ಪ್ರಭಾಸ್‌ ʼಪ್ರಾಜೆಕ್ಟ್‌ ಕೆʼ ಸಿನಿಮಾದಲ್ಲಿ ಕಮಲ್‌ ಹಾಸನ್‌ : ಡಾರ್ಲಿಂಗ್‌ ಚಿತ್ರದಲ್ಲಿ ವಿಶ್ವ ನಾಯಕ ವಿಲನ್‌..!

Prabhas Project K : ನಟ ಪ್ರಭಾಸ್‌ ಮತ್ತು ನಾಗ್‌ ಅಶ್ವಿನ್‌ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ʼಪ್ರಾಜೆಕ್ಟ್‌ ಕೆʼ ಚಿತ್ರದಲ್ಲಿ ಕಮಲ್‌ ಹಾಸನ್‌ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ಕಮಲ್‌ ವಿಲನ್‌ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ.

Written by - Krishna N K | Last Updated : Jun 15, 2023, 12:27 PM IST
  • ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ನಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ.
  • ಈ ವೈಜ್ಞಾನಿಕ ಕಾಲ್ಪನಿಕ ಚಿತ್ರದಲ್ಲಿ ಕಮಲ್ ವಿಲನ್‌ ಪಾತ್ರದಲ್ಲಿ ನಟಿಸಲಿದ್ದಾರೆ.
  • ಈ ಸಿನಿಮಾದಲ್ಲಿ ಇದರಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಪ್ರಭಾಸ್‌ ʼಪ್ರಾಜೆಕ್ಟ್‌ ಕೆʼ ಸಿನಿಮಾದಲ್ಲಿ ಕಮಲ್‌ ಹಾಸನ್‌ : ಡಾರ್ಲಿಂಗ್‌ ಚಿತ್ರದಲ್ಲಿ ವಿಶ್ವ ನಾಯಕ ವಿಲನ್‌..! title=

Kamal haasan in Project K : ರೆಬಲ್‌ ಸ್ಟಾರ್‌ ಪ್ರಭಾಸ್ ನಟನೆಯ ಮುಂಬರುವ ಚಿತ್ರ 'ಪ್ರಾಜೆಕ್ಟ್ ಕೆ' ನಲ್ಲಿ ಕಮಲ್ ಹಾಸನ್ ಕಾಣಿಸಿಕೊಳ್ಳಲಿದ್ದಾರೆ. ಈ ವೈಜ್ಞಾನಿಕ ಕಾಲ್ಪನಿಕ ಚಿತ್ರದಲ್ಲಿ ಕಮಲ್ ವಿಲನ್‌ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಈ ಸಿನಿಮಾದಲ್ಲಿ ಇದರಲ್ಲಿ ದೀಪಿಕಾ ಪಡುಕೋಣೆ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಹೌದು ಈಗಾಗಲೇ ಪ್ರಭಾಸ್‌ಗೆ ಜೊತೆಯಾಗಿ ದೀಪಿಕಾ ಪಡುಕೋಣೆ ಪ್ರಾಜೆಕ್ಟ್‌ ಕೆ ಸಿನಿಮಾದಲ್ಲಿ ನಟಿಸುವ ವಿಚಾರ ಎಲ್ಲಿರಿಗೂ ತಿಳಿದಿದೆ. ಇದೀಗ ವಿಶ್ವನಾಯಕ ನಟ ಕಮಲ್‌ ಹಾಸನ್‌ ಪ್ರಾಜೆಕ್ಟ್‌ ಕೆ ನ ಭಾಗವಾಗಲಿದ್ದಾರೆ ಎನ್ನುವ ಸುದ್ದಿಯೊಂದು ಟ್ವಿಟರ್‌ನಲ್ಲಿ ಹರಿದಾಡುತ್ತಿದೆ. ಅಲ್ಲದೆ, ಈ ಚಿತ್ರದಲ್ಲಿ ಪ್ರಭಾಸ್‌ ಎದುರು ವಿಲನ್‌ ಪಾತ್ರದಲ್ಲಿ ಕಮಲ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:  ʼನೋ ಕಿಸ್ಸಿಂಗ್ ಪಾಲಿಸಿʼ ಇಟ್ಕೊಂಡಿದ್ದ ನಟಿ ತಮ್ಮನ್ನಾ.. ʼಹಸಿ ಬಿಸಿʼ ದೃಶ್ಯದಲ್ಲಿ..! ವಿಡಿಯೋ ವೈರಲ್‌

ವರದಿಗಳ ಪ್ರಕಾರ, ಆಗಸ್ಟ್ 2023 ರ ಆರಂಭದಲ್ಲಿ ನಾಗ್ ಅಶ್ವಿನ್ ನಿರ್ದೇಶನದ ಪ್ರಾಜೆಕ್ಟ್‌ ಕೆ ತಂಡವನ್ನು ಕಮಲ್‌ ಸೇರಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ಈಗಾಗಲೇ ಕಾರ್ತಿಕ್‌, ಕಮಲ್ ಹಾಸನ್ ಅವರ ದೃಶ್ಯಗಳ ಚಿತ್ರೀಕರಣಕ್ಕಾಗಿ ವೇಳಾಪಟ್ಟಿಯನ್ನು ಸಿದ್ಧಗೊಳಿಸಿದ್ದಾರೆ ಎಂಬ ವಂದಂತಿಯೂ ಸಹ ಹರಿದಾಡುತ್ತಿದೆ. ಇಷ್ಟೆ ಅಲ್ಲ, ಈ ಚಿತ್ರದಲ್ಲಿ ನಟಿಸಲು ಕಮಲ್‌ ಬರೋಬ್ಬರಿ 100 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಸುದ್ದಿ ಅಂತರ್ಜಾಲದಲ್ಲಿ ಸದ್ದು ಮಾಡುತ್ತಿದ್ದ, ಕಮಲ್‌ ಮತ್ತು ಪ್ರಭಾಸ್‌ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಲ್ಲದೆ, ಈ ಸಿನಿಮಾ ಹಿಸ್ಟರಿ ಕ್ರಿಯೇಟ್‌ ಮಾಡುತ್ತದೆ, ಬ್ಲಾಕ್ಬಸ್ಟರ್‌ ಆಗಲಿದೆ ಎಂದು ಫ್ಯಾನ್ಸ್‌ ಕಾಮೆಂಟ್‌ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಈ ಫ್ಯೂಚರಿಸ್ಟಿಕ್ ವೈಜ್ಞಾನಿಕ ಆಕ್ಷನ್ ಚಿತ್ರದಲ್ಲಿ ಕಮಲ್ ಹಾಸನ್ ಹಿಂದೆಂದೂ ನೋಡಿರದ ಅವತಾರವಾಗಿ ಕಾಣಿಸಬಹುದು ಅಂತ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:  ಮಂಡ್ಯದ ಅಳಿಮಯ್ಯ ಪ್ರಥಮ್! ʻಒಳ್ಳೆ ಹುಡುಗʼನ ಬಾಳ ಸಂಗಾತಿ ಆಗಲಿರೋದು ಯಾರು ಗೊತ್ತಾ?

'ಪ್ರಾಜೆಕ್ಟ್ ಕೆ' ದೀಪಿಕಾ ಪಡುಕೋಣೆ ಅವರ ಚೊಚ್ಚಲ ತೆಲುಗು ಚಿತ್ರವಾಗಿದೆ. ಈ ಚಿತ್ರದಲ್ಲಿ ಅಮಿತಾಬ್ ಬಚ್ಚನ್, ದಿಶಾ ಪಟಾನಿ ನಟಿಸುವ ಸಾಧ್ಯತೆಯಿದೆ. ದಕ್ಷಿಣ ಚಿತ್ರರಂಗದ ಅನೇಕ ಪ್ರಮುಖ ನಟರು ವಿಶೇಷ ಅತಿಥಿ ಪಾತ್ರಗಳಲ್ಲಿ ಕಾಣಿಸೊಳ್ಳಲಿದ್ದಾರೆ. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ ಮತ್ತು ಮೊದಲ ಭಾಗವು ಜನವರಿ 12, 2024 ರ ಮಕರ ಸಂಕ್ರಾಂತಿಯಂದು ಥಿಯೇಟರ್‌ಗಳಲ್ಲಿ ಬರುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News