Jacqueline Fernandez: ಹೇಗಿದೆ ನೋಡಿ ರಕ್ಕಮ್ಮನ ಕಟೌಟ್‌ ಡ್ರೆಸ್‌ ಲುಕ್‌..!

ಜಾಕ್ಲಿನ್ ಫರ್ನಾಂಡಿಸ್ ಸೋಷಿಯಲ್ ಮೀಡಿಯಾದಲ್ಲಿ ಬಿಸಿ ಏರಿಸುತ್ತಿದ್ದಾರೆ. ನಟಿ ತನ್ನ ಇತ್ತೀಚಿನ ಫೋಟೋಶೂಟ್​ನಲ್ಲಿ ಗೋಲ್ಡನ್ ಡ್ರೆಸ್‌ನಲ್ಲಿ ಡ್ರಾಪ್-ಡೆಡ್ ಬ್ಯೂಟಿಯಾಗಿ ಕಾಣಿಸಿದ್ದಾರೆ. ವಿಕ್ರಾಂತ್ ರೋಣ ನಟಿ ಜಾಕ್ಲಿನ್ ಫರ್ನಾಂಡಿಸ್ ಅವರು ಬ್ಯೂಟಿಫುಲ್ ಗೋಲ್ಡನ್ ಡ್ರೆಸ್ ಧರಿಸಿ ಸುಂದರವಾಗಿ ಕಾಣಿಸಿದ್ದಾರೆ. ಅವರ ಫೋಟೋಗಳು ವೈರಲ್ ಆಗಿದ್ದು, ನಟಿಯ ಲುಕ್ ನೋಡಿದ ನೆಟ್ಟಿಗರು ನೀವು ಉರ್ಫಿಯನ್ನೂ ಮೀರಿಸ್ತೀರಿ ಎಂದಿದ್ದಾರೆ.  

Written by - Zee Kannada News Desk | Last Updated : Mar 5, 2023, 02:11 PM IST
  • ಗೋಲ್ಡನ್ ಡ್ರೆಸ್‌ನಲ್ಲಿ ಡ್ರಾಪ್-ಡೆಡ್ ಬ್ಯೂಟಿಯಾಗಿ ಕಾಣಿಸಿದ್ದಾರೆ.
  • ನೆಟ್ಟಿಗರು ನೀವು ಉರ್ಫಿಯನ್ನೂ ಮೀರಿಸ್ತೀರಿ ಎಂದಿದ್ದಾರೆ.
  • ಬಾಲಿವುಡ್​ನ ಈ ನಟಿ ಇತ್ತೀಚೆಗೆ ಸೌತ್​ನಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ.
Jacqueline Fernandez:  ಹೇಗಿದೆ ನೋಡಿ ರಕ್ಕಮ್ಮನ ಕಟೌಟ್‌ ಡ್ರೆಸ್‌ ಲುಕ್‌..! title=

Jacqueline: ಫೆರ್ನಾಂಡಿಸ್ ಕೇವಲ ನಟಿಯಾಗಿರದೇ ಹಲವಾರು ಸಂಗೀತ ಪ್ರವಾಸಗಳು ಮತ್ತು ದೂರದರ್ಶನದ ಪ್ರಶಸ್ತಿ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. 2013 ರಲ್ಲಿ, ಅವರು ಶಾರುಖ್ ಖಾನ್, ರಾಣಿ ಮುಖರ್ಜಿ ಮತ್ತು ಮಾಧುರಿ ದೀಕ್ಷಿತ್ ಜೊತೆಗೆ ಆಕ್ಲೆಂಡ್, ಪರ್ತ್ ಮತ್ತು ಸಿಡ್ನಿಯಲ್ಲಿ ಟೆಂಪ್ಟೇಶನ್ಸ್ ರಿಲೋಡೆಡ್ ನಲ್ಲಿ ಪ್ರದರ್ಶನ ನೀಡಿದರು.  ಜುಲೈ 2014 ರಲ್ಲಿ, ಫರ್ನಾಂಡೀಸ್ ಅವರು ಕೊಲಂಬೊದಲ್ಲಿ ಒಂದು ರೆಸ್ಟೋರೆಂಟ್ ಅನ್ನು ತೆರೆದರು, ಕೇಮಾ ಸೂತ್ರ, ಬಾಣಸಿಗ ದರ್ಶನ್ ಮುನಿದಾಸ ಅವರ ಸಹಯೋಗದೊಂದಿಗೆ ಸಮಕಾಲೀನ ಶ್ರೀಲಂಕಾದ ಪಾಕಪದ್ಧತಿಯಲ್ಲಿ ಪರಿಣತಿ ಹೊಂದಿದ್ದಾರೆ.  

ಆಕ್ಲಿನ್ ವೈಟ್ ಟಾಪ್, ಪಲಾಜೋ ಹಾಗೂ ಬ್ಲೇಜರ್ ಧರಿಸಿ ಸಖತ್ ಆಗಿ ಪೋಸ್ ಕೊಟ್ಟಿದ್ದಾರೆ. ಬಾಲಿವುಡ್​ನ ಜನಪ್ರಿಯ ನಟಿಯರಲ್ಲಿ ಜಾಕಿ ಕೂಡಾ ಒಬ್ಬರು. ನಟಿ ಸೀರೆಗಿಂತ ಮಾಡರ್ನ್ ಡ್ರೆಸ್ ಧರಿಸುವುದೇ ಹೆಚ್ಚು. ಸುಂದರವಾದ ಸ್ಟೈಲಿಷ್ ಉಡುಗೆಗಳಲ್ಲಿ ಜಾಕಿ ಆಗಾಗ ಫೋಟೋಶೂಟ್ ಮಾಡಿಸಿಕೊಳ್ಳುತ್ತಾರೆ. ಚೆ್ರ್ರಿ ಬಣ್ಣದ ಈ ಸುಂದರ ರೆಡ್ ಗೌನ್​ನಲ್ಲಿ ಜಾಕ್ಲಿನ್ ಕ್ಯೂಟ್ ಕಾಣಿಸಿದ್ದಾರೆ. ಅವರ ಸ್ಟೈಲಿಷ್ ಇಯರಿಂಗ್ಸ್ ಗ್ಲಾಮರಸ್ ಚಟ್ ಕೊಟ್ಟಿದೆ.ಫುಲ್ ಬಾಡಿ ನೆಟ್ಟ್ ಡ್ರೆಸ್ ಧರಿಸಿ ಜಾಕಿ ಬ್ಲ್ಯಾಕ್ ಫ್ಯಾಷನ್​ಗೆ ಹೊಸ ಟ್ರೆಂಡ್ ಸೆಟ್ ಮಾಡಿದ್ದಾರೆ. 

ಇದನ್ನೂ ಓದಿ-Sharmila Tagore : 60 ರ ದಶಕದಲ್ಲಿ ಬಿಕಿನಿ ಫೋಟೋಶೂಟ್‌ನಿಂದ ಸಂಚಲನ ಸೃಷ್ಟಿಸಿದ್ದರು ಈ ಬೆಡಗಿ

ವಿಕ್ರಾಂತ್ ರೋಣ ಚೆಲುವೆಯ ಲುಕ್ ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ನಟಿ ಡ್ರೆಸ್ ಧರಿಸುವುದಷ್ಟೇ ಅಲ್ಲ ಅದಕ್ಕೆ ಸೂಟ್ ಆಗುವಂತಹ ಹಿನ್ನೆಲೆಯಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಾರೆ. ಇದು ಕಂಪ್ಲೀಟ್ ಲುಕ್​ನ ತೂಕ ಹೆಚ್ಚಿಸುತ್ತದೆ. ರೆಡ್ ಹೈಸ್ಲಿಟ್ ಬಾಡಿ ಕಾನ್ ಡ್ರೆಸ್​ನಲ್ಲಿ ನಟಿ ಜಾಕ್ಲಿನ್ ಅವರ ಈ ಅವತಾರ ಯುವಕರಿಗೆ ಫೇವರಿಟ್. ನಟಿ ಸಿಂಪಲ್ ಮೇಕಪ್ ಮಾಡಿಕೊಂಡು ಕಾಣಿಸಿಕೊಂಡಿದ್ದಾರೆ. ಜಾಕ್ಲಿನ್ ವೈಟ್ ಗೌನ್​ನಲ್ಲಿ ಸುಂದರವಾಗಿ ಕಾಣಿಸಿದ್ದಾರೆ. ಬಾಲಿವುಡ್​ನ ಈ ನಟಿ ಇತ್ತೀಚೆಗೆ ಸೌತ್​ನಲ್ಲಿ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಆಕಾಶ ನೀಲಿ ಬಣ್ಣದ ಶಾರ್ಟ್ ಬಾಡಿಕಾನ್ ಡ್ರೆಸ್​ನಲ್ಲಿ ಜಾಕ್ಲಿನ್ ಬೋಲ್ಡ್ ಆಗಿ ಕಾಣಿಸಿದ್ದಾರೆ. ಅವರ ಹೇರ್​ಸ್ಟೈಲ್ ಕೂಡಾ ಸುಂದರವಾಗಿದೆ,

ಇದನ್ನೂ ಓದಿ-Nawazuddin Siddiqui : ಹೆಂಡತಿ - ಮಕ್ಕಳನ್ನು ಮಧ್ಯರಾತ್ರಿ ಮನೆಯಿಂದ ಹೊರಹಾಕಿದ ನಟ ಸಿದ್ದಿಕಿ.. ವಿಡಿಯೋ ವೈರಲ್‌!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News