Kangana Ranaut: ಕಂಗನಾ ರನೌತ್‌ ನಟನೆಯ ʻಎಮರ್ಜೆನ್ಸಿʼ ರಿಲೀಸ್‌ ಡೇಟ್‌ ಔಟ್!

Kangana Ranaut Announces New Release Date for "Emergency": ಬಾಲಿವುಡ್‌ ಬೆಡಗಿ ಕಂಗನಾ ರನೌತ್‌  ಅಭಿನಯದ ಬಹುನಿರೀಕ್ಷಿತ ಎಮರ್ಜೆನ್ಸಿ ಚಿತ್ರದ ರಿಲೀಸ್‌ ಡೇಟ್‌ ಫಿಕ್ಸ್‌ ರಿವೀಲ್‌ ಆಗಿದೆ. ಈ ವಿಷಯವನ್ನು ನಟಿ ಕಂಗಾನ ಸಫಷಿಯಲ್‌ ಮಿಡಿಯಾದಲ್ಲಿ ಚಿತ್ರದ ಫೋಸ್ಟರ್‌ ಹಂಚಿಕೊಳ್ಳುವುದರ ಮೂಲಕ ತಿಳಿಸಿದ್ದಾರೆ.

Written by - Zee Kannada News Desk | Last Updated : Jan 23, 2024, 01:12 PM IST
  • ಎಮರ್ಜೆನ್ಸಿ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದ್ದು, ಜನವರಿ 23 ಮಂಗಳವಾರದಂದು ಚಿತ್ರದ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ.
  • ಇಂದಿರಾ ಗಾಂಧಿಯ ಹೊಸ ಪೋಸ್ಟರ್ ಶೇರ್‌ ಮಾಡುವುದರ ಜೊತೆಗೆ ಜೂನ್ 14, 2024 ರಂದು ಸಿನಿಮಾವನ್ನು ರಿಲೀಸ್‌ ಮಾಡಲು ನಿರ್ಧರಿಸಲಾಗಿದೆ ಎಂಬ ವಿಷಯ ರಿವೀಲ್‌ ಮಾಡಿದ್ದಾರೆ.
  • ಎಮರ್ಜೆನ್ಸಿ ಸಿನಿಮಾವು ಕಲಾವಿದೆಯಾಗಿ ನನ್ನ ಸಂಪೂರ್ಣ ಜೀವನದ ಕಲಿಕೆ ಮತ್ತು ಗಳಿಕೆಯ ಪರಾಕಾಷ್ಠೆಯಾಗಿದೆ ಎಂದು ನಟಿ ಕಂಗನಾ ಹೇಳಿದ್ದರು.
Kangana Ranaut: ಕಂಗನಾ ರನೌತ್‌ ನಟನೆಯ ʻಎಮರ್ಜೆನ್ಸಿʼ ರಿಲೀಸ್‌ ಡೇಟ್‌ ಔಟ್! title=

Kangana Ranaut's Film "Emergency" New Release Details: ಬಾಲಿವುಡ್‌ ನಟಿ ಕಂಗನಾ ರನೌತ್‌ ನಟನೆಯ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾದ ರಿಲೀಸ್‌ ಡೇಟ್‌ ಫಿಕ್ಸ್‌ ಆಗಿದ್ದು, ಜನವರಿ 23 ಮಂಗಳವಾರದಂದು ಚಿತ್ರದ ಹೊಸ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ನಟಿ ಕಂಗನಾ ಸೋಷಿಯಲ್‌ ಮಿಡಿಯಾದಲ್ಲಿ ಇಂದಿರಾ ಗಾಂಧಿಯ ಹೊಸ ಪೋಸ್ಟರ್ ಶೇರ್‌ ಮಾಡುವುದರ ಜೊತೆಗೆ ಜೂನ್ 14, 2024 ರಂದು ಸಿನಿಮಾವನ್ನು ರಿಲೀಸ್‌ ಮಾಡಲು ನಿರ್ಧರಿಸಲಾಗಿದೆ ಎಂಬ ವಿಷಯ ರಿವೀಲ್‌ ಮಾಡಿದ್ದಾರೆ. 

ನಟಿ ಕಂಗನಾ ಇನ್‌ಸ್ಟಾಗ್ರಾಮ್‌ನಲ್ಲಿ, “ಭಾರತದ ಕರಾಳ ಗಂಟೆಯ ಹಿಂದಿನ ಕಥೆಯನ್ನು ಅನ್ಲಾಕ್ ಮಾಡಿ. ಜೂನ್ 14, 2024 ರಂದು  ಎಮರ್ಜೆನ್ಸಿ ಪರಿಸ್ಥಿತಿಯನ್ನು ಘೋಷಿಸಲಾಗುತ್ತಿದೆ. ಅತ್ಯಂತ ಭಯಭೀತ ಮತ್ತು ಉಗ್ರ ಪ್ರಧಾನಿ ಇಂದಿರಾಗಾಂಧಿ ಅವರು ಚಿತ್ರಮಂದಿರಗಳಲ್ಲಿ ಗುಡುಗಿದಾಗ ಸಾಕ್ಷಿ ಇತಿಹಾಸವು ಜೀವಂತವಾಗಿದೆ. ಇದೇ 14ನೇ ಜೂನ್ 2024 ರಂದು ಚಿತ್ರಮಂದಿರಗಳಲ್ಲಿ ಎಮರ್ಜೆನ್ಸಿ ಪರಿಸ್ಥಿತಿ." ಎಂದು ಬರೆದಿದ್ದಾರೆ. ಈ ಚಿತ್ರದಲ್ಲಿ ಕಂಗನಾ ನಾಯಕಿಯಾಗಿ ಮಾತ್ರವಲ್ಲದೆ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

 
 
 
 

 
 
 
 
 
 
 
 
 
 
 

A post shared by Kangana Ranaut (@kanganaranaut)

ಇದನ್ನೂ ಓದಿ: Ram Mandir: ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ವೇಳೆ ಹರ್ಷೋಲಾಸದಿಂದ 'ಜೈ ಶ್ರೀರಾಮ್' ಘೋಷಣೆ ಮೊಳಗಿಸಿದ ಕಂಗನಾ ರಣಾವತ್

ಈ ಹಿಂದೆ ನಟಿ ಕಂಗನಾ, ಎಮರ್ಜೆನ್ಸಿ ಚಿತ್ರ ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾಗಬೇಕಿದ್ದು, “ಆತ್ಮೀಯ ಸ್ನೇಹಿತರೇ, ನಾನು ಮಾಡಬೇಕಾದ ಪ್ರಮುಖ ಘೋಷಣೆ ಇದು. ಎಮರ್ಜೆನ್ಸಿ ಸಿನಿಮಾವು ಕಲಾವಿದೆಯಾಗಿ ನನ್ನ ಸಂಪೂರ್ಣ ಜೀವನದ ಕಲಿಕೆ ಮತ್ತು ಗಳಿಕೆಯ ಪರಾಕಾಷ್ಠೆಯಾಗಿದೆ. ಎಮರ್ಜೆನ್ಸಿ ನನಗೆ ಕೇವಲ ಚಿತ್ರವಲ್ಲ, ಇದು ಒಬ್ಬ ವ್ಯಕ್ತಿಯಾಗಿ ನನ್ನ ಯೋಗ್ಯತೆ ಮತ್ತು ಪಾತ್ರದ ಪರೀಕ್ಷೆ. ನಮ್ಮ ಟೀಸರ್ ಮತ್ತು ಇತರ ಯೂನಿಟ್‌ಗಳು ಎಲ್ಲರಿಂದಲೂ ಪಡೆದ ಅದ್ಭುತ ಪ್ರತಿಕ್ರಿಯೆ ನಮ್ಮೆಲ್ಲರನ್ನು ಉತ್ತೇಜಿಸಿದೆ" ಎಂದು ಹೇಳಿದ್ದರು 

ಹಾಗೆಯೇ ನಟಿ ಕಂಗನಾ "ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ ಮತ್ತು ನಾನು ಎಲ್ಲಿಗೆ ಹೋದರೂ ಜನರು ಎಮರ್ಜೆನ್ಸಿ ಬಿಡುಗಡೆಯ ದಿನಾಂಕದ ಬಗ್ಗೆ ನನ್ನನ್ನು ಕೇಳುತ್ತಾರೆ. ನಾವು 24ನೇ ನವೆಂಬರ್ 2023 ಎಂದು  ಎಮರ್ಜೆನ್ಸಿ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದೇವೆ ಆದರೆ ನನ್ನ ಬೇರೆ ಸಿನಿಮಾಗಳು ಒಂದಾದ ಮೇಲೆ ಒಂದು ರಿಲೀಸ್‌ ಆಗಬೇಕಿದ್ದು ಮತ್ತು 2024 ರ ಕೊನೆಯ ತ್ರೈಮಾಸಿಕದಲ್ಲಿ ತುಂಬಾ ಬ್ಯುಸಿಯಿರುವ ಕಾರಣ, ನಾವು ಮುಂದಿನ ವರ್ಷಕ್ಕೆ (2024) ಎಮರ್ಜೆನ್ಸಿ ಚಿತ್ರ ರಿಲೀಸ್‌ ಮಾಡಲು ನಿರ್ಧರಿಸಿದ್ದೇವೆ. ಹೊಸ ಬಿಡುಗಡೆಯ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು, ದಯವಿಟ್ಟು ನಮ್ಮೊಂದಿಗೆ ಸಹಿಸಿಕೊಳ್ಳಿ, ನಿಮ್ಮ ನಿರೀಕ್ಷೆ, ಕುತೂಹಲ ಮತ್ತು ಚಿತ್ರಕ್ಕಾಗಿ ಉತ್ಸುಕತೆ ಎಂದರೆ ನಿಮ್ಮ ನಿಜವಾದ ಕಂಗನಾ ರನೌತ್ ಎಂದರ್ಥ” ಎಂದು ಮಾತನಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News