Jailer: ನಿಲ್ಲದ ಜೈಲರ್‌ ಆರ್ಭಟ, ಪಾರ್ಟ್‌ 2ಕ್ಕೆ ಶಿವಣ್ಣನೇ ಬೇಕೆಂದ ತಮಿಳು ಮಂದಿ; ಕನ್ನಡಿಗರಿಗೆ ಇದೇ ಸಾರ್ಥಕಕ್ಷಣವೆಂದ ಫ್ಯಾನ್ಸ್‌

Shivanna craze in Jailer Movie : ತಮಿಳುನಾಡಿನಲ್ಲಿ ಜೈಲರ್‌ ಸಿನಿಮಾದ ಜೊತೆಗೆ ಶಿವಣ್ಣನ ಆರ್ಭಟವೂ ಹೆಚ್ಚಾಗಿದೆ. ಶಿವರಾಜ್‌ಕುಮಾರ್‌ ಅವರ ಸಿನಿಮಾ ನೋಡದ ತಮಿಳು ಮಂದಿ ಅವರ ಸಿನಿಮಾಗಳನ್ನು ಮಿಸ್‌ ಮಾಡದೇ ನೋಡ್ತೀವಿ ಎಂದು ಹೇಳುತ್ತಿದ್ದಾರೆ. ಸದ್ಯ ಶಿವಣ್ಣ ಅವರ ಕನ್ನಡಾಭಿಮಾನಿಗಳು ಇದೇ ನಮಗೆ ಸಾರ್ಥಕಕ್ಷಣ ಎನ್ನುತ್ತಿದ್ದಾರೆ.   

Written by - Savita M B | Last Updated : Aug 13, 2023, 05:53 PM IST
  • ಕನ್ನಡ ಸಿನಿರಂಗದಲ್ಲಿ ಮೂರು ದಶಕ ಕಳೆದ ಹ್ಯಾಟ್ರಿಕ್‌ ಹಿರೋ, ಸೆಂಚುರಿ ಸ್ಟಾರ್‌
  • ನೆಲ್ಸನ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಜೈಲರ್‌ ಸಿನಿಮಾ
  • ಜೈಲರ್‌ ಚಿತ್ರದಲ್ಲಿನ ಸಣ್ಣ ಪಾತ್ರವನ್ನೂ ಸಹ ಅಭಿಮಾನಿಗಳು ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.
Jailer: ನಿಲ್ಲದ ಜೈಲರ್‌ ಆರ್ಭಟ, ಪಾರ್ಟ್‌ 2ಕ್ಕೆ ಶಿವಣ್ಣನೇ ಬೇಕೆಂದ ತಮಿಳು ಮಂದಿ; ಕನ್ನಡಿಗರಿಗೆ ಇದೇ ಸಾರ್ಥಕಕ್ಷಣವೆಂದ ಫ್ಯಾನ್ಸ್‌  title=

Jailer Craze : ಜೈಲರ್‌ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ರಜನಿಕಾಂತ್‌ ನಟಿಸಿದ್ದಾರೆ. ಆದರೆ ಕ್ಷಣ ಮಾತ್ರ ತೆರೆಮೇಲೆ ಬಂದು ಹೋಗುವ ಶಿವಣ್ಣನ ಹವಾ ಮಾತ್ರ ಭರ್ಜರಿಯಾಗಿದೆ. ಚಿತ್ರದಲ್ಲಿ ನರಸಿಂಹನ ಪಾತ್ರ ಕಂಡು ತಮಿಳು ಮಂದಿ ನಿಬ್ಬೆರಗಾಗಿದ್ದಾರೆ. 

ಕನ್ನಡ ಸಿನಿರಂಗದಲ್ಲಿ ಮೂರು ದಶಕ ಕಳೆದ ಹ್ಯಾಟ್ರಿಕ್‌ ಹಿರೋ, ಸೆಂಚುರಿಸ್ಟಾರ್‌ ಶಿವಣ್ಣ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಹೃದಯದಲ್ಲಿ ಛಾಪು ಮೂಡಿಸಿದ್ದಾರೆ. ಇದೀಗ ಜೈಲರ್‌ನಲ್ಲಿನ ಶಿವಣ್ಣನ ಅಭಿನಯ ಕಂಡು ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಯ ಹಾವಳಿ ಶುರುಮಾಡಿದ್ದಾರೆ.

ನೆಲ್ಸನ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಜೈಲರ್‌ ಸಿನಿಮಾ ದಿನದಿಂದ ದಿನಕ್ಕೆ ತಾರಾಗಣದಲ್ಲಿರುವ ಕಲಾವಿದರ ಸಂಖ್ಯೆಯನ್ನು ಹೆಚ್ಚಿಸುತ್ತಲೇ ಇತ್ತು. ಅತ್ತ ಮಲಯಾಳಂನಿಂದ ಮೋಹನ್‌ ಲಾನ್‌, ಇತ್ತ ಕನ್ನಡದಿಂದ ಶಿವಣ್ಣ, ಬಾಲಿವುಡ್‌ನಿಂದ ಜಾಕಿ ಶ್ರಾಫ್‌ ಹೀಗೆ ಕ್ರೇಜ್‌ ಹೆಚ್ಚಿಸುತ್ತಲೇ ಸಿನಿಮಾ ರಿಲೀಸ್‌ ಆಯಿತು.  ಜೈಲರ್‌ ಚಿತ್ರದಲ್ಲಿನ ಸಣ್ಣ ಪಾತ್ರವನ್ನೂ ಸಹ ಅಭಿಮಾನಿಗಳು ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ-ನಟಿ ಮೇಘನಾಗೆ ನೆಮ್ಮದಿ ಕೊಟ್ಟ ‘ತತ್ಸಮ ತದ್ಭವ’.. ಸೋಮವಾರ ಮೊದಲ ಹಾಡು ರಿಲೀಸ್!

ಈ ಮಾಸ್‌ ಕಲಾವಿದರನ್ನು ನಿರ್ದೇಶಕ ಹೇಗೆ ತೆರೆ ಮೇಲೆ ತೋರಿಸುತ್ತಾರೆ ಎನ್ನುವುದು ಕುತೂಹಲ ಕೆರಳಿಸಿತ್ತು. ಸದ್ಯ ಸಿನಿಮಾ ಬಿಡುಗಡೆಯಾಗಿ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡಿದೆ. ಜೈಲರ್‌ ಚಿತ್ರದಲ್ಲಿನ ಸಣ್ಣ ಪಾತ್ರವನ್ನೂ ಸಹ ಅಭಿಮಾನಿಗಳು ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಅದಕ್ಕೆ ಶಿವಣ್ಣನ ದೃಶ್ಯವೇ ಉತ್ತಮ ನಿದರ್ಶನ. 

ಕ್ಲೈಮ್ಯಾಕ್ಸ್‌ ಪೂರ್ವದಲ್ಲಿ ಕಾಣಿಸಿಕೊಳ್ಳುವ ಶಿವಣ್ಣ ಸಖತ್‌ ಮಾಸ್‌ ಆಗಿ ನರಸಿಂಹನ ಪಾತ್ರದಲ್ಲಿ ಮಿಂಚಿದ್ದಾರೆ. ಅವರ ಮ್ಯಾನರಿಸಂ, ನಟನೆ ಕಂಡು ತೆಲುಗು, ತಮಿಳು, ಆಂದ್ರ ಹಾಗೂ ಕೇರಳ ಮಂದಿ ಅಚ್ಚರಿಗೊಂಡಿದ್ದಾರೆ. ಇನ್ನು ಈ  ಬಗ್ಗೆ ಪೋಸ್ಟ್‌ ಹಂಚಿಕೊಂಡಿರುವ ತಮಿಳು ಅಭಿಮಾನಿಗಳು ಜೈಲರ್‌ ಕಥೆಗೆ ಪಾರ್ಟ್‌ 2 ಮಾಡಲೂಹುದು, ಒಂದು ವೇಳೆ ಘೋಷನೆಯಾದರೆ ಭಾಗ ಎರಡಲ್ಲಿ ಶಿವಣ್ಣನೇ ಹಿರೋ ಆಗಬೇಕು ಎಂದು ತಮಿಳು ಫ್ಯಾನ್ಸ್‌ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ-20 ವರ್ಷಗಳ ನಂತರ ಮತ್ತೆ ಒಂದಾಗಲಿದ್ದಾರೆ ವಿಜಯ್- ಜ್ಯೋತಿಕಾ..!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News