Taraka Ratna Death: ಜೂ.ಎನ್ ಟಿ ಆರ್ ಅಣ್ಣ ನಂದಮೂರಿ ತಾರಕ ರತ್ನ ಇನ್ನಿಲ್ಲ!

Taraka Ratna Death: ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಂದಮೂರಿ ತಾರಕರತ್ನ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

Written by - Bhavishya Shetty | Last Updated : Feb 18, 2023, 10:36 PM IST
    • ಜೂ.ಎನ್‌ ಟಿ ಆರ್‌ ಅಣ್ಣ ನಂದಮೂರಿ ತಾರಕ ರತ್ನ ನಿಧನ
    • ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಕೊನೆಯುಸಿರು
    • ನಂದಮೂರಿ ಕುಟುಂಬಕ್ಕೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ
Taraka Ratna Death: ಜೂ.ಎನ್ ಟಿ ಆರ್ ಅಣ್ಣ ನಂದಮೂರಿ ತಾರಕ ರತ್ನ ಇನ್ನಿಲ್ಲ!   title=
Nandamuri Taraka Ratna

Taraka Ratna Death: ತೀವ್ರ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿದ್ದ ನಂದಮೂರಿ ತಾರಕರತ್ನ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಅವರು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Taraka Ratna : ಜೂ. ಎನ್‌ಟಿಆರ್‌ ಅಣ್ಣನ ಆರೋಗ್ಯ ಸ್ಥಿತಿ ಚಿಂತಾಜನಕ, ಆಸ್ಪತ್ರೆಗೆ ಬಂದ ಕುಟುಂಬಸ್ಥರು..!

ನಂದಮೂರಿ ತಾರಕರತ್ನ ಅವರಿಗೆ ವಿದೇಶಿ ವೈದ್ಯರು ಚಿಕಿತ್ಸೆ ನೀಡಿದರೂ ಸಹ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. 23 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಾರಕರತ್ನ ಇಂದು (ಶನಿವಾರ 18) ಇಹಲೋಕ ತ್ಯಜಿಸಿದ್ದಾರೆ.

ತಾರಕರತ್ನ ಅವರ ನಿಧನದ ಸುದ್ದಿ ಕೇಳಿ, ಚಿತ್ರರಂಗದ ಜೊತೆಗೆ ತೆಲುಗು ರಾಜ್ಯದ ಜನತೆ ಕಂಬನಿ ಮಿಡಿದಿದ್ದಾರೆ. ನಂದಮೂರಿ ಕುಟುಂಬಕ್ಕೆ ಹಲವರು ತೀವ್ರ ಸಂತಾಪ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಕೋಮಾ ಸ್ಥಿತಿಯಲ್ಲಿ ಧ್ರುವ ಅಭಿಮಾನಿ : ಚಿಕಿತ್ಸೆಗೆ 5 ಲಕ್ಷ ಕೊಟ್ಟು ಕುಟುಂಬಕ್ಕೆ ಆಸರೆಯಾದ ನಟ..! 

ಈ ಹಿಂದೆ ಟಿಡಿಪಿ ಯುವ ಮುಖಂಡ ನಾರಾ ಲೋಕೇಶ್ ಅವರು ಕೈಗೊಂಡಿರುವ ‘ಯುವಗಳಂ’ ಪಾದಯಾತ್ರೆಯಲ್ಲಿ ನಂದಮೂರಿ ತಾರಕರತ್ನ ಕೂಡ ಭಾಗವಹಿಸಿದ್ದರು. ಪಾದಯಾತ್ರೆಯ ಅಂಗವಾಗಿ ಲೋಕೇಶ್ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ತೀವ್ರ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಕುಪ್ಪಂನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಸ್ಥಳಾಂತರಿಸಿ ಉತ್ತಮ ಚಿಕಿತ್ಸೆ ನೀಡಲು ಪ್ರಯತ್ನಿಸಿದ್ದರೂ ಸಹ ಪ್ರಯೋಜನವಾಗಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News