Kabzaa Audio Release : ಕಬ್ಜ ಆಡಿಯೋ ರಿಲೀಸ್‌​ಗೆ ಬೃಹತ್​ ವೇದಿಕೆ ಸಿದ್ಧ.! ಎಲ್ಲಿ, ಯಾವಾಗ? ಇಲ್ಲಿ ನೋಡಿ..

Kabzaa Audio Release : ಕೆಜಿಎಫ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ ಮತ್ತು ವಿಕ್ರಾಂತ್ ರೋಣ ಯಶಸ್ಸಿನ ನಂತರ, ಕನ್ನಡ ಚಿತ್ರರಂಗವು ಕಬ್ಜ ಎಂಬ ಮತ್ತೊಂದು ದೊಡ್ಡ ಆಕ್ಷನ್ ಎಂಟರ್‌ಟೈನರ್ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ.   

Written by - Chetana Devarmani | Last Updated : Feb 13, 2023, 07:59 AM IST
  • ಉಪೇಂದ್ರ - ಸುದೀಪ್‌ ಅಭಿನಯದ ಕಬ್ಜ ಸಿನಿಮಾ
  • ಕಬ್ಜ ಸಿನಿಮಾದ ಆಡಿಯೋ ರಿಲೀಸ್‌ಗೆ ಭರ್ಜರಿ ಸಿದ್ಧತೆ
  • ಕಬ್ಜ ಆಡಿಯೋ ರಿಲೀಸ್‌​ಗೆ ಬೃಹತ್​ ವೇದಿಕೆ ಸಿದ್ಧ.!
Kabzaa Audio Release : ಕಬ್ಜ ಆಡಿಯೋ ರಿಲೀಸ್‌​ಗೆ ಬೃಹತ್​ ವೇದಿಕೆ ಸಿದ್ಧ.! ಎಲ್ಲಿ, ಯಾವಾಗ? ಇಲ್ಲಿ ನೋಡಿ.. title=
ಕಬ್ಜ

Kabzaa Audio Release Event  : ಕೆಜಿಎಫ್, ಕೆಜಿಎಫ್ ಚಾಪ್ಟರ್ 2, 777 ಚಾರ್ಲಿ ಮತ್ತು ವಿಕ್ರಾಂತ್ ರೋಣ ಯಶಸ್ಸಿನ ನಂತರ, ಕನ್ನಡ ಚಿತ್ರರಂಗವು ಕಬ್ಜ ಎಂಬ ಮತ್ತೊಂದು ದೊಡ್ಡ ಆಕ್ಷನ್ ಎಂಟರ್‌ಟೈನರ್ ಸಿನಿಮಾವನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಆರ್ ಚಂದ್ರು ನಿರ್ದೇಶನದ ಚಿತ್ರದಲ್ಲಿ ಉಪೇಂದ್ರ, ಕಿಚ್ಚ ಸುದೀಪ್, ಶ್ರಿಯಾ ಸರನ್, ಮುರಳಿ ಶರ್ಮಾ ಮತ್ತು ನವಾಬ್ ಶಾ ನಟಿಸಿದ್ದಾರೆ. ಚಿತ್ರವು ಕನ್ನಡ ಸೇರಿದಂತೆ 7 ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದ ಕಬ್ಜ ಸಿನಿಮಾದ ಆಡಿಯೋ ರಿಲೀಸ್‌ಗೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. 

ಪೋಸ್ಟರ್​, ಟೀಸರ್​, ಟೈಟಲ್​ ಟ್ರ್ಯಾಕ್​ ಮೂಲಕವೇ ಸಾಕಷ್ಟು ಸದ್ದು ಮಾಡಿದ್ದ ಕಬ್ಜ ಸಿನಿಮಾ ರಿಲೀಸ್‌ಗೆ ಸಿನಿಪ್ರಿಯರು ಹವಣಿಸುತ್ತಿದ್ದಾರೆ. ಮಾರ್ಚ್​ 17ರಂದು ವಿಶ್ವಾದ್ಯಂತ ‘ಕಬ್ಜ’ ಬೆಳ್ಳಿ ತೆರೆ ಮೇಲೆ ಅಬ್ಬರಿಸಲಿದೆ. ಈಗ ಈ ಸಿನಿಮಾದ ಆಡಿಯೋ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಫೆಬ್ರವರಿ 26ರಂದು ಶಿಡ್ಲಘಟ್ಟದಲ್ಲಿ ಕಬ್ಜ ಸಿನಿಮಾದ ಆಡಿಯೋ ರಿಲೀಸ್​ ಮಾಡಲು ಸಕಲ ಸಿದ್ಧತೆ ನಡೆಯುತ್ತಿದೆ. ಶಿಡ್ಲಘಟ್ಟದ ಜೂನಿಯರ್​ ಕಾಲೇಜು ಮೈದಾನದಲ್ಲಿ ಕಬ್ಜ ಆಡಿಯೋ ರಿಲೀಸ್‌ ಇವೆಂಟ್‌ ನಡೆಯಲಿದೆ. ಫೆಬ್ರವರಿ 26ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ.  

ಇದನ್ನೂ ಓದಿ : ಶಾರುಖ್‌ ಖಾನ್‌ ಕಟ್ಟುವ ಈ ವಾಚ್‌ ಬೆಲೆಯಲ್ಲಿ ಐಷಾರಾಮಿ ಬಂಗಲೆ, ಕಾರು ಖರೀದಿಸಬಹುದು.!

ಕಬ್ಜಾ, 1942 ರಿಂದ 1984 ರ ನಡುವೆ ನಡೆದ ಭಾರತದಲ್ಲಿ ದರೋಡೆಕೋರರ ಉದಯದ ಅವಧಿಯ ಚಲನಚಿತ್ರವಾಗಿದೆ. ಇದು ಮಾಫಿಯಾ ಜಗತ್ತಿನಲ್ಲಿ ಸಿಕ್ಕಿಹಾಕಿಕೊಳ್ಳುವ ಸ್ವಾತಂತ್ರ್ಯ ಹೋರಾಟಗಾರನ ಮಗನ ಸುತ್ತ ಸುತ್ತುತ್ತದೆ. ಚಿತ್ರವು ಒಂದು ದೊಡ್ಡ-ಪ್ರಮಾಣದ ಆಕ್ಷನ್ ಚಿತ್ರ ಎಂದು ಹೇಳಲಾಗುತ್ತದೆ, ಇದು ಥಿಯೇಟರ್ ವೀಕ್ಷಣೆಯ ಅನುಭವಕ್ಕೆ ಸೂಕ್ತವಾಗಿದೆ. ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಬ್ಯಾನರ್‌ನಡಿಯಲ್ಲಿ ಆರ್ ಚಂದ್ರು ಅವರೇ ನಿರ್ಮಿಸಿರುವ ಎಂಟಿಬಿ ನಾಗರಾಜ್ ಅವರು ಪ್ರಸ್ತುತಪಡಿಸಿರುವ ಚಿತ್ರವು ಕನ್ನಡ, ಹಿಂದಿ, ತಮಿಳು, ತೆಲುಗು, ಮಲಯಾಳಂ, ಒರಿಯಾ ಮತ್ತು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರಕ್ಕೆ  ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ಎ ಜೆ ಶೆಟ್ಟಿ ಛಾಯಾಗ್ರಹಣ, ಮಹೇಶ್ ರೆಡ್ಡಿ ಸಂಕಲನ ಮತ್ತು ರವಿ ವರ್ಮಾ, ವಿಜಯ್, ವಿಕ್ರಮ್ ಮೋರ್ ಮತ್ತು ವಿನೋದ್ ಸಾಹಸವನ್ನು ಮಾಡಿದ್ದಾರೆ. 

ಇದನ್ನೂ ಓದಿ : 'ಜಗವ ಹಡೆದ ಮಗಳಿವಳು,ಕರುಳ ಕರೆಗೆ ಮರಗುವಳು' ಹಾಡಿಗೆ ಜನರ ಕಣ್ಗಳು ಒದ್ದೆ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News