ನವದೆಹಲಿ: ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಅವರ ಬಹುನಿರೀಕ್ಷಿತ ಚಿತ್ರ ‘ಜವಾನ್’ ವಿಶ್ವದಾದ್ಯಂತ ಬಾಕ್ಸ್ ಆಫೀಸ್ ಧೂಳಿಪಟ ಮಾಡಿದೆ. ಬಿಡುಗಡೆಯಾದ ದಿನದಿಂದ ಸಖತ್ ಸೌಂಡ್ ಮಾಡುತ್ತಿರುವ ‘ಜವಾನ್’ ಕಲೆಕ್ಷನ್ ವಿಚಾರದಲ್ಲಿ ಮತ್ತೊಂದು ಮೈಲುಗಲ್ಲು ಸೃಷ್ಟಿಸುತ್ತಿದೆ. ಸೆಪ್ಟೆಂಬರ್ 7ರಂದು ಬಿಡುಗಡೆಯಾಗಿದ್ದ ಈ ಚಿತ್ರವು ಭಾರತದಲ್ಲಿ 350 ರೂ. ಕ್ಲಬ್ ಸಮೀಪದಲ್ಲಿದೆ. ಅಟ್ಲಿ ನಿರ್ದೇಶನದ ಈ ಆಕ್ಷನ್-ಥ್ರಿಲ್ಲರ್ ಸಿನಿಮಾ ವಿಶ್ವದಾದ್ಯಂತ ಕೇವಲ 6 ದಿನದಲ್ಲಿ 600 ಕೋಟಿ ರೂ. ಕಮಾಯಿ ಮಾಡಿದೆ.
‘ಜವಾನ್’ ಬಹುತೇಕ ಎಲ್ಲಾ ಆರಂಭಿಕ ದಾಖಲೆಗಳನ್ನು ಮುರಿದು ತನ್ನ ಓಟವನ್ನು ಮುಂದುವರಿಸಿದೆ. ಮೊದಲ ದಿನ ಭಾರತದ ಎಲ್ಲಾ ಭಾಷೆಗಳಲ್ಲಿ 74.50 ಕೋಟಿ ರೂ. ಗಳಿಸಿದ್ದ ಈ ಚಿತ್ರ ವಿಶ್ವದಾದ್ಯಂತ 129.06 ಕೋಟಿ ರೂ. ಕಾಮಾಯಿ ಮಾಡುವ ಮೂಲಕ ಹಿಂದಿ ಚಿತ್ರರಂಗದ ಇತಿಹಾಸದಲ್ಲಿ ಅತಿದೊಡ್ಡ ಆರಂಭಿಕ ದಿನಕ್ಕೆ ಸಾಕ್ಷಿಯಾಯಿತು. ವರದಿಗಳ ಪ್ರಕಾರ ಸೆಪ್ಟೆಂಬರ್ 12ರ 6ನೇ ದಿನಕ್ಕೆ ‘ಜವಾನ್’ ಭಾರತದಲ್ಲಿ 26.50 ಕೋಟಿ ರೂ. ಗಳಿಕೆ ಮಾಡಿದೆ. ಹಿಗಾಗಿ ಭಾರತದಲ್ಲಿ ಇದರ ಒಟ್ಟು ಕಲೆಕ್ಷನ್ 345.58 ಕೋಟಿ ರೂ. ತಲುಪಿದೆ.
#Jawan has crossed ₹ 600 CR in 6 Days Worldwide with an average of 100 cr + Gross On Each Day.
ASTONISHING #ShahRukhKhan pic.twitter.com/AxkDREoSUp
— Sumit Kadel (@SumitkadeI) September 12, 2023
ಇದನ್ನೂ ಓದಿ: ಖ್ಯಾತ ರೀಲ್ಸ್ ಸ್ಟಾರ್ಸ್ ವರ್ಷಾ ಕಾವೇರಿ, ವರುಣ್ ಆರಾಧ್ಯಾ ಪ್ರೇಮ ಕಹಾನಿಗೆ ಬಿತ್ತು ಬ್ರೇಕ್!!
‘ಜವಾನ್’ ಸಿನಿಮಾವು 'ಗದರ್ 2' ಮತ್ತು 'ಪಠಾಣ್' ಹಿಂದಿಕ್ಕಿ ಅತ್ಯಂತ ವೇಗವಾಗಿ 300 ಕೋಟಿ ರೂ. ಕ್ಲಬ್ ಪ್ರವೇಶಿಸಿ ಹೊಸ ದಾಖಲೆ ನಿರ್ಮಿಸಿದೆ. ಜಾಗತಿಕ ಮಟ್ಟದಲ್ಲಿ ಸೌಂಡ್ ಮಾಡುತ್ತಿರುವ 'ಜವಾನ್' ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ 600 ಕೋಟಿ ರೂ. ಗಡಿ ದಾಟಿದೆ ಅಂತಾ ತಮಿಳು ಸಿನಿಮಾ ವಿಮರ್ಶಕ ರಮೇಶ್ ಬಾಲಾ ಹೇಳಿದ್ದಾರೆ. ‘ಜವಾನ್’ ಬಾಕ್ಸ್ ಆಫೀಸ್ ಕಲೆಕ್ಷನ್ ಬಗ್ಗೆ ಟ್ವೀಟ್ ಮಾಡಿರುವ ಸಿನಿಮಾ ವಿಮರ್ಶಕ ಸುಮಿತ್ ಕಡೆಲ್, ‘ಜವಾನ್ ಸಿನಿಮಾ ಬೆರಗುಗೊಳಿಸುವ ದಾಖಲೆ ಕಲೆಕ್ಷನ್ ಮಾಡಿದೆ. ವಿಶ್ವದಾದ್ಯಂತ 6 ದಿನಗಳಲ್ಲಿ 600 ಕೋಟಿ ರೂ. ದಾಟಿದೆ. ಈ ಸಿನಿಮಾ ಪ್ರತಿ ದಿನದ ಸರಾಸರಿ 100 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿದೆ’ ಎಂದು ಹೇಳಿದ್ದಾರೆ.
‘ಜವಾನ್’ ಚಿತ್ರದಲ್ಲಿ ದಕ್ಷಿಣದ ಸ್ಟಾರ್ ಕಲಾವಿದರಾದ ನಯನತಾರಾ, ವಿಜಯ್ ಸೇತುಪತಿ ನಟಿಸಿದ್ದಾರೆ. ಚಿತ್ರಕ್ಕೆ ಅಟ್ಲಿ ನಿರ್ದೇಶನ ಮತ್ತು ಅನಿರುದ್ಧ ರವಿಚಂದರ್ ಸಂಗೀತವಿರುವ ಕಾರಣದಿಂದ ಸಿನಿಮಾಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ‘ಜವಾನ್' ಚಿತ್ರವನ್ನು ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಸಂಸ್ಥೆಯಡಿ ಗೌರಿ ಖಾನ್ ನಿರ್ಮಿಸಿದ್ದು, ಇದರ ಮ್ಯೂಸಿಕ್ ರೈಟ್ಸ್ ಈಗಾಗಲೇ 36 ಕೋಟಿ ರೂ.ಗೆ ಮಾರಾಟವಾಗಿದೆ.
ಇದನ್ನೂ ಓದಿ: ಭಾರತದ ಮೊದಲ ಬಯೋ-ಸೈನ್ಸ್ ಚಿತ್ರ ʼದಿ ವ್ಯಾಕ್ಸಿನ್ ವಾರ್ʼ ಟ್ರೇಲರ್ ರಿಲೀಸ್
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.