ʼJawanʼ Review : ಅಟ್ಲಿ ನಿರ್ದೇಶನದ ಬ್ಲಾಕ್‌ಬ್ಲಸ್ಟರ್ ಮೂವಿ ರಿಲೀಸ್

Jawan (Shah Rukh Khan) : ಬಿಡುಗಡೆಗೂ ಮುನ್ನ ಸಖತ್‌ ಸದ್ದು ಮಾಡಿದ್ದ ಶಾರುಖ್‌ಖಾನ್‌, ನಯನತಾರಾ ಮತ್ತು ವಿಜಯ್ ಸೇತುಪತಿ ಅಭಿನಯದ ಚಿತ್ರ  ‌ʼಜವಾನ್ʼ ಚಿತ್ರ ಇಂದು (ಸೆ.07) ರಿಲೀಸ್‌ ಆಗಿದ್ದು, ಸಿನಿಮಾ ಹೇಗಿದೆ ಅಂತ ಇಲ್ಲಿದೆ ನೋಡಿ.

Written by - Zee Kannada News Desk | Last Updated : Sep 7, 2023, 01:01 PM IST
  • ಬಹುನಿರೀಕ್ಷಿತ ಶಾರುಖ್‌ಖಾನ್‌ ಚಿತ್ರ ‌ʼಜವಾನ್ʼ ರಿಲೀಸ್‌.
  • ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ.
  • ವಿಶೇಷ ಅತಿಥಿ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಸಂಜಯ್‌ ದತ್‌ ಹಾಗೂ ದಳಪತಿ ವಿಜಯ್‌ ಅಭಿನಯ.
ʼJawanʼ Review : ಅಟ್ಲಿ ನಿರ್ದೇಶನದ ಬ್ಲಾಕ್‌ಬ್ಲಸ್ಟರ್ ಮೂವಿ ರಿಲೀಸ್ title=

Jawan Review : ವರ್ಷದ ಬಹುನಿರೀಕ್ಷಿತ ಶಾರುಖ್‌ಖಾನ್‌ ಅವರ ಚಿತ್ರ ಇಂದು ರಿಲೀಸ್‌ ಆಗಿದ್ದು, ಎಸ್‌ಆರ್‌ಕೆ ಅಭಿಮಾನಿಗಳಿಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ‌ʼಪಠಾಣ್ʼ ರಿಲೀಸ್‌ ಬಳಿಕ ಶಾರುಖ್‌ಖಾನ್‌ ವರ್ಷದಲ್ಲಿ ಎರಡನೇ ಬಾರಿ ‌ಬ್ಲಾಕ್‌ಬಸ್ಟರ್‌ ಸಿನಿಮಾ ʼಜವಾನ್ʼ ಮೂಲಕ ದೊಡ್ಡ ಪರದೆಯತ್ತ ಮರಳಿದ್ದು. ʼಜವಾನ್‌ʼ ಆಕ್ಷನ್‌ ಥ್ರಿಲ್ಲರ್‌ ಆಗಿದೆ. ಮೊದಲಾರ್ಧವು ಹೆಚ್ಚಾಗಿ ಆಕ್ಷನ್‌ ಥ್ರಿಲ್ಸ್‌ ಮತ್ತು ಕೆಲವು ಆಸಕ್ತಿದಾಯಕ ಆಕ್ಷನ್‌ ತುಣುಕುಗಳನ್ನು ಒಳಗೊಂಡಿದೆ.

ಪಠಾಣ್‌ ಸೇರಿದಂತೆ ಜವಾನ್‌ನಲ್ಲಿಯೂ SRK ಅವರು ಪೂರ್ಣಪ್ರಮಾಣದ ಸಾಹಸ ನಾಯಕನಾಗಿ ಕಾಣುತ್ತಾರೆ. ಅಲ್ಲದೇ ಸಿನಿಮಾದಲ್ಲಿ ಶಾರುಖ್‌ ಅವರೊಂದಿಗೆ ಲೇಡಿ ಸೂಪರ್‌ಸ್ಟಾರ್‌ ನಯನತಾರಾ ಸಮರ್ಥವಾಗಿ ಬೆಂಬಲಿಸಿದ್ದಾರೆ ಮತ್ತು ವಿಜಯ್‌ ಸೇತುಪತಿ ಎದುರಾಳಿಯಾಗಿ ಉತ್ತಮ ಸ್ಕ್ರೀನ್‌ ಪ್ರೆಸೆನ್ಸ್‌ ನೀಡಿದ್ದಾರೆ. 

ಇದನ್ನು ಓದಿ- ಬಿಡುಗಡೆಗೆ ಮುನ್ನವೇ ವಿಶ್ವದಾದ್ಯಂತ 51.17 ಕೋಟಿ ಗಳಿಸಿದ ಜವಾನ್ 

ಸಿನಿಮಾ ಗುರುವಾರ ಬೆಳಿಗ್ಗೆ ಹೌಸ್‌ಪುಲ್‌ ಪ್ರದರ್ಶಗಳನ್ನು ಕಂಡಿದ್ದು, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಜವಾನ್‌ ಸಂಪೂರ್ಣವಾಗಿ ಮಸಾಲಾ ಮನರಂಜನೆಯಾಗಿದ್ದು, ಥ್ರಿಲ್ಲರ್‌ನೊಂದಿಗೆ ಪ್ರಚೋದನೆಗೆ ತಕ್ಕಂತೆ ಜೀವಿಸುತ್ತದೆ. ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್ ಅಡಿಯಲ್ಲಿ ಗೌರಿ ಖಾನ್ ಮತ್ತು ಗೌರವ್ ವರ್ಮಾ ಚಿತ್ರವನ್ನು ನಿರ್ಮಿಸಿದ್ದಾರೆ. ಚಲನಚಿತ್ರವನ್ನು ಕಮರ್ಶಿಯಲ್‌ ಎಂಟರ್‌ಟೈನರ್‌ ಎಂದು ಹೇಳಲಾಗಿದ್ದು, ನಟ ದ್ವಿಪಾತ್ರದಲ್ಲಿ (ಗುಪ್ತಚರ ಅಧಿಕಾರಿ ಮತ್ತು ಕಳ್ಳ) ಕಾಣಿಸಿಕೊಂಡಿದ್ದಾನೆ.‌  

ಚಿತ್ರದಲ್ಲಿ ವಿಶೇಷ ಅತಿಥಿ ಪಾತ್ರಗಳಲ್ಲಿ ದೀಪಿಕಾ ಪಡುಕೋಣೆ, ಸಂಜಯ್‌ ದತ್‌ ಹಾಗೂ ದಳಪತಿ ವಿಜಯ್‌ ಅಭಿನಯಿಸಿದ್ದಾರೆ. ಸನ್ಯಾ ಮಲ್ಹೋತ್ರಾ, ಪಿಯಾಮಣಿ, ರಿಧಿ ಡೋಗ್ರಾ ಮತ್ತು ಇತರರು ಪ್ರಮುಖ ಪಾತ್ರದಲ್ಲಿದ್ದು, ಹಾಡುಗಳಿಗೆ ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News