ನು ಬ್ರೇಕ್‌ಅಪ್‌ ಬಗ್ಗೆ ಮಾತನಾಡಿ, ಆ ಸಮಯದಲ್ಲಿ ಆತನಿಗೆ ಮದುವೆಯಾಗಬೇಕಿತ್ತು, ಆದರೆ ನನಗೆ ಇಷ್ಟವಿರಲಿಲ್ಲ. ಅವನು ನನ್ನ ಸಾಮಾನ್ಯ ಹುಡುಗಿಯಂತೆ ನೋಡಲಿಲ್ಲ, ತುಂಬಾ ಗೌರವಿಸುತ್ತಿದ್ದ, ನನ್ನ ಯಶಸ್ಸಿನ ಬಗ್ಗೆಯು ಸಹ ಹೊಗಳುತ್ತಿದ್ದ, ನನಗೆ ಒಬ್ಬ ಅಭಿಮಾನಿಯನ್ನ ಮದುವೆಯಾಗಲು ಇಷ್ಟವಿರಲಿಲ್ಲ. ಅಲ್ಲದೆ ಅಂತಹ ದುರಹಂಕಾರಿ ವ್ಯಕ್ತಿ ಜೊತೆ ಬಾಳಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇದನ್ನು ಓದಿ: BBK 10 : 8 ವರ್ಷಗಳ ಪ್ರೀತಿ... ಲವ್‌ ಬ್ರೇಕಪ್‌ ಕತೆ ಹೇಳಿದ ಕಾರ್ತಿಕ್!

ಸಧ್ಯ ನಟಿ ಕಂಗನಾ ಅಭಿನಯದ ತೇಜಸ್‌ ಸಿನಿಮಾ ಬಿಡುಗಡೆಯಾಗಿದೆ. ಚಿತ್ರಮಂದಿರದಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇತ್ತೀಚಿಗೆ ಕಂಗನಾ ತಮಿಳು ಸಿನಿಮಾ ಚಂದ್ರಮುಖಿ 2 ರಲ್ಲಿ ಕಾಣಿಸಿಕೊಂಡಿದ್ದರು. ರಾಘವ್‌ ಲಾರೆನ್ಸ್‌ ಜೊತೆ ನಾಯಕಿಯಾಗಿ ನಟಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News