ಫೆ.26ರಂದು ‘ಕಬ್ಜ’ ಕಮರ್ಷಿಯಲ್ ಸಾಂಗ್ ರಿಲೀಸ್: ಅದ್ಧೂರಿ ಸಮಾರಂಭಕ್ಕೆ ಲಕ್ಷಕ್ಕೂ ಅಧಿಕ ಜನ ಭಾಗಿ ಸಾಧ್ಯತೆ

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.

Written by - YASHODHA POOJARI | Edited by - Bhavishya Shetty | Last Updated : Feb 21, 2023, 08:31 PM IST
    • ‘ಕಬ್ಜ’ ಚಿತ್ರದ ಕಮರ್ಷಿಯಲ್ ಸಾಂಗ್ ಹಾಗೂ ಜೂಟ್ ಬಾಕ್ಸ್ ಫೆಬ್ರವರಿ 26 ರಂದು ಶಿಡ್ಲಘಟ್ಟದಲ್ಲಿ ಬಿಡುಗಡೆ
    • ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ.
    • ಆರ್ ಚಂದ್ರು ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದಾರೆ
ಫೆ.26ರಂದು ‘ಕಬ್ಜ’ ಕಮರ್ಷಿಯಲ್ ಸಾಂಗ್ ರಿಲೀಸ್: ಅದ್ಧೂರಿ ಸಮಾರಂಭಕ್ಕೆ ಲಕ್ಷಕ್ಕೂ ಅಧಿಕ ಜನ ಭಾಗಿ ಸಾಧ್ಯತೆ  title=
Kabza

ಆರ್ ಚಂದ್ರು ನಿರ್ದೇಶಿಸಿರುವ ‘ಕಬ್ಜ’ ಚಿತ್ರದ ಕಮರ್ಷಿಯಲ್ ಸಾಂಗ್ ಹಾಗೂ ಜೂಟ್ ಬಾಕ್ಸ್ ಫೆಬ್ರವರಿ 26 ರಂದು  ಶಿಡ್ಲಘಟ್ಟದಲ್ಲಿ ಬಿಡುಗಡೆಯಾಗಲಿದೆ. ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಸಮಾರಂಭ ಅದ್ಧೂರಿಯಾಗಿ ನಡೆಯಲಿದೆ. ಶಿಡ್ಲಘಟ್ಟ ಆರ್ ಚಂದ್ರು ಅವರ ತವರೂರು. ತಮ್ಮೂರಿನಲ್ಲಿ ‘ಕಬ್ಜ’ ಚಿತ್ರದ ಅದ್ದೂರಿ ಸಮಾರಂಭ ಆಯೋಜಿಸಿರುವ ಆರ್ ಚಂದ್ರು, ಸಮಾರಂಭ ಯಶಸ್ವಿಯಾಗಿ ನಡೆಯಲು ಈಗಾಗಲೇ ತಯಾರಿ ಆರಂಭಿಸಿದ್ದಾರೆ.

ಇದನ್ನೂ ಓದಿ: ದುನಿಯಾ ವಿಜಯ್ ಮುಂದಿನ ಪ್ರಾಜೆಕ್ಟ್ ಗೇ ಹೀರೋಯಿನ್ ಫಿಕ್ಸ್..!

ರಿಯಲ್ ಸ್ಟಾರ್ ಉಪೇಂದ್ರ, ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ದುನಿಯಾ ವಿಜಯ್, ಪ್ರೇಮ್, ಶ್ರೇಯಾ ಶರಣ್ ಹಾಗೂ ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಿಂದ ಸಹ ಪ್ರಮುಖ ಗಣ್ಯರು ಈ ವರ್ಣರಂಜಿತ ಸಮಾರಂಭಕ್ಕೆ ಆಗಮಿಸುತ್ತಿದ್ದಾರೆ.

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಬಹುನಿರೀಕ್ಷಿತ ‘ಕಬ್ಜ’ ಚಿತ್ರ ಮಾರ್ಚ್ 17 ರಂದು ತೆರೆಗೆ ಬರಲಿದೆ.

ಬಹುನಿರೀಕ್ಷೆಯ ಕಬ್ಜ ಸಿನಿಮಾದ ನಮಾಮಿ‌‌ ಸಾಂಗ್ ಈಗಾಗಲೇ ರಿಲೀಸ್ ಆಗಿದ್ದು ಭರ್ಜರಿಯಾಗಿ ಕಿಕ್ ಕೊಡುತ್ತಿದೆ. ಯಾವ ಬಾಲಿವುಡ್ ಸಾಂಗ್ ಗೂ ಕಮ್ಮಿ ಇಲ್ಲ ಅನ್ನೋ ಹಾಗೆ ಹವಾ ಕ್ರಿಯೇಟ್ ಮಾಡಿದೆ ನಮಾಮಿ ಹಾಡು.

ಇದನ್ನೂ ಓದಿ: Tanya Hope : ಏನ್‌ ಸಖತ್ತಾಗಿದಾಳೆ ಗುರು ಬಸಣ್ಣಿ..! ಬಸಣ್ಣಿ ಬಾ.. ಬಸಣ್ಣಿ.. ಬಾ..

ಸಖತ್ ರಿಚ್ ಆಗಿ ಮೂಡಿ ಬಂದಿರೋ ಸಾಂಗ್ ನೋಡಿ ಉಪ್ಪಿ ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ನಾಯಕಿ ಶ್ರೀಯಾ ನಟರಾಜನನ್ನು ಆರಾಧಿಸೋ ಹಾಡು ಇದಾಗಿದೆ. ಇದರಲ್ಲಿ ನಾಯಕಿ ಶ್ರೀಯಾ ಲುಕ್ ಮತ್ತು ಡ್ಯಾನ್ಸ್ ತುಂಬಾ ಅದ್ಭುತವಾಗಿದೆ. ರವಿ ಬಸ್ರೂರು ಸಂಗೀತ ನಿರ್ದೆಶನದ ಈ ಹಾಡು ಪ್ರೇಕ್ಷಕರ ಮನಗೆಲ್ಲುವಲ್ಲಿ ಸಕ್ಸಸ್ ಆಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News