ಜೈಲರ್ 14 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಇದು.. 1000 ಕೋಟಿ ಕ್ಲಬ್ ಸೇರುತ್ತಾ ತಲೈವಾ ಸಿನಿಮಾ?

Jailer box office collection Day 14 : ಜೈಲರ್ ಚಿತ್ರವು ತನ್ನ ಮೂರನೇ ವಾರವನ್ನು ಪ್ರವೇಶಿಸಿದೆ. ಪ್ರಪಂಚದಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ.   

Written by - Chetana Devarmani | Last Updated : Aug 24, 2023, 07:36 PM IST
  • ಜೈಲರ್ 14 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್
  • ಮೂರನೇ ವಾರವನ್ನು ಪ್ರವೇಶಿಸಿದ ಜೈಲರ್‌ ಸಿನಿಮಾ
  • ಜೈಲರ್‌ ಸಿನಿಮಾದ ಹಲವಾರು ಬಾಕ್ಸ್ ಆಫೀಸ್ ದಾಖಲೆ
ಜೈಲರ್ 14 ನೇ ದಿನದ ಬಾಕ್ಸ್ ಆಫೀಸ್ ಕಲೆಕ್ಷನ್ ಇದು.. 1000 ಕೋಟಿ ಕ್ಲಬ್ ಸೇರುತ್ತಾ ತಲೈವಾ ಸಿನಿಮಾ?  title=
Jailer box office collection

Jailer box office collection : ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ 'ಜೈಲರ್' ಚಿತ್ರ ಥಿಯೇಟರ್‌ಗಳಲ್ಲಿ ತನ್ನ ಐತಿಹಾಸಿಕ ಓಟವನ್ನು ಮುಂದುವರೆಸುತ್ತಿದೆ. ಚಿತ್ರವು ತನ್ನ ಮೂರನೇ ವಾರವನ್ನು ಪ್ರವೇಶಿಸಿದೆ. ಪ್ರಪಂಚದಾದ್ಯಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ಸೆಳೆಯುತ್ತಿದೆ. ವರದಿಗಳ ಪ್ರಕಾರ, ವಿಶ್ವಾದ್ಯಂತ 600 ಕೋಟಿ ರೂಪಾಯಿಗಳತ್ತ ಸಾಗುತ್ತಿದೆ. ಎರಡು ವಾರಗಳಲ್ಲಿ ಚಿತ್ರ ಸುಮಾರು 535 ಕೋಟಿ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ. ಏತನ್ಮಧ್ಯೆ, ಭಾರತದಲ್ಲಿ 'ಜೈಲರ್' 300 ಕೋಟಿ ರೂ ಕ್ಲಬ್‌ಗೆ ಪ್ರವೇಶಿಸಲು ಕೆಲವೇ ದಿನಗಳು ಬಾಕಿ ಉಳಿದಿವೆ.

ಆಗಸ್ಟ್ 10 ರಂದು ಥಿಯೇಟರ್‌ಗಳಲ್ಲಿ ಗ್ರ್ಯಾಂಡ್ ರಿಲೀಸ್ ಆದ ನಂತರ, 'ಜೈಲರ್' ಚಿತ್ರಮಂದಿರಗಳಲ್ಲಿ ಎರಡು ವಾರಗಳನ್ನು ಪೂರೈಸಿದೆ. ಎರಡು ವಾರಗಳಲ್ಲಿ, ಚಿತ್ರವು ಹಲವಾರು ಬಾಕ್ಸ್ ಆಫೀಸ್ ದಾಖಲೆಗಳನ್ನು ಸೃಷ್ಟಿಸಿತು.

ಇದನ್ನೂ ಓದಿ: ಈ ಬಾಲಿವುಡ್ ನಟಿಯರು ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಎಷ್ಟು ಕೋಟಿ ಶುಲ್ಕ ಪಡೆಯುತ್ತಾರೆ ಗೊತ್ತೇ? 

ಕಳೆದ ಎರಡು ವಾರಗಳಿಂದ ಚಿತ್ರಮಂದಿರಗಳಲ್ಲಿ 'ಜೈಲರ್' ಅಪೂರ್ವ ಪ್ರದರ್ಶನ ಕಾಣುತ್ತಿದೆ. ಆಗಸ್ಟ್ 23 ರಂದು, ಚಿತ್ರವು ಎರಡು ವಾರಗಳನ್ನು ಚಿತ್ರಮಂದಿರಗಳಲ್ಲಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾಯಿತು. ಆಗಸ್ಟ್ 23 ರಂದು ಚಿತ್ರವು ಸುಮಾರು 3.65 ಕೋಟಿ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಇದು ಬುಧವಾರ 19.71 ಶೇಕಡಾ ಆಕ್ಯುಪೆನ್ಸಿಯನ್ನು ದಾಖಲಿಸಿದೆ.

ತಮಿಳುನಾಡು, ಅಂತರಾಷ್ಟ್ರೀಯ ಮಾರುಕಟ್ಟೆ ಮಾತ್ರವಲ್ಲದೆ ಕೇರಳದಲ್ಲೂ 'ಜೈಲರ್' 50 ಕೋಟಿ ದಾಟಲಿದೆ. ನೆಲ್ಸನ್ ದಿಲೀಪ್‌ಕುಮಾರ್ ಬರೆದು ನಿರ್ದೇಶಿಸಿದ 'ಜೈಲರ್' ರಜನಿಕಾಂತ್ ಟೈಗರ್ ಮುತ್ತುವೇಲ್ ಪಾಂಡಿಯನ್ ಪಾತ್ರವನ್ನು ಒಳಗೊಂಡ ಕಮರ್ಷಿಯಲ್ ಆಕ್ಷನ್ ಎಂಟರ್‌ಟೈನರ್ ಆಗಿದೆ. ಚಿತ್ರದಲ್ಲಿ ವಿನಾಯಕನ್, ರಮ್ಯಾ ಕೃಷ್ಣನ್ ಮತ್ತು ವಸಂತ ರವಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದಲ್ಲಿ ಮೋಹನ್‌ಲಾಲ್, ಶಿವ ರಾಜ್‌ಕುಮಾರ್ ಮತ್ತು ಜಾಕಿ ಶ್ರಾಫ್ ಸ್ಫೋಟಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಜೈಲರ್‌ ಸಿನಿಮಾ 1000 ಕೋಟಿ ಕ್ಲಬ್‌ ಸೇರಬಹುದು ಎಂದು ರಜನಿಕಾಂತ್‌ ಅಭಿಮಾನಿಗಳು ಊಹಿಸುತ್ತಿದ್ದಾರೆ. 
 
ಇದನ್ನೂ ಓದಿ: ಒಟಿಟಿಯಲ್ಲಿ UNCUT 'ಓ ಮೈ ಗಾಡ್ 2' ಸಿನಿಮಾ, ಒಂದೂ ಸೀನ್‌ ಕಟ್ ಆಗಿಲ್ಲ.. ಸಂಭಾಷಣೆ ಬದಲಾಗಿಲ್ಲ! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News