ಬೆಂಗಳೂರು : ಇದುವರೆಗೂ ಬಾಡಿಗೆ ಮನೆ ವಿವಾದಕ್ಕೆ ಸಂಬಂಧಿಸಿದಂತೆ ಮೌನ ತಾಳಿದ್ದ ರಾಕಿಂಗ್ ಸ್ಟಾರ್ ಯಶ್ ಇದೀಗ ತಮ್ಮ ಮೌನ ಮುರಿದಿದ್ದಾರೆ.
ಈ ಬಗ್ಗೆ ಯಾವುದೇ ಮಾಧ್ಯಮಗಳ ಮುಂದೆ ಹೋಗದೆ ಫೇಸ್ಬುಕ್ ಲೈವ್ ನಲ್ಲಿ ಈ ವಿವಾದಕ್ಕೆ ಸ್ಪಷ್ಟನೆ ನೀಡಿರುವ ಯಶ್ ವಿವಾದದ ಸಂಪೂರ್ಣ ವಿವರಣೆ ನೀಡಿದ್ದಾರೆ.
"ನಾನು ಅನಾವಶ್ಯಕ ವಿಷಯಗಳಿಗೆ ಮಾತನಾದುವುದಿಲ್ಲ, ಹಾಗೇ ಪ್ರತಿಕ್ರಿಯಿಸುವುದಿಲ್ಲ. ಆದರೆ ಈ ಬಾಡಿಗೆ ಮನೆ ವಿಚಾರವಾಗಿ ನಾನು ಇಂದು ಹೇಳಲೇಬೇಕಿದೆ. ಸತ್ಯವಾಗಿಯೂ ಈ ರೀತಿ ಯಾವುದೂ ನಡೆದಿಲ್ಲ. ಪ್ರತಿ ತಿಂಗಳೂ ತಪ್ಪದೆ ನಾವು ಬಾಡಿಗೆ ಕಟ್ಟುತ್ತಿದ್ದೇವೆ. ಮನೆ ಓನರ್ ಸಹ ನಮ್ಮೊಂದಿಗೆ ಬಹಳ ಚೆನ್ನಾಗಿಯೇ ಇದ್ದರು. ಆ ಮನೆ ಯಶ್ ಅವರಿಗೆ ಲಕ್ಕಿ ಮನೆ ಅಂತೆ, ಅದಕ್ಕೆ ಅವರು ಮನೆ ಬಿಟ್ಟುಕೊಡುತ್ತಿಲ್ಲ ಎಂಡು ಬಹಳಷ್ಟು ಮಾಧ್ಯಮ ವರದಿಗಳನ್ನು ನೋಡಿದೆ. ಆದರೆ ನನಗೆ ಅಂತಹ ಮೂಢನಂಬಿಕೆಗಳೇನೂ ಇಲ್ಲ. ನಾನು ಅದನ್ನು ನಂಬುವುದೂ ಇಲ್ಲ. ಆದರೆ ಮನೆ ಖಾಲಿ ಅವರಿಗೆ ಕೀ ಕೊಡುವ ಸಂದರ್ಭದಲ್ಲಿ ನಮ್ಮ ತಾಯಿ ಮತ್ತು ಮಾಲಿಕರ ನಡುವೆ ಮಾತುಕತೆ ನಡೆದಿತ್ತು. ಈ ಸಂದರ್ಭದಲ್ಲಿ ಮಾಲೀಕರು ಹೀನಾಯವಾಗಿ ಮಾತನಾಡಿದ್ದಾರೆ. ಇದರಿಂದಾಗಿ ಇಷೆಲ್ಲಾ ಮಾತುಕತೆ ನಡೆದಿದೆ. ನಾನು ಬಾಡಿಗೆ ಕಟ್ಟಿಲ್ಲ ಅಂತ ಮನೆ ಮಾಲೀಕರು ದೇವರ ಮೇಲೆ ಪ್ರಮಾಣ ಮಾಡಿ ಹೇಳಲಿ, ಆಗ ಅವರು ಹೇಳಿದ್ದನ್ನ ಕೊಡುತ್ತೇನೆ'' ಎಂದು ಫೇಸ್ ಬುಕ್ ಲೈವ್ ನಲ್ಲಿ ನಟ ಯಶ್ ಸವಾಲು ಹಾಕಿದ್ದಾರೆ.
ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ಯಶ್ ತಾವು ಮನೆ ಬಾಡಿಗೆ ಕಟ್ಟಿರುವುದಕ್ಕೆ ದಾಖಲೆಗಳನ್ನೂ ವಿವರಿಸಿದರು.
ಮೂರು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಯಶ್'ಗೆ ಕೋರ್ಟ್ ಆದೇಶ
ಕೆಲ ದಿನಗಳ ಹಿಂದೆ, ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ 2010ರ ಅಕ್ಟೋಬರ್ 16 ರಿಂದ ನಟ ಯಶ್ ಕುಟುಂಬ ತಮ್ಮ ಮನೆಯಲ್ಲಿ ವಾಸವಾಗಿದ್ದು, ಸರಿಯಾದ ಸಮಯಕ್ಕೆ ಬಾಡಿಗೆ ನೀಡುತ್ತಿಲ್ಲ, ಕೇಳಿದರೆ ತಮಗೇ ಬೆದರಿಕೆ ಹಾಕುತ್ತಿದ್ದಾರೆ. ಯಶ್ ತಾಯಿಯಿಂದ ನಮಗೆ 21.37 ಲಕ್ಷ ರೂ. ಬಾಡಿಗೆ ಹಣ ಬರಬೇಕಿದೆ ಎಂದು ಎಂದು ಆರೋಪಿಸಿ ಮನೆ ಮಾಲೀಕ ಮುನಿಪ್ರಸಾದ್ ಅವರು ಗಿರಿನಗರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ಮಂಗಳವಾರ ವಿಚಾರಣೆ ನಡೆಸಿದ 42ನೇ ಸಿಟಿ ಸಿವಿಲ್ ಕೋರ್ಟ್, ನಟ ಯಶ್ ಅವರ ತಾಯಿ ಪುಷ್ಪಾ ಅವರಿಗೆ ಬಾಕಿ ಇರುವ 9.60ಲಕ್ಷ ರೂ.ಗಳನ್ನು ಮಾಲಿಕರಿಗೆ ಪಾವತಿಸಿ, ಮನೆ ಖಾಲಿ ಮಾಡುವಂತೆ ಆದೇಶಿಸಿದ್ದು, ಮೂರು ತಿಂಗಳ ಗಡುವು ನೀಡಿತ್ತು.