ಕರುನಾಡಿನ ದೇವರು ಅಪ್ಪು ಹುಟ್ಟುಹಬ್ಬ ಮಾರ್ಚ್ 17ರಂದು "ಕಬ್ಜ" ಸಿನಿಮಾ ರಿಲೀಸ್..!

Kabzaa Release Date: ಕಳೆದ ವರ್ಷ ಪುನೀತ್ ರಾಜ್​ಕುಮಾರ್​ ಬರ್ತ್​ಡೇ ದಿನ ‘ಜೇಮ್ಸ್​’ ಸಿನಿಮಾ ರಿಲೀಸ್ ಆಗಿತ್ತು. ಈ ವರ್ಷ ‘ಕಬ್ಜ’ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. ಮಾರ್ಚ್​ 17 ‘ಕಬ್ಜ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. 

Written by - YASHODHA POOJARI | Edited by - Yashaswini V | Last Updated : Jan 24, 2023, 12:12 PM IST
  • ಕಳೆದ ವರ್ಷ ಪುನೀತ್ ರಾಜ್​ಕುಮಾರ್​ ಬರ್ತ್​ಡೇ ದಿನ ‘ಜೇಮ್ಸ್​’ ಸಿನಿಮಾ ರಿಲೀಸ್ ಆಗಿತ್ತು.
  • ಈ ವರ್ಷ ‘ಕಬ್ಜ’ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ.
  • ಮಾರ್ಚ್​ 17 ‘ಕಬ್ಜ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ.
ಕರುನಾಡಿನ ದೇವರು  ಅಪ್ಪು ಹುಟ್ಟುಹಬ್ಬ ಮಾರ್ಚ್ 17ರಂದು "ಕಬ್ಜ" ಸಿನಿಮಾ ರಿಲೀಸ್..! title=
Kabzaa Release Date

Kabzaa Release Date: ಈ ಭೂಮಿ ಆಕಾಶ ಇರೋವರೆಗೂ ಶಾಶ್ವತವಾಗಿರೋ ಒಂದೇ ಒಂದು ಹೆಸ್ರು ಅಂದ್ರೆ ಅದು ಪವರ್ ಸ್ಟಾರ್ ಡಾ.ಪುನೀತ್ ರಾಜ್ ಕುಮಾರ್. ಯೆಸ್ ಅಪ್ಪು ಹುಟ್ಟುಹಬ್ಬ ನಮ್ಮ ದೇವರು ಹುಟ್ಟಿದ ದಿನ. ಆ ದಿನ ಕರುನಾಡಿನ ಮಂದಿಗೆ ತುಂಬಾ ಅಂದ್ರೆ ತುಂಬಾ ಸ್ಪೆಷಲ್. ನಮ್ಮ ಪ್ರೀತಿಯ ಅಪ್ಪು ಹುಟ್ಟುಹಬ್ಬದ ದಿನವೇ ಬಹುನಿರೀಕ್ಷಿತ 'ಕಬ್ಜ' ಸಿನಿಮಾ ರಿಲೀಸ್ ಮಾಡಲು ಇದೀಗ ಚಿತ್ರತಂಡ ತಯಾರಿ ಮಾಡಿಕೊಂಡಿದೆ.

ಟೀಸರ್ ಮೂಲಕವೇ ಧೂಳೆಬ್ಬಿಸಿದ "ಕಬ್ಜ" ಸಿನಿಮಾಗಾಗಿ ಬಾಲಿವುಡ್ ನಿಂದ ಹಿಡಿದು ಎಲ್ಲಾ ಇಂಡಸ್ಟ್ರಿ ಮಂದಿಯೂ ಕಾದುಕುಳಿತಿದ್ದಾರೆ. ಈಗ ಅಪ್ಪು ಬರ್ತ್ಡೇ ದಿನವೇ "ಕಬ್ಜ" ಸಿನಿಮಾ ರಿಲೀಸ್ ಆಗುತ್ತಿರೋದು ಅಪ್ಪು ಫ್ಯಾನ್ಸ್ ಗು ಫುಲ್ ಖುಷ್ ಆಗಿದೆ. 

ಇದನ್ನೂ ಓದಿ- ಹನಿಮೂನ್ ಪ್ಲಾನ್ ಕ್ಯಾನ್ಸಲ್ ಮಾಡಿದ ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ .! ಕಾರಣ ಇದೇ ನೋಡಿ

ಕಳೆದ ವರ್ಷ ಪುನೀತ್ ರಾಜ್​ಕುಮಾರ್​ ಬರ್ತ್​ಡೇ ದಿನ ‘ಜೇಮ್ಸ್​’ ಸಿನಿಮಾ ರಿಲೀಸ್ ಆಗಿತ್ತು. ಈ ವರ್ಷ ‘ಕಬ್ಜ’ ತೆರೆಗೆ ಬರುತ್ತಿದೆ ಅನ್ನೋದು ವಿಶೇಷ. ಮಾರ್ಚ್​ 17 ‘ಕಬ್ಜ’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಅಷ್ಟೇ ಅಲ್ಲದೇ ಮಾರ್ಚ್​ 22ರಂದು ಯುಗಾದಿ ಹಬ್ಬ ಕೂಡ ಇರೋದ್ರಿಂದ  ಫ್ಯಾನ್ಸ್ ಆರಾಮಾಗಿ ಹಬ್ಬ ಆಚರಿಸಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಜೊತೆ 'ಕಬ್ಜ' ಸಿನಿಮಾ ನೋಡಿ ಸಂತೋಷ ಪಡಬಹುದು. 

ಕಬ್ಜ ಚಿತ್ರದಲ್ಲಿ ಉಪೇಂದ್ರ ಜೊತೆಗೆ ನಟ 'ಕಿಚ್ಚ' ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ. ಸಚಿವ ಎಂ.ಟಿ.ಬಿ. ನಾಗರಾಜ್ ಅವರ ಆಶೀರ್ವಾದದೊಂದಿಗೆ ಶ್ರೀ ಸಿದ್ಧೇಶ್ವರ ಎಂಟರ್‌ಪ್ರೈಸಸ್ ನಿರ್ಮಿಸಿರುವ ಈ ಸಿನಿಮಾ ಮಾರ್ಚ್ 17ರಂದು ಪ್ಯಾನ್ ಇಂಡಿಯಾ ಲೆವೆಲ್ಲಿನಲ್ಲಿ ಸದ್ದು ರಿಲೀಸ್ ಆಗಿ ಇತಿಹಾಸ ಕ್ರಿಯೇಟ್ ಆಗೋದು ಪಕ್ಕಾ. ಈ ಸಿನಿಮಾದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 

ಇದನ್ನೂ ಓದಿ- Sudheer Varma suicide: ಟಾಲಿವುಡ್ ಜನಪ್ರಿಯ ಯುವ ನಟ ಸುಧೀರ್ ವರ್ಮಾ ಆತ್ಮಹತ್ಯೆ..!

'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯ ಪೂರ್ವದ ಭೂಗತ ಲೋಕದ ಕಥೆಯಾಗಿದೆ. ಬೆಂಗಳೂರು, ಮಂಗಳೂರು, ವಿಶಾಖಪಟ್ಟಣ, ಹೈದರಾಬಾದ್‌ ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಬೃಹತ್‌ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗಿದೆ. ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗದ ಖ್ಯಾತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News