ಮದುವೆ ಸಂಭ್ರಮದ ಮಧ್ಯೆಯೇ ಈ ನಿರ್ಧಾರ ತೆಗೆದುಕೊಂಡ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ! ಕಾರಣ ?

Parineeti Raghav Wedding : ಇವರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಈ ಇಬ್ಬರೂ ತಾರೆಯರು ಮದುವೆಯ ದಿನಾಂಕವನ್ನು ಪ್ರಕಟಿಸಿಲ್ಲ. 

Written by - Ranjitha R K | Last Updated : Jul 17, 2023, 11:08 AM IST
  • ಮೇ ತಿಂಗಳಲ್ಲಿ ಪರಿಣಿತಿ ಚೋಪ್ರಾ ನಿಶ್ಚಿತಾರ್ಥ
  • ಮದುವೆಯ ದಿನಾಂಕವನ್ನು ಪ್ರಕಟಿಸಿಲ್ಲ.
  • ನಡೆಯುವುದು ಒಂದೇ ಆರತಕ್ಷತೆ
ಮದುವೆ ಸಂಭ್ರಮದ ಮಧ್ಯೆಯೇ ಈ ನಿರ್ಧಾರ ತೆಗೆದುಕೊಂಡ ಪರಿಣಿತಿ ಚೋಪ್ರಾ ರಾಘವ್ ಚಡ್ಡಾ ! ಕಾರಣ ?  title=

Parineeti Raghav Wedding : ಪರಿಣಿತಿ ಚೋಪ್ರಾ ಮತ್ತು ರಾಘವ್ ಚಡ್ಡಾ ಈ ವರ್ಷದ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಿಶ್ಚಿತಾರ್ಥದ ನಂತರ ಈ ಜೋಡಿ ಬಹುತೇಕ ಸ್ಥಳಗಳಲ್ಲಿ ಜೋತೆಯ್ಹಾಗಿ ಕಾಣಿಸಿಕೊಂಡಿದೆ. ಇವರಿಬ್ಬರ ಮದುವೆಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಇದುವರೆಗೂ ಈ ಇಬ್ಬರೂ ತಾರೆಯರು ಮದುವೆಯ ದಿನಾಂಕವನ್ನು ಪ್ರಕಟಿಸಿಲ್ಲ. ಏತನ್ಮಧ್ಯೆ, ಮದುವೆಗೆ ಸಂಬಂಧಿಸಿದಂತೆ ಈ ಜೋಡಿ ನಿರ್ಧಾರವೊಂದನ್ನು ತೆಗೆದುಕೊಂಡಿದೆ ಎನ್ನುವ ಸುದ್ದಿ ಹೊರ ಬಿದ್ದಿದೆ.  

ನಡೆಯುವುದು ಒಂದೇ ಆರತಕ್ಷತೆ : 
ಮದುವೆಗೆ ಸಂಬಂಧಿಸಿದಂತೆ ಈ ಮೊದಲು ಎರಡು ಆರತಕ್ಷತೆ ನಡೆಯಲಿದೆ ಎನ್ನುವ ಮಾಹಿತಿ ಕೇಳಿ ಬಂದಿತ್ತು. ಮುಂಬೈ ಮತ್ತು ಚಂಡೀಗಢದಲ್ಲಿ ಇಬ್ಬರೂ ಆರತಕ್ಷತೆ ನೀಡಲಿದ್ದಾರೆ ಎಂಬ ವರದಿಗಳು  ಹೊರ ಬಿದ್ದಿತ್ತು. ಆದರೆ ಈಗ  ಈ ಜೋಡಿ ಗುರುಗ್ರಾಮ್‌ನ 'ದಿ ಲೀಲಾ ಆಂಬಿಯನ್ಸ್ ಗುರುಗ್ರಾಮ್ ಹೋಟೆಲ್' ನಲ್ಲಿ ಮಾತ್ರ ಆರತಕ್ಷತೆಯನ್ನು ಯೋಜಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಪರಿಣಿತಿ ಮತ್ತು ರಾಘವ್ ಅವರ ಪೋಷಕರು ಫುಡ್ ಟೆಸ್ಟಿಂಗ್ ಗಾಗಿ ಹೋಟೆಲ್‌ಗೆ ಆಗಮಿಸಿದ್ದರಂತೆ. 

 

 
 
 
 

 
 
 
 
 
 
 
 
 
 
 

A post shared by @parineetichopra

 ಇದನ್ನೂ ಓದಿ : Monalisa : ಬಿಕಿನಿಯಲ್ಲಿ ಮಿಂಚಿದ ನಟಿ ಮೋನಾಲಿಸಾ..! ಫೋಟೋಸ್‌ ನೋಡಿ

ಆಹಾರದ ರುಚಿ ನೋಡಲು ಬಂದ ಪೋಷಕರು : 
ಮಾಧ್ಯಮಗಳ ವರದಿ ಪ್ರಕಾರ, ಶುಕ್ರವಾರ ಇಬ್ಬರ ಪೋಷಕರು ಆಹಾರ ರುಚಿ ನೋಡುವುದಕ್ಕಾಗಿ ಹೊಟೇಲ್ ಗೆ ಆಗಮಿಸಿದ್ದರು ಎನ್ನಲಾಗಿದೆ. ಆದರೆ ಈ ಸಮಯದಲ್ಲಿ ಪರಿಣಿತಿ ಮತ್ತು ರಾಘವ್ ಕಾಣಿಸಿಕೊಂಡಿಲ್ಲ. ವರದಿಗಳನ್ನು ನಂಬುವುದಾದರೆ, ಫುಡ್ ಟೆಸ್ಟಿಂಗ್ ವೇಳೆ ದೊಡ್ಡ ಮೆನುವನ್ನೇ ಸಿದ್ದ ಪಡಿಸಲಾಗಿತ್ತು ಎನ್ನಲಾಗಿದೆ. 

ದೆಹಲಿ-ಎನ್‌ಸಿಆರ್‌ನಲ್ಲಿ ನಡೆಯಲಿದೆ  ಆರತಕ್ಷತೆ : 
ಪರಿಣಿತಿ ರಾಘವ್  ಜೋಡಿ ದೆಹಲಿಯಲ್ಲೇ ಆರತಕ್ಷತೆಯನ್ನು ನಿಗದಿಪಡಿಸಲಿದ್ದಾರೆ. ರಾಘವ್ ಅವರ ಜನ್ಮಸ್ಥಳ ದೆಹಲಿ ಮತ್ತು ಅವರ ಸ್ನೇಹಿತರು ಮತ್ತು ಹತ್ತಿರದ ಸಂಬಂಧಿಕರು ಕೂಡಾ ದೆಹಲಿಯಲ್ಲಿಯೇ ವಾಸವಿದ್ದಾರೆ.  ಮದುವೆಯ ದಿನಾಂಕದ ಬಗ್ಗೆ ದಂಪತಿಗಳು ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ, ಆದರೆ ಈ ವರ್ಷ ಅಕ್ಟೋಬರ್‌ನಲ್ಲಿ ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗಿದೆ.  ನಿಶ್ಚಿತಾರ್ಥದ ನಂತರ, ಪರಿಣಿತಿ ಮತ್ತು ರಾಘವ್ ನಿರಂತರವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇವರಿಬ್ಬರ ನಡುವಿನ ಕೆಮಿಸ್ಟ್ರಿ ಕೂಡಾ ಅಭಿಮಾನಿಗಳಿಗೆ ಇಷ್ಟವಾಗುತ್ತಿದೆ. 

 

 
 
 
 

 
 
 
 
 
 
 
 
 
 
 

A post shared by @parineetichopra

 ಇದನ್ನೂ ಓದಿ : ಮದುವೆಯಾಗದೇ ಗರ್ಭಿಣಿಯಾದ ನಟಿ ಸಾಯಿ ಪಲ್ಲವಿ..! ವಿಡಿಯೋ ವೈರಲ್ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News