ಈ ಫೋಟೋದಲ್ಲಿರುವ ಸ್ಟಾರ್‌ ನಟ ಯಾರಿರಬಹುದು..? ಇವತ್ತು ಇವರ ಬರ್ತ್‌ಡೇ

Hrithik Roshan : ಈ ಫೋಟೋದಲ್ಲಿರುವ ಮಗು ಯಾರು ಅಂತ ನಿಮ್ಗೆ ಗೊತ್ತೆ..? ಇಂದು ಇವರ ಹುಟ್ಟು ಹಬ್ಬ ಸಹ. ಅಲ್ಲದೆ, ಇವರು ಬಾಲಿವುಡ್‌ ಸ್ಟಾರ್‌ ನಟ, ಹ್ಯಾಂಡ್ಸಮ್‌ ಹಂಕ್‌, ಗ್ರೀಕ್‌ ಗಾಡ್‌ ಅಂತ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ. 

Written by - Krishna N K | Last Updated : Jan 10, 2024, 06:47 PM IST
  • ಹೃತಿಕ್ ರೋಷನ್ ಅವರಿಗೆ 50ನೇ ಹುಟ್ಟುಹಬ್ಬದ ಸಂಭ್ರಮ.
  • ಗ್ರೀಕ್‌ ಗಾಡ್‌ ಅಂತ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುತ್ತಾರೆ.
  • ಅವರ ತಾಯಿ ಪಿಂಕಿ ರೋಷನ್ ಅವರು ಬಿಗ್‌ ಸರ್ಪ್ರೈಸ್ ನೀಡಿದ್ದಾರೆ.
ಈ ಫೋಟೋದಲ್ಲಿರುವ ಸ್ಟಾರ್‌ ನಟ ಯಾರಿರಬಹುದು..? ಇವತ್ತು ಇವರ ಬರ್ತ್‌ಡೇ title=

Happy birthday Hrithik Roshan : ಬಾಲಿವುಡ್‌ ಹ್ಯಾಂಡ್ಸಮ್ ಹಂಕ್‌ ಹೃತಿಕ್ ರೋಷನ್ ಅವರ 50ನೇ ಹುಟ್ಟುಹಬ್ಬಕ್ಕೆ ಅವರ ತಾಯಿ ಪಿಂಕಿ ರೋಷನ್ ಅವರು ಬಿಗ್‌ ಸರ್ಪ್ರೈಸ್ ನೀಡಿದ್ದಾರೆ. ಪಿಂಕಿ ತಮ್ಮ ಮಗನಿಗಾಗಿ ದೀರ್ಘ ಹೃದಯಸ್ಪರ್ಶಿ ಬರವಣಿಗೆ ಜೊತೆಗೆ ಹೃತಿಕ್‌ ಮಗುವಾಗಿದ್ದಾಗಿನ ಫೋಟೋ ಹಂಚಿಕೊಂಡಿದ್ದಾರೆ. ಸಧ್ಯ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಚಿತ್ರ ನೋಡಿದ ಹೃತಿಕ್‌ ಫ್ಯಾನ್ಸ್‌ ಅವಗ್ಲೂ ಕ್ಯೂಟ್‌, ಇವಾಗ್ಲೂ ಕ್ಯೂಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

ಹೌದು... ಪಿಂಕಿ ರೋಷನ್‌ ಅವರು, ಹೃತಿಕ್‌ ಕೇವಲ ಐದು ತಿಂಗಳ ಮಗುವಾಗಿದ್ದಾಗಿನ ಫೋಟೋ ಮತ್ತು ಫೈಟರ್‌ ಸಿನಿಮಾದ ಫೋಟೋವನ್ನು ಹಂಚಿಕೊಡಿದ್ದಾರೆ. ಅಲ್ಲದೆ, "ಈ 2 ಫೋಟೋಗಳು ಅದೇ ಶುದ್ಧ ಆತ್ಮವನ್ನು ಪ್ರತಿನಿಧಿಸುತ್ತವೆ. 5 ತಿಂಗಳಿಂದ 50 ರವರೆಗಿನ ನಿನ್ನ ಪ್ರಯಾಣವನ್ನು ಸಾಮಾಜಿಕ ಮಾಧ್ಯಮದ ಮೂಲಕ ಲಕ್ಷಾಂತರ ಜನರ ಜೊತೆ ಹಂಚಿಕೊಳ್ಳಬಹುದು. ನಿಮ್ಮನ್ನು ಅರ್ಥ ಮಾಡಿಕೊಂಡಿರುವ ಮತ್ತು ನಿಮ್ಮನ್ನ ಪ್ರೀತಿಸುವವರಿಗೆ ನಿಮ್ಮ ಬಗ್ಗೆ ತಿಳಿದಿದೆ. ನೀವು ಈ ಭೂಮಿಯಲ್ಲಿ 50 ವರ್ಷಗಳನ್ನು ಕಳೆದಿದ್ದೀರಿ, ಅನೇಕರಿಗೆ ಸಂತೋಷವನ್ನು ಹಂಚಿದ್ದೀರಿ, ದೀನದಲಿತರ ಪರವಾಗಿ ನಿಂತಿದ್ದೀರಿ, ಮಹಿಳೆಯರನ್ನು ಗೌರವಿಸುತ್ತೀರಿ ಎಂದು ತಮ್ಮ ಮಗನನ್ನು ಕೊಂಡಾಡಿದ್ದಾರೆ. ಅಲ್ಲದೆ, 5 ತಿಂಗಳಾಗಿರಲಿ ಅಥವಾ 50 ಆಗಲಿ, ನೀನು ಯಾವಾಗಲೂ ನನ್ನ ಪುಟ್ಟ ಮಗ. ನೀನು ನನಗೆ ಸ್ಫೂರ್ತಿ, ನಿನ್ನಿಂದ ನಾನು ಪ್ರತಿದಿನ ನಗುತ್ತೇನೆ. ಜನ್ಮದಿನದ ಶುಭಾಶಯಗಳು ಅಂತ ಬರೆದುಕೊಂಡಿದ್ದಾರೆ.

 
 
 
 

 
 
 
 
 
 
 
 
 
 
 

A post shared by Pinkie Roshan (@pinkieroshan)

ಇದನ್ನೂ ಓದಿ: ಬಾಲಿವುಡ್ ‌ಕಿಂಗ್ ಖಾನ್ ಹೆಸರಿಗೆ ಹೊಸ ರೆಕಾರ್ಡ್... ಡಂಕಿ, ಜವಾನ್, ಪಠಾಣ್ ವೀಕ್ಷಿಸಿದ್ದು ಎಷ್ಟು ಮಂದಿ ಗೊತ್ತಾ.?

ಹೃತಿಕ್ ರೋಷನ್ ಅವರ ತಂದೆ, ಮಾಜಿ ನಟ ಮತ್ತು ಚಲನಚಿತ್ರ ನಿರ್ಮಾಪಕ ರಾಕೇಶ್ ರೋಷನ್ ಕೂಡ ತಮ್ಮ ಮಗನಿಗೆ ಹುಟ್ಟುಹಬ್ಬದ ಶುಭಕೋರಿದ್ದಾರೆ. ಈ ಕುರಿತು ಪೋಸ್ಟ್‌ ಶೇರ್‌ ಮಾಡಿರುವ ಅವರು, "ಡುಗ್ಗು ಅರ್ಧ ಶತಮಾನದ ಶುಭಾಶಯಗಳು 👏 50 ವರ್ಷಗಳ ಪ್ರೀತಿ, ಮರೆಯಲಾಗದ ನೆನಪುಗಳು, ಮುಂದೆ ಅನೇಕ ಅದ್ಭುತ ಸಾಧನೆಗಳಿಗೆ ಚಿಯರ್ಸ್. ಆಶೀರ್ವಾದಗಳು ಎಂದು ಬರೆದುಕೊಂಡಿದ್ದಾರೆ.

ಸಧ್ಯ ಹೃತಿಕ್‌ ರೋಷನ್‌ ಅವರು ಫೈಟರ್‌ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈ ಸಿನಿಮಾಗೆ ನಿರ್ದೇಶಕ ಸಿದ್ಧಾರ್ಥ್‌ ಆನಂದ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರದಲ್ಲಿ ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್ ಮತ್ತು ಅಕ್ಷಯ್ ಒಬೆರಾಯ್ ಸೇರಿದಂತೆ ಹಲವಾರು ಸ್ಟಾರ್‌ ಕಲಾವಿದರು ನಟಿಸಿದ್ದಾರೆ. ಸಿನಿಮಾ ಜನವರಿ 25 ರಂದು ತೆರೆ ಕಾಣಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News