Kabza : ಉಪ್ಪಿ ʼಕಬ್ಜʼ ಸಾಂಗ್‌ ರಿಲೀಸ್‌... ರಾಜಮೌಳಿ, ಮೆಗಾಸ್ಟಾರ್ ಗೆಸ್ಟ್‌..!

Kabza song release event live : ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಕಬ್ಜʼ ದಿನದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಅಲ್ಲದೆ, ಮಾರ್ಚ್ 17ಕ್ಕೆ ಅದ್ಧೂರಿಯಾಗಿ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ.4 ರಂದು ಅಂದ್ರೆ ಇಂದು ಸಂಜೆ ಹೈದರಾಬಾದ್ ನಲ್ಲಿ ಈ ಸಿನಿಮಾದ ಹಾಡೊಂದು ಬಿಡುಗಡೆ ಆಗುತ್ತಿದೆ. ಅಲ್ಲದೆ, ಆಂಧ್ರ ಮತ್ತು ತೆಲಂಗಾಣದ ವಿತರಣಾ ಹಕ್ಕು ಸಹ ಮಾರಾಟವಾಗಿದೆ.

Written by - YASHODHA POOJARI | Edited by - Krishna N K | Last Updated : Feb 4, 2023, 02:06 PM IST
  • ಬಹುನಿರೀಕ್ಷಿತ ಸಿನಿಮಾ ʼಕಬ್ಜʼ ದಿನದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ.
  • ಮಾರ್ಚ್ 17ಕ್ಕೆ ಅದ್ಧೂರಿಯಾಗಿ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳುತ್ತಿದೆ.
  • ಫೆ.4 ರಂದು ಅಂದ್ರೆ ಇಂದು ಸಂಜೆ ಹೈದರಾಬಾದ್ ನಲ್ಲಿ ಈ ಸಿನಿಮಾದ ಹಾಡೊಂದು ಬಿಡುಗಡೆ ಆಗುತ್ತಿದೆ.
Kabza : ಉಪ್ಪಿ ʼಕಬ್ಜʼ ಸಾಂಗ್‌ ರಿಲೀಸ್‌... ರಾಜಮೌಳಿ, ಮೆಗಾಸ್ಟಾರ್ ಗೆಸ್ಟ್‌..! title=

Kabza song release : ರಿಯಲ್‌ ಸ್ಟಾರ್‌ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ನಟನೆಯ ಬಹುನಿರೀಕ್ಷಿತ ಸಿನಿಮಾ ʼಕಬ್ಜʼ ದಿನದಿನಕ್ಕೆ ಕುತೂಹಲ ಹೆಚ್ಚಿಸುತ್ತಿದೆ. ಅಲ್ಲದೆ, ಮಾರ್ಚ್ 17ಕ್ಕೆ ಅದ್ಧೂರಿಯಾಗಿ ಸಿನಿಮಾ ರಿಲೀಸ್‌ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಫೆ.4 ರಂದು ಅಂದ್ರೆ ಇಂದು ಸಂಜೆ ಹೈದರಾಬಾದ್ ನಲ್ಲಿ ಈ ಸಿನಿಮಾದ ಹಾಡೊಂದು ಬಿಡುಗಡೆ ಆಗುತ್ತಿದೆ. ಅಲ್ಲದೆ, ಆಂಧ್ರ ಮತ್ತು ತೆಲಂಗಾಣದ ವಿತರಣಾ ಹಕ್ಕು ಸಹ ಮಾರಾಟವಾಗಿದೆ.

ತೆಲುಗು ರಾಜ್ಯಗಳಲ್ಲಿ ಕಬ್ಜ ಬಿಡುಗಡೆ ರೈಟ್ಸ್‌ನ್ನು ಟಾಲಿವುಡ್‌ ಖ್ಯಾತ ನಟ ನಿತಿನ್ ಪಡೆದಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡು ಖುಷಿ ಕೊಟ್ಟಿದ್ದರು. ಉಪೇಂದ್ರ ಮತ್ತು ಸುದೀಪ್ ಅವರನ್ನು ನಿಮ್ಮ ಮುಂದೆ ತರಲು ಖುಷಿ ಆಗುತ್ತಿದೆ ಅಂತ ಪೋಸ್ಟ್‌ ಹಾಕಿದ್ದರು. ಟಾಲಿವುಡ್ ಸ್ಟಾರ್ ನಿರ್ದೇಶಕ ರಾಜಮೌಳಿ ಹಾಗು ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಆಹ್ವಾನ ನೀಡಲಾಗಿದ್ದು, ಸಮಾರಂಭದಲ್ಲಿ ಹಾಜರಾಗೋ ಭರವಸೆ ಕೊಟ್ಟಿದ್ದಾರೆ ಅಂತ ತಿಳಿಸಿದ್ದರು.

ಇದನ್ನೂ ಓದಿ: ಹಸೆಮಣೆ ಏರಿದ ಕಿಯಾರಾ ಹಾಗೂ ಸಿದ್ದಾರ್ಥ ಮಲ್ಹೋತ್ರಾ ...!

ಆದರೆ ಟಾಲಿವುಡ್ ಖ್ಯಾತ ನಿರ್ದೇಶಕ  ಕೆ. ವಿಶ್ವನಾಥ್ ಅವರ ನಿಧನದಿಂದ ಗಣ್ಯರು ಆ ನೋವಿನಿಂದ ಹೊರ ಬಂದಿಲ್ಲ. ಹೀಗಾಗಿ ಇಂದು ಕಾರ್ಯಕ್ರಮದಲ್ಲಿ ಕೊನೆಯ ಹಂತದಲ್ಲಿ. ಗಣ್ಯರ ಉಪಸ್ಥಿತಿಯಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿರೋ ಬಗ್ಗೆ ಚಿತ್ರತಂಡ ಇದೀಗ ಮಾಹಿತಿ ಹಂಚಿಕೊಂಡಿದೆ. ಖ್ಯಾತ ನಿರ್ದೇಶಕ ಕೆ ವಿಶ್ವನಾಥ್ ಅವರಿಗೆ ಮೌನಾಚರಣೆ ಮೂಲಕ ಶಾಂತಿ ಕೋರಿ ʼಕಬ್ಜʼ ಸಾಂಗ್ ರಿಲೀಸ್ ಮಾಡುತ್ತೆ ಸಿನಿಮಾ ತಂಡ.

ಕಬ್ಜದಲ್ಲಿ ಉಪೇಂದ್ರಗೆ ನಾಯಕಿಯಾಗಿ ಶ್ರೀಯಾ ಶರಣ್ ಕಾಣಿಸಿಕೊಂಡಿದ್ದು, ನವಾಬ್ ಷಾ, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ಮುಂತಾದವರು ಅಭಿನಯಿಸಿದ್ದಾರೆ. 'ಕೆಜಿಎಫ್' ಖ್ಯಾತಿಯ ಸಂಗೀತ ನಿರ್ದೇಶಕ ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಎಜೆ ಶೆಟ್ಟಿ ಅವರು ಛಾಯಾಗ್ರಹಣ ಮಾಡಿದ್ದು, 'ಕೆಜಿಎಫ್' ಖ್ಯಾತಿಯ ಶಿವಕುಮಾರ್ ಕಲಾ ನಿರ್ದೇಶನ ಮಾಡಿದ್ದಾರೆ.ಇದು ಸ್ವಾತಂತ್ರ್ಯಪೂರ್ವದ ಭೂಗತ ಲೋಕದ ಕಥೆಯಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News