Fighter: ಹೃತಿಕ್-ದೀಪಿಕಾ ಫೈಟರ್‌ ಸೀಕ್ವೆಲ್‌ : ಡೈರೆಕ್ಟರ್‌ ಸಿದ್ದಾರ್ಥ್‌ ಆನಂದ್‌ ಹೇಳಿದ್ದೇನು?

Fighter Sequel Update: ಇತ್ತೀಚೆಗೆ ತೆರೆಕಂಡ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ಫೈಟರ್‌ ಚಿತ್ರ ಬಾಕ್ಸ್‌ ಆಫೀಓಸ್‌ನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ಸಂದರ್ಭದಲ್ಲಿ, ಚಿತ್ರದ ನಿರ್ದೇಶಕ ಸಿದ್ದಾರ್ಥ್‌ ಆನಂದ್‌ ಸಿನಿಮಾದ ಸೀಕ್ವೆಲ್‌ ಮಾಡುವುದರ ಬಗ್ಗೆ ಮಾತನಾಡಿದ್ದಾರೆ.

Written by - Zee Kannada News Desk | Last Updated : Jan 29, 2024, 10:43 AM IST
  • ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸ್‌ನಿಂದಲೂ ಒಳ್ಳೆಯ ಕಲೆಕ್ಷನ್‌ ಮಾಡುತ್ತಿದ್ದು, ಇದೀಗ ಫೈಟರ್‌ ಸೀಕ್ವೇಲ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
  • ಫೈಟರ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಂದರ್ಶನದಲ್ಲಿ ಫೈಟರ್‌ ಸೀಕ್ವೆಲ್‌ ಅನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ ಎಂದು ಹೇಳಿದ್ದಾರೆ.
  • ಫೈಟರ್‌ ಚಿತ್ರ 22.50 ಕೋಟಿ ರೂಪಾಯಿಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ತೆರೆಕಂಡು, ಬಿಡುಗಡೆಯ ದಿನದ ಮಾರಾಟಕ್ಕೆ ಹೋಲಿಸಿದರೆ ಅದರ ಸಂಗ್ರಹಣೆಯಲ್ಲಿ ಕ್ರಮೇಣ ಏರಿತವನ್ನು ಕಂಡಿತು.
Fighter: ಹೃತಿಕ್-ದೀಪಿಕಾ ಫೈಟರ್‌ ಸೀಕ್ವೆಲ್‌ : ಡೈರೆಕ್ಟರ್‌ ಸಿದ್ದಾರ್ಥ್‌ ಆನಂದ್‌ ಹೇಳಿದ್ದೇನು? title=

Siddharath Anand Shared About Fighter Sequel: ಕಳೆದವಾರ ತೆರೆಕಂಡ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಫೈಟರ್ ಚಿತ್ರಕ್ಕೆ ಅಭಿಮಾನಿಗಳು, ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ವಿಮರ್ಶೆಗಳನ್ನು ಗಳಿಸುತ್ತಿದೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಚಿತ್ರ ಬಾಕ್ಸ್ ಆಫೀಸ್‌ನಿಂದಲೂ ಒಳ್ಳೆಯ ಕಲೆಕ್ಷನ್‌ ಮಾಡುತ್ತಿದ್ದು, ಇದೀಗ ಫೈಟರ್‌ ಸೀಕ್ವೇಲ್‌ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಸಿದ್ಧಾರ್ಥ್ ಆನಂದ್ ಅದರ ಮುಂದಿನ ಭಾಗದ ಯೋಜನೆಗಳ ಬಗ್ಗೆ ತೆರೆದಿಟ್ಟಿದ್ದಾರೆ.

ಫೈಟರ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಸಂದರ್ಶನದಲ್ಲಿ, "ಫೈಟರ್‌ ಸೀಕ್ವೆಲ್‌ ಅನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ. ಫೈಟರ್ ಚಿತ್ರ ಬಿಡುಗಡೆಯಾಗಿ ಕೇವಲ ಮೂರು ದಿನಗಳಾಗಿವೆ. ಪ್ರೇಕ್ಷಕರು ಸಿನಿಮಾಗೆ ನೀಡುವ ಪ್ರೀತಿಯೇ ನಾವು ಏನು ಮಾಡಬೇಕೆಂದು ನಿರ್ಧರಿಸುತ್ತದೆ ಎಂದು ನಾನು ಭಾವಿಸುತ್ತೇನೆ ಮತ್ತು ಫೈಟರ್ 2 ಅನ್ನು ದೊಡ್ಡ ಕಥೆಯನ್ನಾಗಿ ಮಾಡಲು ನಾವು ಇಷ್ಟಪಡುತ್ತೇವೆ.ನಮಗಿರುವ ಕೆಲವು ಉಪಾಯಗಳನ್ನು ನಾವು ಸಿನಿಮಾದಲ್ಲಿ ತೋರಿಸಲು ಬಯಸುತ್ತೀವೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: 23 ನೇ ವಯಸ್ಸಿಗೆ ಮದುವೆಯಾಗಲು ಬಯಸಿದ್ದ ಸಾಯಿಪಲ್ಲವಿ.. ಇನ್ನೂ ಸಿಂಗಲ್‌ ಆಗಿರೋದ್ಯಾಕೆ ಗೊತ್ತಾ?

ಹಾಗೇ ಮಾತನ್ನು ಮುಂದುವರೆಸುತ್ತಾ ಚಿತ್ರದ ನಿರ್ದೇಶಕ ತಾವು ಚಿತ್ರದ ಸೀಕ್ವೆಲ್‌ಗಳನ್ನು ಮಾಡಲು ಅಷ್ಟೊಂದು ಉತ್ಸುಕರಾಗೇನು ಇಲ್ಲವೆಂದು ತಿಳಿಸಿದ್ದಾರೆ. ದೇಶದ ಕೆಲವೇ ಕೆಲವು ನಿರ್ದೇಶಕರಲ್ಲಿ, ಇನ್ನೂ ಸೀಕ್ವೆಲ್ ಮಾಡದೆಯಿರುವವರಲ್ಲಿ  ತಾವೂ ಕೂಡ ಒಬ್ಬರು ಎಂದು ಹೇಳಿ ಮತ್ತು ಸದ್ಯಕ್ಕೆ ಸೀಕ್ವೆಲ್‌ ಮಾಡುವ ಯಾವುದೇ ಯೋಜನೆ ಇಲ್ಲ ಎಂದಿದ್ದಾರೆ. " ಇಂತಹ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹಾಗೇ ನನಗೆ ಸಿನಿಮಾಗಳ ಸೀಕ್ವೆಲ್‌ ಮಾಡುವುರದ ಬಗ್ಗೆ ನನಗೆ ಯಾವುದೇ ಖುಷಿಯಿಲ್ಲ. ನಾನು ತಪ್ಪಾಗಿರಬಹುದು ಎಂದು ನಾನು ಭಾವಿಸುತ್ತೇನೆ, ಆದರೆ ನಾನು ನನಗೆ ಸವಾಲು ಹಾಕಲು ಬಯಸುತ್ತೇನೆ,"ಎಂದು ಮಾತನಾಡಿದರು.

ಫೈಟರ್‌ ಚಿತ್ರ 22.50 ಕೋಟಿ ರೂಪಾಯಿಗಳೊಂದಿಗೆ ಬಾಕ್ಸ್ ಆಫೀಸ್‌ನಲ್ಲಿ ತೆರೆಕಂಡು, ಬಿಡುಗಡೆಯ ದಿನದ ಮಾರಾಟಕ್ಕೆ ಹೋಲಿಸಿದರೆ ಅದರ ಸಂಗ್ರಹಣೆಯಲ್ಲಿ ಕ್ರಮೇಣ ಏರಿತವನ್ನು ಕಂಡಿತು. ಫೈಟರ್ ಸಿನಿಮಾ ಮೊದಲ 3 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಮತ್ತು ಅಂದಾಜು 89.50 Cr ಭಾರತದ ನಿವ್ವಳವನ್ನು ಗಳಿಸಿತು. ಇದು ಎಲ್ಲಾ ಭಾಷೆಗಳಲ್ಲಿಯೂ  ನಾಲ್ಕನೇ ದಿನದಲ್ಲಿ ಸುಮಾರು Rs 28.50 Cr ಭಾರತದ ಲಾಭ ಮಾಡಿದೆ.  ಇದು ಭಾರತದಲ್ಲಿ ಒಟ್ಟಾರೆಯಾಗಿ  118 ರೂಪಾಯಿ ಕೋಟಿ ಕಮಾಲ್‌ ಮಾಡಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News