Mahesh Babu - Rajamouli: ಮಹೇಶ್ ಬಾಬು-ರಾಜಮೌಳಿ ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್‌ ನಟನ ಎಂಟ್ರೀ!

Mahesh Babu - Rajamouli Movie Update: ತೆಲುಗು ಚಿತ್ರರಂಗದ ನಟ ಪ್ರಿನ್ಸ್‌ ಮಹೇಶ್‌ ಬಾಬು ಹಾಗೂ ನಿರ್ದೇಶಕ ರಾಜಮೌಳಿ ಕಾಂಬೋದಲ್ಲಿ ಮೂಡಿಬರಲಿರುವ ಸಿನಿಮಾ ತಂಡಕ್ಕೆ ಇದೀಗ ಮತ್ತೊಬ್ಬ ಸ್ಟಾರ್‌ ನಟನ ಎಂಟ್ರೀಯಾಗುತಿದೆ. ಹಾಗಾದ್ರೆ ಆ ಸ್ಟಾರ್‌ ನಟ ಯಾರು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌.

Written by - Zee Kannada News Desk | Last Updated : Feb 11, 2024, 11:35 AM IST
  • ಸದ್ಯ ಮಹೇಶ್‌ ಬಾಬು ಜೊತೆಗೆ ಹೊಸ ಚಿತ್ರ ಆರಂಭಿಸಲು ರಾಜಮೌಳಿ ಭಾರಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇದೀಗ ಈ ಸಿನಿಮಾಗೆ ಮತ್ತೊಬ್ಬ ಸ್ಟಾರ್ ನಟರೊಬ್ಬರು ಎಂಟ್ರಿ ನೀಡಲಿದ್ದಾರೆ
  • ಇತ್ತೀಚೆಗಷ್ಟೇ ಜರ್ಮನಿಗೆ ಹೋಗಿದ್ದ ಮಹೇಶ್ ಬಾಬು ಒಂದಷ್ಟು ತಯಾರಿಗಳನ್ನು ತೆಗೆದುಕೊಂಡು ಬಂದಿದ್ದು, ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಥೆಯನ್ನು ಒಳಗೊಂಡಿರುವ ಸಿನಿಮಾ ಎಂದು ಹೇಳಲಾಗಿದೆ.
  • ಇನ್ನು, ರಾಜಮೌಳಿ ಯಾವಾಗಲೂ ತಮ್ಮ ತಂಡದೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದು, ಹಲವು ಸಿನಿಮಾಗಳಿಂದ ತಮ್ಮ ಟೆಕ್ನಿಷಿಯನ್ ಟೀಮ್ ಅನ್ನು ಚೇಂಜ್ ಮಾಡಿಲ್ಲ.
Mahesh Babu - Rajamouli: ಮಹೇಶ್ ಬಾಬು-ರಾಜಮೌಳಿ ಚಿತ್ರತಂಡಕ್ಕೆ ಮತ್ತೊಬ್ಬ ಸ್ಟಾರ್‌ ನಟನ ಎಂಟ್ರೀ! title=

Star Actor Entry To Mahesh Babu - Rajamouli Movie: ಟಾಲಿವುಡ್‌ನ ಪ್ಯಾನ್‌ ಇಂಡಿಯಾ ನಿರ್ದೇಶಕ ರಾಜಮೌಳಿ ಜನಪ್ರಿಯತೆ ಕಳೆದ ಒಂಬತ್ತು ವರ್ಷಗಳಲ್ಲಿ  ಏರಿಕೆ ಆಗಿ ಹಾಲಿವುಡ್‌ ಮಟ್ಟದಲ್ಲಿ ಪಡೆದಿದೆ. ಈ ಡೈರೆಕ್ಟರ್‌ನ ಸಿನಿಮಾ ಬರ್ತಿದೆಯೆಂದರೆ, ಅದರ ಒಂದೊಂದು ಅಪ್‌ಡೇಟ್‌ಗಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಾರೆ. ಸದ್ಯ ಮಹೇಶ್‌ ಬಾಬು ಜೊತೆಗೆ ಹೊಸ ಚಿತ್ರ ಆರಂಭಿಸಲು ರಾಜಮೌಳಿ ಭಾರಿ ಸಿದ್ದತೆ ಮಾಡಿಕೊಳ್ಳುತ್ತಿದ್ದು, ಇದೀಗ ಈ ಸಿನಿಮಾಗೆ ಮತ್ತೊಬ್ಬ ಸ್ಟಾರ್ ನಟರೊಬ್ಬರು ಎಂಟ್ರಿ ನೀಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ.

ಇದೀಗ ಮಹೇಶ್ ಬಾಬು ಹಾಗೂ ರಾಜಮೌಳಿ ಒಟ್ಟಾಗಿ ಮಾಡಲು ಹೊರಟಿರುವ ಚಿತ್ರದಲ್ಲಿ ನಾಗಾರ್ಜುನ ಬಣ್ಣ ಹಚ್ಚುವ ಸಾಧ್ಯತೆ ಇದೆಯಂತೆ. ಟಾಲಿವುಡ್‌ ಪ್ರಿನ್ಸ್‌ ಹಾಗೂ ಸ್ಟಾರ್‌ ಡೈರೆಕ್ಟರ್‌ ಕಾಂಬಿನೇಷನ್‌ನ ಸಿನಿಮಾದಲ್ಲಿ ನಾಗಾರ್ಜುನ ಯಾವ ಪಾತ್ರ ಮಾಡಲಿದ್ದಾರೆ ಎಂಬುದರ  ಮಾಹಿತಿ ಇನ್ನೂ ರಿವೀಲ್‌ ಆಗಿಲ್ಲ, ಆದರೆ ಒಂದು ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆಂಬ ವಿಷಯ ಖಚಿತ ಎನ್ನಲಾಗಿದೆ. ಇದರ ಬಗ್ಗೆ ಚಿತ್ರತಂಡವೇ ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳಬೇಕಿದ್ದು, ಆದರೆ ಈ ಚಿತ್ರವನ್ನು ಕೆ ಎಲ್ ನಾರಾಯಣ ನಿರ್ಮಾಣ ಮಾಡುತ್ತಿದ್ದಾರೆ. 

ಇದನ್ನೂ ಓದಿ: Ramayana: ರಾಮಾಯಣ ಚಿತ್ರದಲ್ಲಿ ರಾವಣನ ಸಹೋದರಿ ಶೂರ್ಪನಖಿಯಾಗಿ ಅಭಿನಯಿಸುತ್ತಿರುವರು ಯಾರು ಗೊತ್ತೆ?

ಇತ್ತೀಚೆಗಷ್ಟೇ ಜರ್ಮನಿಗೆ ಹೋಗಿದ್ದ ಮಹೇಶ್ ಬಾಬು ಒಂದಷ್ಟು ತಯಾರಿಗಳನ್ನು ತೆಗೆದುಕೊಂಡು ಬಂದಿದ್ದು, ಇದೊಂದು ಫಾರೆಸ್ಟ್ ಅಡ್ವೆಂಚರಸ್ ಕಥೆಯನ್ನು ಒಳಗೊಂಡಿರುವ ಸಿನಿಮಾ ಎಂದು ಹೇಳಲಾಗಿದೆ. ತಂದೆ ವಿಜಯೇಂದ್ರ ಪ್ರಸಾದ್ ಜೊತೆಗೂಡಿ ನಿರ್ದೇಶಕ ರಾಜಮೌಳಿ ಈಗಾಗಲೇ ಸ್ಕ್ರಿಪ್ಟ್‌ ಕಂಪ್ಲೀಟ್ ಮಾಡಿರುವಿದರಿಂದ, 2024ರ ಏಪ್ರಿಲ್‌ನಿಂದ ಶೂಟಿಂಗ್ ಆರಂಭವಾಗುವ ಸಾಧ್ಯತೆಗಳಿವೆ. ಇದು ಮಹೇಶ್ ಬಾಬು 29ನೇ ಚಿತ್ರವಾಗಿದ್ದು, 2025ರಲ್ಲಿ ಬಹುಭಾಷೆಯಲ್ಲಿ ತೆರೆಗೆ ಬರಲಿದೆ. ಆಫ್ರಿಕಾ, ಯುರೋಪ್ ದೇಶಗಳ ದಟ್ಟಾರಣ್ಯದಲ್ಲಿ ಶೂಟಿಂಗ್ ಮಾಡಲು ರಾಜಮೌಳಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಇನ್ನು, ರಾಜಮೌಳಿ ಯಾವಾಗಲೂ ತಮ್ಮ ತಂಡದೊಂದಿಗೆ ಕೆಲಸ ಮಾಡಲು ಬಯಸುತ್ತಿದ್ದು, ಹಲವು ಸಿನಿಮಾಗಳಿಂದ ತಮ್ಮ ಟೆಕ್ನಿಷಿಯನ್ ಟೀಮ್ ಅನ್ನು ಚೇಂಜ್ ಮಾಡಿಲ್ಲ. ಆದರೆ ಈ ಸಿನಿಮಾದಿಂದ ಅದರಲ್ಲಿ ಒಂದಷ್ಟು ಬದಲಾವಣೆ ಆಗಲಿದ್ದು, ಈ ನಿರ್ದೇಶಕನ ಜೊತೆಗೆ ಕಳೆದ 20 ವರ್ಷಗಳಿಂದ ಕೆಲಸ ಮಾಡುತ್ತಿರುವ ಛಾಯಾಗ್ರಹಕ ಕೆಕೆ ಸೆಂಥಿಲ್ ಕುಮಾರ್ ಈ ಬಾರಿ ಬದಲಾವಣೆ ಮಾಡಲಾಗುತ್ತಿದೆ. ಆ ಜಾಗಕ್ಕೆ ಛಾಯಾಗ್ರಹಕ ಪಿಎಸ್ ವಿನೋದ್ ಎಂಟ್ರಿ ಕೊಡಲಿದ್ದಾರಂತೆ.

ಇದನ್ನೂ ಓದಿ: ಖ್ಯಾತ ಬಾಲಿವುಡ್‌ ನಟ ಮಿಥುನ್ ಚಕ್ರವರ್ತಿಗೆ ಬ್ರೇನ್‌ ಸ್ಟ್ರೋಕ್‌, ಆಸ್ಪತ್ರೆಗೆ ದಾಖಲು

ಮಹೇಶ್ ಬಾಬು ಹಾಗೂ ರಾಜಮೌಳಿ ಚಿತ್ರದಲ್ಲಿ 'ಆರ್‌ಆರ್‌ಆರ್', 'ಬಾಹುಬಲಿ' ಸಿನಿಮಾಗಳಿಗೆ ವಿಎಫ್‌ಎಕ್ಸ್ ಸೂಪರ್‌ವೈಸರ್ ಆಗಿದ್ದ ಶ್ರೀನಿವಾಸ್ ಮೋಹನ್ ಜಾಗಕ್ಕೆ, 'ಮಗಧೀರ', 'ಈಗ' ಚಿತ್ರಗಳ ವಿಎಫ್‌ಎಕ್ಸ್ ಸೂಪರ್‌ವೈಸರ್ ಕಮಲ್ ಕಣ್ಣನ್ ಎಂಟ್ರಿ ಕೊಡಲಿದ್ದಾರೆ. ಸಂಕಲನ ವಿಭಾಗದಲ್ಲಿ ಶ್ರೀಕರ್ ಪ್ರಸಾದ್ ಬದಲು ಕೋಟಗಿರಿ ವೆಂಕಟೇಶ್ವರ ರಾವ್‌ಗೆ ಅವಕಾಶ ನೀಡಲಾಗಿದೆ. ಆದರೆ ಸಂಗೀತ ನಿರ್ದೇಶಕರಾಗಿ ಎಂಎಂ ಕೀರವಾಣಿಯೇ ಮುಂದುವರಿಯಲಿದ್ದಾರೆ ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News