ಬೆಂಗಳೂರು: ‘ಜೊತೆ ಜೊತೆಯಲಿ’ ಟಾಪ್ ಲಿಸ್ಟ್ ನಲ್ಲಿರುವ ಕನ್ನಡದ ಧಾರವಾಹಿ. ಈ ಸೀರಿಯಲ್ ಅನ್ನು ಜನರು ರಾತ್ರಿ ಮಿಸ್ ಮಾಡದೆ ನೋಡುತ್ತಾರೆ. ಮಹಿಳೆಯರಷ್ಟೇ ಅಲ್ಲದೇ ಪುರುಷರೂ ಕೂಡ ‘ಜೊತೆ ಜೊತೆಯಲಿ’ ಧಾರವಾಹಿ ನೋಡಿ ಖುಷಿ ಪಡುತ್ತಿದ್ದಾರೆ. ಆದರೆ ಸೀರಿಯಲ್ ತಂಡ ಮತ್ತು ಅನಿರುದ್ಧ್ ನಡುವೆ ನಡೆದ ಸಂಘರ್ಷದಿಂದ ‘ಆರ್ಯವರ್ಧನ್’ ಪಾತ್ರದಲ್ಲಿ ಮಿಂಚಿದ ನಟ ದೂರವಾಗಿದ್ದಾರೆ.
ಮತ್ತೆ ಅನಿರುದ್ಧ್ ಅವರೇ ಸೀರಿಯಲ್ನಲ್ಲಿ ನಟಿಸಬೇಕು ಅಂತಾ ಹೆಂಗಳೆಯರು ಒತ್ತಾಯಿಸಿದ್ರೂ ಪ್ರಯೋಜನಕ್ಕೆ ಬಂದಿಲ್ಲ.ಇದೀಗ ಅವರ ಪಾತ್ರಕ್ಕೆ ಹರೀಶ್ ರಾಜ್ ಬಣ್ಣ ಹಚ್ಚುತ್ತಿದ್ದು, ಮುಂದೆ ಸೀರಿಯಲ್ ಹೆಂಗಿರಬಹುದು ಅನ್ನೋ ಕುತೂಹಲ ಮೂಡಿದೆ. ಪ್ಲಾಸ್ಟಿಕ್ ಸರ್ಜರಿ ಮಾಡುವ ಮೂಲಕ ಪಾತ್ರ ಬದಲಾವಣೆ ಮಾಡೋ ಪ್ಲಾನ್ನಲ್ಲಿ ‘ಜೊತೆ ಜೊತೆಯಲಿ’ ತಂಡವಿದೆ. ಇದರ ನಡುವೆ ಅನಿರುದ್ಧ್ ಸೋಷಿಯಲ್ ಮೀಡಿಯಾದಲ್ಲಿ ಒಂದು ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ಗೆ ಅಭಿಮಾನಿಗಳು ಸಾಲು ಸಾಲು ಕಾಮೆಂಟ್ ಮಾಡುತ್ತಿದ್ದಾರೆ.
ಇದನ್ನೂ ಓದಿ: ರಮೇಶ್ ಅರವಿಂದ್ ಬರ್ತ್ಡೇಗೆ ವಿಶ್ ಮಾಡಬೇಕಾ? ಅವರ ಫೋನ್ ನಂಬರ್ ಇಲ್ಲಿದೆ
‘ಸಂಘರ್ಷದ ದಿನಗಳಲ್ಲಿ ನನ್ನ ಮೇಲೆ ತಮಗಿರೋ ಅಪಾರವಾದ ಪ್ರೀತಿಯನ್ನು ನೋಡಿ ನಾನು ತಲೆ ಬಾಗುತ್ತೇನೆ. ಈ ಸಂಘರ್ಷದ ದಿನಗಳಲ್ಲಿ ತಾವು ಸಾವಿರಾರು ಸಂದೇಶಗಳ, ಟ್ವೀಟ್, ಕರೆಗಳ, ಪತ್ರಗಳ, ಪ್ರತಿಭಟನೆಗಳ, ಪತ್ರಿಕಾಗೋಷ್ಠಿಗಳ, ಪ್ರಾರ್ಥನೆಗಳ ಮುಖಾಂತರ ನನ್ನ ಪರ, ನನ್ನ ಬೆಂಬಲಕ್ಕೆ ನಿಂತಿದ್ದೀರಿ, ಅದಕ್ಕೆ ನಾನು ಚಿರ ಋುಣಿ’ಯಾಗಿದ್ದೇನೆ’ ಅಂತಾ ಅನಿರುದ್ಧ್ ಹೇಳಿದ್ದಾರೆ.
‘ತಮ್ಮ ಪ್ರಯತ್ನಗಳಿಗೆ ತಾವು ಅಂದುಕೊಂಡಿರೋ ಫಲ ಸಿಗಲಿಲ್ಲ ಅಂತಾ ದಯವಿಟ್ಟು ನಿರಾಶೆಗೊಳ್ಳಬೇಡಿ. ಶ್ರೀ ಅಮಿತಾಭ್ ಬಚ್ಚನ್ರವರ ತಂದೆ ಮಹಾನ್ ಕವಿ ಶ್ರೀ ಹರಿವಂಶ್ ರಾಯ್ ಬಚ್ಚನ್ರವರು ಹೇಳುತ್ತಿದ್ದರು ‘‘ಮನ್ ಕಾ ಹುವಾ ತೋ ಅಚ್ಛಾ, ನಾ ಹುವಾ ತೋ ಔರ್ ಭೀ ಅಚ್ಛಾ ಕ್ಯುಂಕೆ ತಬ್ ವೋ ಭಗವಾಗ್ ಕೀ ಇಚ್ಛಾ ಹೋತಿ ಹೈ ಔರ್ ಭಗವಾನ್ ತುಮ್ಹಾರೆ ಲಿಯೇ ಅಚ್ಛಾಹೀ ಸೋಚತಾ ಹೈ” (ನಮ್ಮ ಇಚ್ಛಾನುಸಾರ ಆದರೆ ಒಳ್ಳೆದು, ಆಗದೇ ಇದ್ದರೆ ಇನ್ನೂ ಒಳ್ಳೇದು.. ಏಕೆಂದರೆ ಆಗ ಅದು ದೇವರ ಇಚ್ಛೆ ಆಗಿರುತ್ತೆ ಹಾಗೂ ದೇವರು ನಮಗಾಗಿ ಒಳ್ಳೇದನ್ನೇ ಮಾಡುತ್ತಾನೆ) ಸ್ವಲ್ಪ ತಾಳ್ಮೆಯಿಂದ ಇರೋಣ, ತಮ್ಮ ಪ್ರೀತಿ, ಹಾರೈಕೆ, ಪ್ರೋತ್ಸಾಹ, ಆಶೀರ್ವಾದ ಹಾಗೂ ಪ್ರಾರ್ಥನೆ ನನ್ನ ಮುಂದಿನ ಯೋಜನೆಗಳ ಮೇಲೂ ಇರತ್ತೆ ಅನ್ನೋ ನಂಬಿಕೆ ನನಗಿದೆ. ತಮ್ಮೆಲ್ಲರನ್ನೂ ನಾನು ತುಂಬಾ ಪ್ರೀತಿಸುತ್ತೇನೆ… ಯಾವಾಗಲೂ ಹೀಗೆ ಎಂದೆಂದಿಗೂ ‘ಜೊತೆ ಜೊತೆಯಲಿ’ ಇರೋಣವೆಂದು ಪೋಸ್ಟ್ ಹಾಕಿದ್ದಾರೆ.
ಇದನ್ನೂ ಓದಿ: Yo Yo Honey Singh: ಪತ್ನಿಗೆ 1 ಕೋಟಿ ಜೀವನಾಂಶ ನೀಡಿ ವಿಚ್ಛೇದನ ಪಡೆದ ಖ್ಯಾತ ಗಾಯಕ ಹನಿಸಿಂಗ್!
ಸದ್ಯ ಸೀರಿಯಲ್ನಿಂದ ದೂರವಾಗಿರುವ ಅನಿರುದ್ಧ್ ನಡೆ ಮುಂದೆ ಯಾವ ಕಡೆ ಅಂತ ಕಾದು ನೋಡಬೇಕಿದೆ. ‘ಜೊತೆ ಜೊತೆಯಲಿ’ ಧಾರವಾಹಿಗೆ ಅನಿರುದ್ಧ್ ಅವರೇ ಸೂಕ್ತ. ಅವರನ್ನೇ ಮತ್ತೆ ಕರೆತರಬೇಕು ಅಂತಾ ಅಭಿಮಾನಿಗಳು ನಿರಂತರವಾಗಿ ಒತ್ತಾಯಿಸುತ್ತಲೇ ಇದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.