"ತಿಕ್ಲ ಹುಚ್ಚ ವೆಂಕಟ್ ಅಂತ ಸಿನಿಮಾ ಮಾಡ್ತೀನಿ": ವೈಯಕ್ತಿಕ ಬದುಕಿನ ಬಗ್ಗೆ ಕಣ್ಣೀರಿಟ್ಟ ಹುಚ್ಚ ವೆಂಕಟ್

Huccha Venkat:ಇಷ್ಟು ದಿನ ನಾಪತ್ತೆಯಾಗಿದ್ದ ಹುಚ್ಚ ವೆಂಕಟ್ (Huccha Venkat) ಇಂದು ದಿಢೀರನೆ ಮಾಧ್ಯಮದ ಎದುರು ಪ್ರತ್ಯಕ್ಷರಾಗಿದ್ದರು. 

Written by - Malathesha M | Edited by - Chetana Devarmani | Last Updated : Feb 24, 2022, 09:19 PM IST
  • ದಿಢೀರನೆ ಮಾಧ್ಯಮದ ಎದುರು ಪ್ರತ್ಯಕ್ಷರಾದ ಹುಚ್ಚ ವೆಂಕಟ್
  • ವೈಯಕ್ತಿಕ ಬದುಕಿನ ಬಗ್ಗೆ ಕಣ್ಣೀರಿಟ್ಟ ಹುಚ್ಚ ವೆಂಕಟ್
"ತಿಕ್ಲ ಹುಚ್ಚ ವೆಂಕಟ್ ಅಂತ ಸಿನಿಮಾ ಮಾಡ್ತೀನಿ": ವೈಯಕ್ತಿಕ ಬದುಕಿನ ಬಗ್ಗೆ ಕಣ್ಣೀರಿಟ್ಟ ಹುಚ್ಚ ವೆಂಕಟ್ title=
ಹುಚ್ಚ ವೆಂಕಟ್

ಬೆಂಗಳೂರು: ಇಷ್ಟು ದಿನ ನಾಪತ್ತೆಯಾಗಿದ್ದ ಹುಚ್ಚ ವೆಂಕಟ್ (Huccha Venkat) ಇಂದು ದಿಢೀರನೆ ಮಾಧ್ಯಮದ ಎದುರು ಪ್ರತ್ಯಕ್ಷರಾಗಿದ್ದರು. ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು. ಈ ವೇಳೆ ಹಲವು ವಿಚಾರಗಳ ಬಿಚ್ಚಿಟ್ಟಿದ್ದಾರೆ. 

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಹುಚ್ಚ ವೆಂಕಟ್, ಕನ್ನಡ ಚಿತ್ರರಂಗಕ್ಕೆ ಹುಚ್ಚ ವೆಂಕಟ್ ರಿ-ಎಂಟ್ರಿ (Re-entry to Film Industry) ಕೊಡುವುದಾಗಿ ಹೇಳಿದ್ದಾರೆ. ಅಲ್ಲದೆ ವೈಯಕ್ತಿಕ ಬದುಕಿನ ಬಗ್ಗೆ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಸೈನಾ ನೆಹ್ವಾಲ್ ವಿರುದ್ಧ ನಟ ಸಿದ್ದಾರ್ಥ್ ಆಕ್ಷೇಪಾರ್ಹ ಟ್ವೀಟ್‌; "ಉತ್ತಮ ಪದಗಳನ್ನು ಬಳಸಬಹುದಿತ್ತು" ಎಂದ ಬ್ಯಾಡ್ಮಿಂಟನ್ ತಾರೆ

ಮದುವೆ ಆಗಲ್ಲ ಅರ್ಥ ಮಾಡ್ಕೊಳ್ರೋ. ನಾನು ಇನ್ಮುಂದೆ ಜನರ ಪ್ರೀತಿ ಗಳಿಸ್ತೀನಿ. ನಾನು ಯಾವ ಕಾರಣಕ್ಕೂ ಮದುವೆಯಾಗಲ್ಲ ಎಂದು  ನೋವು ತೋಡಿಕೊಂಡಿದ್ದಾರೆ. 

ಸಾಕಷ್ಟು ನೋವು ಅನುಭವಿಸಿಬಿಟ್ಟೆ. ಭವಿಷ್ಯದಲ್ಲಿ ಸಿನಿಮಾ ಮಾಡ್ತೀನಿ ಅಷ್ಟೆ. 'ತಿಕ್ಲ ಹುಚ್ಚ ವೆಂಕಟ್' (Tikla huccha venkat) ಅಂತ ಸಿನಿಮಾ ಮಾಡ್ತೀನಿ ಎಂದು ಹೇಳಿದ್ದಾರೆ. 

ಅಪ್ಪನ ಅಗಲಿಕೆಯಿಂದ ತುಂಬಾ ನೋವಾಗಿದೆ. ಕೋಪ ಕಡಿಮೆ ಮಾಡ್ಕೊಂಡಿದ್ದೀನಿ. ಪ್ರೀತ್ಸೋರ್ ಮುಂದೆ ಮಗು ತರ ಆಗಿರ್ತಿನಿ ಎಂದು ಭಾವುಕವಾಗಿ ಮಾತನಾಡಿದ್ದಾರೆ. 

ತನ್ನದೇ ರೀತಿ ಮ್ಯಾನರಿಸಂರಿಂದ ಪ್ರಚಾರಗಿಟ್ಟಿಸಿಕೊಂಡಿದ್ದ ನಟ, ನಿರ್ದೇಶಕ ಹುಚ್ಚ ವೆಂಕಟ್. ಈ ಹಿಂದೆ ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಹುಚ್ಚ ವೆಂಕಟ್ ಸ್ಪರ್ಧಿಸಿದ್ದರು.

ಇದನ್ನೂ ಓದಿ:ದೌರ್ಜನ್ಯದ 5 ವರ್ಷಗಳ ನಂತರ ತಾವು ಎದುರಿಸಿದ ಅವಮಾನದ ಬಗ್ಗೆ ಬಿಚ್ಚಿಟ್ಟ ನಟಿ ಭಾವನಾ ಮೆನನ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News