ಜವಾನ್‌, ಲಿಯೋ ಎರಡು ಅಲ್ಲ..! ಮೊದಲ ದಿನವೇ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಂಡ ಸೂಪರ್‌ಹಿಟ್‌ ಸಿನಿಮಾಗಳಿವು

Highest grossing Indian films: ಜವಾನ್‌ ಸೇರಿದಂತೆ ಸದ್ಯ ಲಿಯೋ ಸಿನಿಮಾ ಭಾಕ್ಸಾಫೀಸ್‌ನಲ್ಲಿ ಭರ್ಜರಿಯಾಗಿ ಮುನ್ನುಗ್ಗುತ್ತಿವೆ. ಆದರೆ ಮೊದಲ ದಿನ ಓಪನಿಂಗ್‌ ಪಡೆದುಕೊಂಡ ಸಿನಿಮಾಗಳ ಪಟ್ಟಿಯಲ್ಲಿ ಈ ಎರಡು ಚಿತ್ರಗಳು ಹಿಂದುಳಿದಿವೆ. ಹಾಗಾದರೆ ಯಾವ ಚಿತ್ರ ಮೊದಲ ಸ್ಥಾನದಲ್ಲಿದೆ ಅಂತೀರಾ.. ಈ ಸ್ಟೋರಿ ಓದಿ..

Written by - Savita M B | Last Updated : Oct 21, 2023, 08:48 AM IST
  • ವಿಜಯ್ ಅಭಿನಯದ 'ಲಿಯೋ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ
  • ಲಿಯೋ ಹಿಂದೆಂದೂ ಕಾಣದ ಗಳಿಕೆಯನ್ನು ಫ್ರಿ-ಬುಕ್ಕಿಂಗ್ ಮೂಲಕ ಮಾಡಿದೆ.
  • ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳ ಪಟ್ಟಿ ಹೊರಬಿದ್ದಿದೆ
ಜವಾನ್‌, ಲಿಯೋ ಎರಡು ಅಲ್ಲ..! ಮೊದಲ ದಿನವೇ ಗ್ರ್ಯಾಂಡ್‌ ಓಪನಿಂಗ್‌ ಪಡೆದುಕೊಂಡ ಸೂಪರ್‌ಹಿಟ್‌ ಸಿನಿಮಾಗಳಿವು  title=

ವಿಜಯ್ ಅಭಿನಯದ 'ಲಿಯೋ' ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು, ಭಾರತೀಯ ಚಿತ್ರರಂಗದ ಇತಿಹಾಸವನ್ನೇ ಬದಲಿಸುತ್ತಿದೆ. ಲೋಕೇಶ್ ಕನಕರಾಜ್ ನಿರ್ದೇಶನದ ಲಿಯೋ ಹಿಂದೆಂದೂ ಕಾಣದ ಗಳಿಕೆಯನ್ನು ಫ್ರಿ-ಬುಕ್ಕಿಂಗ್ ಮೂಲಕ ಮಾಡಿದೆ. ಈ ಸಂದರ್ಭದಲ್ಲಿ ಮೊದಲ ದಿನ ಜಾಗತಿಕವಾಗಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರಗಳ ಪಟ್ಟಿ ಹೊರಬಿದ್ದಿದೆ. ಈ ಅಂಕಿ ಅಂಶವು ಪೂರ್ವವೀಕ್ಷಣೆ ಪ್ರದರ್ಶನಗಳನ್ನು ಒಳಗೊಂಡಿದೆ. 

ಪ್ರಮುಖ ವಿಶ್ಲೇಷಕರ ವರದಿಯ ಪ್ರಕಾರ, ಪ್ರಭಾಸ್-ರಾಜಮೌಳಿ ಅವರ ಬಾಹುಬಲಿ 2 ಜಾಗತಿಕವಾಗಿ ಟಾಪ್ ಗಳಿಕೆ ಮಾಡಿದೆ. ಮೊದಲ ದಿನವೇ ವಿಶ್ವದಾದ್ಯಂತ 201 ಕೋಟಿ ರೂ. ಕಲೆಕ್ಷನ್‌ ಮಾಡಿ ಮೊದಲನೇ ಸ್ಥಾನದಲ್ಲಿದೆ. ನಂತರ ಎರಡನೇ ಸ್ಥಾನ RRR ಮತ್ತು ಮೂರನೇ ಸ್ಥಾನ KGF2 ಚಿತ್ರಕ್ಕಿದೆ. 

ಇದನ್ನೂ ಓದಿ-ಆಸ್ಪತ್ರೆ ಬೆಡ್‌ ಮೇಲೆ ಗಂಭೀರ ಸ್ಥಿತಿಯಲ್ಲಿ ʼಗಂಗೆ ಬಾರೆ ತುಂಗೆ ಬಾರೆʼ ನಟಿ..! ಏನಾಯ್ತು ಸುನೈನಾಗೆ

ಚಲನಚಿತ್ರಗಳ ಪಟ್ಟಿ 

1) ಬಾಹುಬಲಿ 2 - 201 ಕೋಟಿ
2) RRR - 190 ಕೋಟಿ
3) ಕೆಜಿಎಫ್ 2 - 162 ಕೋಟಿ
4) ಲಿಯೋ ~ 148 ಕೋಟಿ *
5) ಜವಾನ್ - 128 ಕೋಟಿ

ಸದ್ಯ ಹಿಂದಿಭಾಷೆಯಲ್ಲಿ ಬಿಡುಗಡೆಯಾಗುವ ಮೂಲಕ ಈ ಪಟ್ಟಿಯಲ್ಲಿ ಲಿಯೋ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ವಿಜಯ್‌ ನಟಿಸಿದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಅತ್ಯುತ್ತಮ ಓಪನಿಂಗ್ ಪಡೆದ ಮೊದಲ ಚಿತ್ರವಾಯಿತು. ಲಿಯೋ ಮೊದಲ ದಿನವೇ ಸುಮಾರು 148 ಕೋಟಿ ಗಳಿಸಿದೆ. ಅಂದಾಜಿನ ಪ್ರಕಾರ, ಚಿತ್ರವು ಕೇರಳದಲ್ಲಿ 12 ಕೋಟಿ ಮತ್ತು ತಮಿಳುನಾಡಿನಲ್ಲಿ ಸುಮಾರು 35 ಕೋಟಿ ಗಳಿಸಿದೆ. 

ಇದನ್ನೂ ಓದಿ-Allu Arjun: ಅಲ್ಲು ಅರ್ಜುನ್ ರಿಜೆಕ್ಟ್ ಮಾಡಿದ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಿವು..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News