ಬೆಂಗಳೂರು: ಮೈಸೂರಿನ ಹೋಟೆಲ್ ವೊಂದರಲ್ಲಿ ನಟ ದರ್ಶನ್ ಮತ್ತವರ ಸ್ನೇಹಿತರ ಗ್ಯಾಂಗ್ ಬಡಪಾಯಿ ಸಪ್ಲೈಯರ್ ಮೇಲೆ ಹಲ್ಲೆ ನಡೆಸಿದ್ದಾರೆಂದು ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಗಂಭೀರ ಆರೋಪ ಮಾಡಿದ್ದಾರೆ.
ಗುರುವಾರ ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ(Basavaraj Bommai)ಯವರನ್ನು ಭೇಟಿ ಮಾಡಿದ ಇಂದ್ರಜಿತ್, ಸ್ಟಾರ್ ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನಲ್ಲಿ ಸೆಲೆಬ್ರಿಟಿಗಳ ಭಾಷೆ ಮತ್ತು ನಡವಳಿಕೆ ಮಿತಿಮೀರಿದೆ. ಸೆಲೆಬ್ರಿಟಿಗಳ ಗೂಂಡಾಗಿರಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಹೇಳಿದ್ದಾರೆ.
ನಾನು ಸಾಮಾನ್ಯರ ಪರ, ಆದರೆ ಇಂದು ಸಾಮಾನ್ಯರಿಗೆ ನ್ಯಾಯವೇ ಸಿಗುತ್ತಿಲ್ಲ. ಮೈಸೂರಿನ ಸಂದೇಶ್ ಪ್ರೀನ್ಸ್ ಹೋಟೆಲ್ ನಲ್ಲಿ ಇತ್ತೀಚೆಗೆ ದೊಡ್ಡ ಗಲಾಟೆಯೇ ನಡೆದಿತ್ತು. ಕಣ್ಣು ಮಂಜಾಗುವಂತೆ ದಲಿತ ಸಪ್ಲೈಯರ್ ಮೇಲೆ ದರ್ಶನ್(Darshan) ಮತ್ತವರ ಸ್ನೇಹಿತರ ಗ್ಯಾಂಗ್ ಹಲ್ಲೆ ನಡೆಸಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ನಾಶ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ: Rocking Star: ತಮ್ಮ ಸ್ಟಾರ್ಡಮ್ ಸೀಕ್ರೆಟ್ ಬಿಚ್ಚಿಟ್ಟ ರಾಕಿ ಬಾಯ್..!
ತಮಗೆ ನ್ಯಾಯ ಕೊಡಿಸುವಂತೆ ಸಪ್ಲೈಯರ್ ಪತ್ನಿ ಮತ್ತು ಕುಟುಂಬಸ್ಥರು ಕೇಳಿದರೆ ಸೆಟ್ಲಮೆಂಟ್ ಮಾಡಿ ಕಳಿಸಲಾಗುತ್ತದೆ. ತಮ್ಮ ಪತಿ ಮೇಲೆ ಹಲ್ಲೆ ನಡೆಸಿದವರ ಚಳಿ ಬಿಡಿಸಲು ಸಪ್ಲೈಯರ್ ಪತ್ನಿ ಪೊರಕೆ ಹಿಡಿದುಕೊಂಡು ಹೋಟೆಲ್ ಗೆ ಬಂದಿದ್ದರು. ನನ್ನ ಬಳಿ ಇಡೀ ಘಟನೆಯ ಬಗ್ಗೆ ಸಾಕ್ಷ್ಯಗಳಿವೆ. ನಾನು ಅದನ್ನು ಪೊಲೀಸರಿಗೆ ಒಪ್ಪಿಸುತ್ತೇನೆ. ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕೆಂದು ಇಂದ್ರಜಿತ್(Indrajit Lankesh) ಮನವಿ ಮಾಡಿಕೊಂಡಿದ್ದಾರೆ.
ಲೋನ್ ಪ್ರಕರಣಕ್ಕೆ ಇಂದ್ರಜಿತ್ ಎಂಟ್ರಿ
25 ಕೋಟಿ ರೂ. ಲೋನ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದರಲ್ಲಿಗ ಇಂದ್ರಜಿತ್ ಲಂಕೇಶ್(Indrajit Lankesh) ಎಂಟ್ರಿಯಾಗಿದೆ. ಸಾಲ ಪ್ರಕರಣದಲ್ಲಿ ಸಿಲುಕಿರುವ ಅರುಣಾ ಕುಮಾರಿಯವರಿಗೆ ಬೆದರಿಕೆ ಒಡ್ಡಲಾಗಿದೆ. ಇನೋವಾ ಕಾರಿನಲ್ಲಿ ಕೂರಿಸಿಕೊಂಡು ಸಾಲ ವಿಚಾರವಾಗಿ 4 ಜನರು ಮಹಿಳೆಗೆ ಬೆದರಿಕೆ ಹಾಕಿದ್ದಾರೆ. ಸಾಕಷ್ಟು ಬಾರಿ ಅವರಿಗೆ ಫೋನ್ ಕಾಲ್ ಮಾಡುವ ಮೂಲಕ ಹೆದರಿಸಿದ್ದಾರೆ. ಅವರಿಗೆ ನ್ಯಾಯ ಸಿಗಬೇಕೆಂಬುದಷ್ಟೇ ನನ್ನ ಕಳಕಳಿ. ತಲೆ ಸೀಳ್ತಿನಿ ಅಂದ ರೈತರ ರಾಯಬಾರಿ ನಟ ದರ್ಶನ್, ಈಗ ನಿರ್ಮಾಪಕರೇ ಅನ್ನದಾತರು ಅಂತಿದ್ದಾರೆ. ಮಹಿಳೆಯನ್ನು ಮನೆಗೆ ಮತ್ತು ತೋಟದ ಮನೆಗೆ ಕರೆಸಿಕೊಂಡಿದ್ದು ಏಕೆ ಎಂದು ನಟ ದರ್ಶನ್ ವಿರುದ್ಧ ಇಂದ್ರಜಿತ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: Rakshit Shetty: ‘ಕಿರಿಕ್ ಪಾರ್ಟಿ 2’ ಸಿನಿಮಾ ಯಾವಾಗ ಸೆಟ್ಟೇರಲಿದೆ ಗೊತ್ತಾ..?
ನಟ ಮತ್ತು ನಿರ್ಮಾಪಕರ ಜೊತೆ ಈ ಹಿಂದೆ ಹಲವಾರು ವ್ಯವಹಾರಗಳು ನಡೆದಿವೆ. ಈ ವೇಳೆ ಹಣದ ವಿಚಾರವಾಗಿ ಮನಸ್ಥಾಪಗಳು ನಡೆದಿವೆ. ಅರುಣಾ ಕುಮಾರಿ ವೈಯಕ್ತಿಕವಾಗಿ ನನಗೆ ಪರಿಚಯವಿಲ್ಲ. ಸಾಲದ ವಿಚಾರವಾಗಿ ತನಿಖೆ ನಡೆಯುತ್ತಿದ್ದು, ಅವರಿಗೆ ನ್ಯಾಯ ದೊರಕಬೇಕು. ದರ್ಶನ್(Darshan) ಮತ್ತು ನಿರ್ಮಾಪಕರು ಸೆಟಲ್ ಮೆಂಟ್ ಮಾಡಿಕೊಳ್ಳುವ ಮೂಲಕ ಒಂದಾದರೆ ಸಾಕಾ..? ಸಾಮಾನ್ಯರು ಜೈಲಿಗೆ ಹೋಗಬೇಕಾ..? ಎಂದು ಪ್ರಶ್ನಿಸಿರುವ ಇಂದ್ರಜಿತ್ ಈ ಬಗ್ಗೆ ಸಂಪೂರ್ಣ ತನಿಖೆ ನೆಡಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣದಲ್ಲಿ ಬಲಿಪಶುಗಳಾಗಿರುವವರಿಗೆ ನ್ಯಾಯ ದೊರಕಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ