ಜೂ. ಎನ್‌ಟಿಆರ್‌ 'ದೇವರ' ಚಿತ್ರದಲ್ಲಿ ಅಲ್ಲು ಅರ್ಜುನ್‌ ಪುತ್ರಿ..10 ನಿಮಿಷಕ್ಕೆ ಅರ್ಹಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?

Allu Arjun Daughter in Devara film : ಆರ್‌ಆರ್‌ಆರ್‌ನ ಯಶಸ್ಸಿನಲ್ಲಿ ಮುಳುಗಿರುವ ಜೂನಿಯರ್ ಎನ್‌ಟಿಆರ್ ಪ್ರಸ್ತುತ ಅವರ ಮುಂದಿನ, ʼದೇವರಾʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಈ ಸಿನಿಮಾದಲ್ಲಿ ಜಾನ್ವಿ ಕಪೂರ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಅವರ ಬಾಲ್ಯದ ಪಾತ್ರವನ್ನು ಅಲ್ಲು ಅರ್ಜುನ್‌ ಪುತ್ರಿ ನಿರ್ವಹಿಲಿದ್ದಾರೆ ಎನ್ನಲಾಗುತ್ತಿದೆ.   

Written by - Savita M B | Last Updated : Jul 17, 2023, 05:37 PM IST
  • ‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದಾರೆ
  • ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
  • ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ಪುಟ್ಟ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.
ಜೂ. ಎನ್‌ಟಿಆರ್‌ 'ದೇವರ' ಚಿತ್ರದಲ್ಲಿ ಅಲ್ಲು ಅರ್ಜುನ್‌ ಪುತ್ರಿ..10 ನಿಮಿಷಕ್ಕೆ ಅರ್ಹಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?  title=

Devara Film : ಟಾಲಿವುಡ್​​ ನಟ​​ ಜೂ. ಎನ್​​ಟಿಆರ್​ ಅವರ ಬಹುನಿರೀಕ್ಷಿತ ಹಾಗೂ ಪ್ಯಾನ್ ಇಂಡಿಯಾ ಮಾಸ್ ಎಂಟರ್​​ಟೈನರ್ ‘ದೇವರ’ ಸಿನಿಮಾವನ್ನು ಕೊರಟಾಲ ಶಿವ ನಿರ್ದೇಶಿಸುತ್ತಿದ್ದು, ನಟಿ ಜಾನ್ವಿ ಕಪೂರ್ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. 

ಇನ್ನು ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗವೇ ಇದೆ ಎನ್ನಲಾಗುತ್ತಿದೆ. ಹೌದು ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಆರ್ಹಾ ಪುಟ್ಟ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ವದಂತಿ ಸದ್ಯ ಸೋಷಿಯಲ್​ ಮೀಡಿಯಾದ ತುಂಬ ಹರಿದಾಡುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಘೋಷಣೆಗಳಾಗಿಲ್ಲ. 

ಇದನ್ನೂ ಓದಿ-ತಮನ್ನಾ ʼಕಾವಾಲಯ್ಯಾʼ ಟ್ರೆಂಡ್‌ ಗೆ ಟಾಂಗ್‌ ಕೊಟ್ಟ ಕನ್ನಡಿಗ..ವಿಡಿಯೋ ವೈರಲ್‌

ಅಲ್ಲು ಅರ್ಹಾ ಅವರು ಸಮಂತಾ ರುತ್ ಪ್ರಭು ಅವರ ಪೌರಾಣಿಕ ನಾಟಕ ಶಾಕುಂತಲಂ ಮೂಲಕ ನಟನೆಯನ್ನು ಪ್ರಾರಂಭಿಸಿದರು. ಸ್ಟಾರ್ ಕಿಡ್ ತನ್ನ ಅಭಿನಯಕ್ಕಾಗಿ ಮೆಚ್ಚುಗೆ ಪಡೆದಿದೆ. ಇನ್ನು ಈ ದೇವರ ಸಿನಿಮಾದಲ್ಲಿ ಅಲ್ಲು ಅರ್ಹಾ ಪಾತ್ರದ ಅವಧಿ 10 ನಿಮಿಷ ಇರಲಿದ್ದು, ನಿಮಿಷಕ್ಕೆ 2 ಲಕ್ಷ ರೂ ಸಂಭಾವಣೆ ನೀಡುವ ಯೋಜನೆಯನ್ನು ಚಿತ್ರತಂಡ ಹಾಕಿಕೊಂಡಿದೆ. 

ಸದ್ಯ ಜಾನ್ವಿ ಕಪೂರ್ ನಾಯಕಿಯಾಗಿರುವ ಈ ‘ದೇವರ’ ಚಿತ್ರದಲ್ಲಿ ಪ್ರಕಾಶ್ ರಾಜ್, ಮೇಕಾ ಶ್ರೀಕಾಂತ್, ಶೈನ್ ಟಾಮ್ ಚಾಕೊ ಮತ್ತು ಚೈತ್ರಾ ರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ. ಮತ್ತು ಈ ಸಿನಿಮಾಗೆ ಅನಿರುದ್ಧ ರವಿಚಂದರ್ ಹಿನ್ನೆಲೆ ಸಂಗೀತವನ್ನು ಒದಗಿಸಿದ್ದಾರೆ. 

ಇದನ್ನೂ ಓದಿ-Ajmer 92 trailer out: 250 ಹುಡುಗಿಯರ ಕರುಳು ಹಿಂಡುವ ಕಥೆ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News