ಪುನೀತ್‌ ಧ್ವನಿಯಲ್ಲಿ 'ಜೇಮ್ಸ್' ಮರು ಬಿಡುಗಡೆ: ಒಟಿಟಿಯಲ್ಲೂ ಸಖತ್‌ ರೆಸ್ಪಾನ್ಸ್‌

 ಸೌಂಡ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಅಪ್ಪು ಒರಿಜಿನಲ್ ಧ್ವನಿಯನ್ನು 'ಜೇಮ್ಸ್' ಚಿತ್ರಕ್ಕೆ ಸೇರಿಸಲಾಗುತ್ತಿದೆ. ಈ ಮೂಲಕ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ 'ಜೇಮ್ಸ್' ಲಭ್ಯವಾಗಲಿದೆ. 

Written by - Bhavishya Shetty | Last Updated : Apr 18, 2022, 11:38 AM IST
  • ​​ಪುನೀತ್​ ರಾಜ್​ಕುಮಾರ್​ ಧ್ವನಿಯಲ್ಲಿ 'ಜೇಮ್ಸ್' ಮರು ಬಿಡುಗಡೆ
  • ಏಪ್ರಿಲ್‌ 22 ರಂದು ಅಪ್ಡೇಟ್ ಆಗಿ ಪ್ರದರ್ಶನ
  • ನಿರ್ದೇಶಕ ಚೇತನ್ ಕುಮಾರ್ ಮಾಹಿತಿ
ಪುನೀತ್‌ ಧ್ವನಿಯಲ್ಲಿ 'ಜೇಮ್ಸ್' ಮರು ಬಿಡುಗಡೆ: ಒಟಿಟಿಯಲ್ಲೂ ಸಖತ್‌ ರೆಸ್ಪಾನ್ಸ್‌ title=
James

ಬೆಂಗಳೂರು:  ಜೇಮ್ಸ್‌ ಚಿತ್ರ ಏಪ್ರಿಲ್ 14ರಂದು ಸೋನಿ ಲೈವ್ ಒಟಿಟಿಯಲ್ಲಿ ರಿಲೀಸ್ ಆಗಿದೆ. ಈ ಮೂಲಕ ಅಭಿಮಾನಿಗಳು ಮನೆಯಲ್ಲಿಯೇ ಕುಳಿತು ಕರ್ನಾಟಕ ರತ್ನನನ್ನು ಕಣ್ತುಂಬಿಕೊಂಡಿದ್ದು, ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಇನ್ನೊಂದೆಡೆ ದಿವಂಗತ ನಟ, ಪವರ್ ಸ್ಟಾರ್​​ ಪುನೀತ್​ ರಾಜ್​ಕುಮಾರ್​ ಅಭಿನಯದ 'ಜೇಮ್ಸ್' ಚಿತ್ರ ಏ .22 ರಂದು ಅಪ್ಡೇಟ್ ಆಗಿ ಪ್ರದರ್ಶನ ಕಾಣಲಿದ್ದು, ಪಾತ್ರಕ್ಕೆ ಅವರ ಧ್ವನಿಯನ್ನೇ ಸೇರಿಸಲಾಗುತ್ತಿದೆ ಎಂದು ಚಿತ್ರತಂಡ ತಿಳಿಸಿದೆ. ಭಾನುವಾರ ಖಾಸಗಿ ಹೋಟೆಲ್​​ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ನಿರ್ದೇಶಕ ಚೇತನ್ ಕುಮಾರ್ ಈ ವಿಚಾರವನ್ನು ತಿಳಿಸಿದ್ದಾರೆ.

ಇದನ್ನು ಓದಿ: "ರಾಜ್ಯದಲ್ಲಿನ ಕಾನೂನು ವ್ಯವಸ್ಥೆಯಲ್ಲಿ ಹಿಂದೆಂದೂ ಈ ರೀತಿಯ ಅರಾಜಕತೆ ಕಂಡಿರಲಿಲ್ಲ"

ಚೇತನ್​ ಕುಮಾರ್ ಆಕ್ಷನ್​ ಕಟ್​ ಹೇಳಿದ್ದ ಈ ಸಿನಿಮಾಗೆ ಕಿಶೋರ್​ ಪತ್ತಿಕೊಂಡ ಬಂಡವಾಳ ಹೂಡಿದ್ದರು. ಸಿನಿಮಾ ಕೆಲಸ ಇನ್ನೂ 30 ಪ್ರತಿಶತ ಬಾಕಿ ಇರುವಾಗಲೇ ಪುನೀತ್​ ರಾಜ್‌ಕುಮಾರ್‌ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಿನಿಮಾದ ಪುನೀತ್‌ ಪಾತ್ರಕ್ಕೆ ಶಿವರಾಜ್‌ ಕುಮಾರ್‌ ಧ್ವನಿ ನೀಡಿದ್ದರು. ಇದೀಗ ಮತ್ತೆ ಸಿನಿಮಾದ ಅಪ್‌ಡೇಟ್‌ ವರ್ಶನ್‌ ಬರಲಿದ್ದು, ಅದರಲ್ಲಿ ಸೌಂಡ್‌ ಇಂಜಿನಿಯರಿಂಗ್‌ ತಂತ್ರಜ್ಞಾನ ಬಳಸಿ, ಅಪ್ಪು ಒರಿಜಿನಲ್ ಧ್ವನಿಯನ್ನು ಚಿತ್ರಕ್ಕೆ ಸೇರಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಸೋನಿ ಲೈವ್‌ ಒಟಿಟಿಯಲ್ಲಿಯೂ ಏಪ್ರಿಲ್‌ 14 ರಂದು ಸಿನಿಮಾ ರಿಲೀಸ್‌ ಆಗಿದ್ದು, ಸಖತ್‌ ರೆಸ್ಪಾನ್ಸ್‌ ಸಿಕ್ಕಿದೆ. ಕರ್ನಾಟಕ ರತ್ನನ ಚಿತ್ರವನ್ನು ಮನೆಯಲ್ಲಿ ಕುಳಿತು ನೋಡಿಕೊಂಡು ಜನರು ಖುಷಿಪಟ್ಟಿದ್ದಾರೆ. 

ಅಪ್ಪು ಧ್ವನಿಯಲ್ಲಿ ಸಿನಿಮಾ: 

ಸೌಂಡ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಅಪ್ಪು ಒರಿಜಿನಲ್ ಧ್ವನಿಯನ್ನು 'ಜೇಮ್ಸ್' ಚಿತ್ರಕ್ಕೆ ಸೇರಿಸಲಾಗುತ್ತಿದೆ. ಈ ಮೂಲಕ ಹೊಸ ರೂಪದಲ್ಲಿ ಪ್ರೇಕ್ಷಕರಿಗೆ 'ಜೇಮ್ಸ್' ಲಭ್ಯವಾಗಲಿದೆ. ವಾಯ್ಸ್ ಮಿಕ್ಸಿಂಗ್ ತಂತ್ರಜ್ಞಾನ ಪ್ರಪಂಚದಲ್ಲಿಯೇ ಮೊದಲ ಪ್ರಯತ್ನ. ಹಲವು ವರ್ಷಗಳಿಂದ ರಿಸರ್ಚ್ ನಡೆಯುತ್ತಿತ್ತು. ಸಿನಿಮಾಗಳಿಗೆ ಎಲ್ಲಾ ಭಾಷೆಗೆ ಆಯಾ ಕಲಾವಿದರ ಧ್ವನಿ ಸೇರಿಸುವ ಮೊದಲ ಪ್ರಯತ್ನ ಇದಾಗಿದೆ. ನಟರ ಧ್ವನಿಯನ್ನು ಮರು ಸೃಷ್ಟಿಸುವ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸೌಂಡ್​​ ಇಂಜಿನಿಯರ್​ ಶ್ರೀನಿವಾಸ್​ರಾವ್​ ಅವರು, ಕೊನೆಗೂ 'ಜೇಮ್ಸ್​​' ಚಿತ್ರದಲ್ಲಿ ಪುನೀತ್​ ಅವರ ಧ್ವನಿಯನ್ನು ರಿಕ್ರಿಯೇಟ್​ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ನಿರ್ದೇಶಕ ಚೇತನ್‌ ಕುಮಾರ್‌ ಹೇಳಿದ್ದಾರೆ. 

ಇದನ್ನು ಓದಿ: ಕೆಜಿಎಫ್ 2 ಬಾಕ್ಸ್ ಆಫೀಸ್ ಧಮಾಕಾ...ಬಾಹುಬಲಿ ದಾಖಲೆ ಧೂಳಿಪಟ..!

"ಜೇಮ್ಸ್ ಚಿತ್ರದಲ್ಲಿ ಅಪ್ಪು ಸರ್ ಧ್ವನಿ ತರಲು ಸಾಕಷ್ಟು ಪ್ರಯತ್ನಪಟ್ಟಿದ್ದೇವೆ. ತಾಂತ್ರಿಕ ಸಂಸ್ಥೆ ಒಂದಕ್ಕೆ ಇದರ ಕೆಲಸ ವಹಿಸಿದ್ದೆವು. ಮೂರು ವರ್ಷಗಳ ಪ್ರಯತ್ನದಲ್ಲಿ ಇದು ಈ ಸಂಸ್ಥೆಗೆ ಸಿಕ್ಕ ಮೊದಲ ಯಶಸ್ಸು' ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News