"ಯಾಕೋ ಗೊತ್ತಿಲ್ಲ ಅನಂತ್ ನಾಗ್ ಮತ್ತು ದಿಗಂತ್ ನಮ್ಮನ್ನ ತುಂಬಾನೇ ಕಾಡುತ್ತಿದ್ದಾರೆ"

Written by - YASHODHA POOJARI | Edited by - Manjunath N | Last Updated : Nov 14, 2022, 08:19 PM IST
  • ತಿಮ್ಮಯ್ಯ ಆಂಡ್ ತಿಮ್ಮಯ್ಯ 30 ವರ್ಷಗಳ ನಂತರ ಭೇಟಿಯಾಗುವ ಅಜ್ಜ ಮತ್ತು ಮೊಮ್ಮಗನ ಕಥೆಯಾಗಿದೆ.
  • ಚಿತ್ರದಲ್ಲಿ ದಿಗಂತ್‌ ಅವರಿಗೆ ನಾಯಕಿಯಾಗಿ ನಟಿ ಐಂದ್ರಿತಾ ರೈ ಹಾಗು ನಟಿ ಶುಭ್ರಾ ಅಯ್ಯಪ್ಪ ನಟಿಸಿದ್ದಾರೆ.
  • ಸಿದ್ಲಿಂಗು ಶ್ರೀಧರ್‌ ಮತ್ತು ದಿಲೀಪ್‌ ಬಿ. ಕುಮಾರ್‌ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
 "ಯಾಕೋ ಗೊತ್ತಿಲ್ಲ ಅನಂತ್ ನಾಗ್ ಮತ್ತು ದಿಗಂತ್ ನಮ್ಮನ್ನ ತುಂಬಾನೇ ಕಾಡುತ್ತಿದ್ದಾರೆ" title=

"ನೆನಪಿನ ಬಾಗಿಲ ಬಡಿದಿದೆ ಕೈಗಳು, ನೆರಳಿನ ಹೆಜ್ಜೆಯ ಅರಸಿದೆ ಕಾಲ್ಗಳು"ಆಹಾ ಎಂಥ ಸಾಹಿತ್ಯ..ಈ ಸಾಲುಗಳು ಯಾಕೋ ಹೆಚ್ಚಾಗಿ ನಮ್ಮನ್ನ ಕಾಡಲು ಶುರುವಾಗಿದೆ.ಯೆಸ್ ಬಹುನಿರೀಕ್ಷೆಯ 'ತಿಮ್ಮಯ್ಯ ಆಂಡ್ ತಿಮ್ಮಯ್ಯ' ಸಿನಿಮಾದ ಮತ್ತೊಂದು ಟೀಸರ್ ಬಿಡುಗಡೆಯಾಗಿ ಮನಸ್ಸಿಗೆ ತುಂಬಾ ಹತ್ತಿರವಾಗುತ್ತಿದೆ. ಈ ಹಾಡಿನ ಸಾಲು ಈ ಟೀಸರ್ ನಲ್ಲಿ ನಿಮ್ಮ ಮನಸ್ಸಿಗೆ ನಾಟೋದು ಪಕ್ಕಾ ಆಗಿದೆ.

ಇದನ್ನೂ ಓದಿ : ನೋಟ್ ಎಕ್ಸ್ ಚೆಂಜ್ ನೆಪದಲ್ಲಿ ಪೆಟ್ರೋಲ್ ಬಂಕ್‌ನಲ್ಲಿ ಹಣ ಕದ್ದು ಪರಾರಿ

ಯಾಕಂದ್ರೆ "ತಿಮ್ಮಯ್ಯ ಆಂಡ್ ತಿಮ್ಮಯ್ಯ" ಸಿನಿಮಾದ ಈ ಟೀಸರ್ ಯಾಕೋ ಗೊತ್ತಿಲ್ಲ ನಮ್ಮನ್ನ ಭಾವನಾತ್ಮಕವಾಗಿ  ಕಾಡುತ್ತಿದೆ. ಪ್ರತಿಯೊಬ್ಬರ ಮನೆಯಲ್ಲೂ ಹಿರಿ ಜೀವಗಳು ಇದ್ದೇ ಇರುತ್ತಾರೆ . ತಾತ ಮೊಮ್ಮಕ್ಕಳ  ನಡುವಿನ ಬಾಂಧವ್ಯ ಯಾವತ್ತಿಗೂ ನಿಷ್ಕಲ್ಮಶವಾಗಿರುತ್ತೆ. ಹಾಗೆಯೇ "ತಿಮ್ಮಯ್ಯ ಆಂಡ್ ತಿಮ್ಮಯ್ಯ" ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಮತ್ತು ದೂದ್ ಪೇಡಾ ದಿಗಂತ್ ನಿಮ್ಮನ್ನ ತಾತ ಮೊಮ್ಮಗನಾಗಿ ನಿಮ್ಮನ್ನ ಭರ್ಜರಿಯಾಗಿ ರಂಜಿಸಲು ಅತೀ ಶೀಘ್ರದಲ್ಲಿ ನಿಮ್ಮ ಮುಂದೆ ಬರುತ್ತಾರೆ. ಡಿಸಂಬರ್ ತಿಂಗಳ ಮೊದಲ ವಾರ ಅಂದ್ರೆ 2 ರಂದು ಈ ಚಿತ್ರ ತೆರೆಯ ಮೇಲೆ  ಅಬ್ಬರಿಸೋದು ಕನ್ಫರ್ಮ್ ಆಗಿದೆ.

ಇದನ್ನೂ ಓದಿ : ಕುಡಿದ ಮತ್ತಿನಲ್ಲಿ ಮಾರಾಮಾರಿ! ಮುಂದಾಗಿದ್ದನ್ನು ನೋಡಿದ್ರೆ ಎದ್ದುಬಿದ್ದು ನಗ್ತೀರಾ

ತಿಮ್ಮಯ್ಯ ಆಂಡ್ ತಿಮ್ಮಯ್ಯ 30 ವರ್ಷಗಳ ನಂತರ ಭೇಟಿಯಾಗುವ ಅಜ್ಜ ಮತ್ತು ಮೊಮ್ಮಗನ ಕಥೆಯಾಗಿದೆ.ಚಿತ್ರದಲ್ಲಿ ದಿಗಂತ್‌ ಅವರಿಗೆ ನಾಯಕಿಯಾಗಿ ನಟಿ ಐಂದ್ರಿತಾ ರೈ ಹಾಗು ನಟಿ ಶುಭ್ರಾ ಅಯ್ಯಪ್ಪ ನಟಿಸಿದ್ದಾರೆ. ಸಿದ್ಲಿಂಗು ಶ್ರೀಧರ್‌ ಮತ್ತು ದಿಲೀಪ್‌ ಬಿ. ಕುಮಾರ್‌ ಸೇರಿ ಹಲವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣ ತೋಟ ಈ ಸಿನಿಮಾಗೆ ಕ್ಯಾಮರಾ ವರ್ಕ್ ಮಾಡಿದ್ದು, ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಕಥೆ, ಚಿತ್ರ ಕಥೆಯನ್ನು ಸಂಜಯ್‌ ಶರ್ಮಾ ಅವರೇ ಬರೆದಿದ್ದಾರೆ. ಸಂಜಯ್‌ ಸಹೋದರ ರಾಜೇಶ್‌ ಶರ್ಮಾ ಸಿನಿಮಾಗೆ ಬಂಡವಾಳ ಹೂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News