ʼಆಗಿನ ಜನ ಅನಕ್ಷರಸ್ಥರಿದ್ದರೂ ಬುದ್ದಿವಂತರಿದ್ದರುʼ: ದೀಪಿಕಾ ʼಕೆಸರಿ ಬಿಕಿನಿʼಗೆ ಜೈ ಎಂದ ಹನಿ ಸಿಂಗ್‌..!

ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾದ ಬೇಷರಂ ರಂಗ್‌ ಹಾಡಿನ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಹಾಡಿನ ಕುರಿತು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದೀಗ ಖ್ಯಾತ ಗಾಯಕ, ರ‍್ಯಾಪರ್ ಹನಿಸಿಂಗ್‌ ದೀಪಿಕಾ ಕೇಸರಿ ಬಿಕಿನಿ ವಿವಾದದ ಕುರಿತು ಧ್ವನಿ ಎತ್ತಿದ್ದು, ಆ ಸಮಯದಲ್ಲಿ ಜನರು ಅನಕ್ಷರಸ್ಥರಾಗಿದ್ದರೂ ಸಹ ಬುದ್ದಿವಂತರಿದ್ದರು ಎಂದು ಹೇಳುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.

Written by - Krishna N K | Last Updated : Dec 24, 2022, 11:22 AM IST
  • ಪಠಾಣ್‌ ಸಿನಿಮಾದ ಬೇಷರಂ ರಂಗ್‌ ಹಾಡಿನ ವಿವಾದ ಮುಗಿಯುವಂತೆ ಕಾಣುತ್ತಿಲ್ಲ.
  • ಹಾಡಿನ ಕುರಿತು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ.
  • ʼಆಗಿನ ಜನ ಶಿಕ್ಷಣ ಇಲ್ಲ ಅಂದ್ರೂ ಬುದ್ದಿವಂತಿದ್ದರುʼ ಎನ್ನುವ ಮೂಲಕ ರ‍್ಯಾಪರ್ ಹನಿಸಿಂಗ್‌ ಖಾನ್ ಪರ ಧ್ವನಿ ಎತ್ತಿದ್ದಾರೆ.
ʼಆಗಿನ ಜನ ಅನಕ್ಷರಸ್ಥರಿದ್ದರೂ ಬುದ್ದಿವಂತರಿದ್ದರುʼ: ದೀಪಿಕಾ ʼಕೆಸರಿ ಬಿಕಿನಿʼಗೆ ಜೈ ಎಂದ ಹನಿ ಸಿಂಗ್‌..! title=

Honey singh on Pathan : ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ಪಠಾಣ್‌ ಸಿನಿಮಾದ ಬೇಷರಂ ರಂಗ್‌ ಹಾಡಿನ ವಿವಾದ ಮುಗಿಯುವಂತೆ ಕಾಣುತ್ತಿಲ್ಲ. ಹಾಡಿನ ಕುರಿತು ಪರ ಮತ್ತು ವಿರೋಧ ಪ್ರತಿಕ್ರಿಯೆಗಳು ಕೇಳಿ ಬರುತ್ತಿವೆ. ಇದೀಗ ಖ್ಯಾತ ಗಾಯಕ, ರ‍್ಯಾಪರ್ ಹನಿಸಿಂಗ್‌ ದೀಪಿಕಾ ಕೇಸರಿ ಬಿಕಿನಿ ವಿವಾದದ ಕುರಿತು ಧ್ವನಿ ಎತ್ತಿದ್ದು, ಆ ಸಮಯದಲ್ಲಿ ಜನರು ಅನಕ್ಷರಸ್ಥರಾಗಿದ್ದರೂ ಸಹ ಬುದ್ದಿವಂತರಿದ್ದರು ಎಂದು ಹೇಳುವ ಮೂಲಕ ಸಮರ್ಥನೆ ಮಾಡಿಕೊಂಡಿದ್ದಾರೆ.

ಯಸ್‌, ʼಬೇಷರಂ ರಂಗ್ʼ ಹಾಡಿನ ಸುತ್ತ ವಿವಾದಗಳು ಸೃಷ್ಟಿಯಾಗುತ್ತಿವೆ. ಇತ್ತೀಚಿನ ದಿನಗಳಲ್ಲಿ ಜನರು ಎಲ್ಲದ್ದನ್ನೂ ತುಂಬಾ ಸೂಕ್ಷ್ಮವಾಗಿ ನೋಡುತ್ತಿದ್ದಾರೆ. ಶಾರುಖ್ ಖಾನ್ ಅಭಿನಯದ ಪಠಾಣ್‌ ಮೊದಲ ಅಧಿಕೃತ ಟ್ರ್ಯಾಕ್ ಬೇಷರಮ್ ರಂಗ್ ಬಿಡುಗಡೆಯಾದಾಗಿನಿಂದ, ದೀಪಿಕಾ ಪಡುಕೋಣೆಯ ಕೇಸರಿ ಬಿಕಿನಿ ವಿವಾದಕ್ಕೆ ಗುರಿಯಾಗಿದೆ. ಈ ಹಾಡಿನ ಕುರಿತು ಅನೇಕ ರಾಜಕಾರಣಿಗಳು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ನೆಟ್ಟಿಗರು ವಿಡಿಯೋ ಅಸಭ್ಯವಾಗಿದೆ ಎಂದು ಹೇಳುತ್ತಿದ್ದಾರೆ. 

ಇದನ್ನೂ ಓದಿ: Sneha Divorce : ʼನೀನು ಪರ್ಫೆಕ್ಟ್ ಅಲ್ಲ...!ʼ ಕೊನೆಗೂ ಗಂಡನ ಕುರಿತು ಸತ್ಯ ಬಿಚ್ಚಿಟ್ಟ ನಟಿ ಸ್ನೇಹಾ..!

ಇದೀಗ ದೀಪಿಕಾ ಬಿಕಿನಿ ವಿವಾದದ ಕುರಿತು ಮಾತನಾಡಿರುವ ಹನಿ ಸಿಂಗ್‌, ಮುಂಚೆ ಹೆಚ್ಚು ಸ್ವಾತಂತ್ರ್ಯ ಇತ್ತು. ಅಲ್ಲದೆ, ಕಡಿಮೆ ಶಿಕ್ಷಣ ಪಡೆದರು ಸಹ ಅಂದಿನ ಜನ ಬುದ್ಧಿವಂತರಾಗಿದ್ದರು. ಅವರು ಪ್ರತಿ ವಿಷಯಗಳನ್ನು ಮನರಂಜನೆಯಾಗಿ ತೆಗೆದುಕೊಳ್ಳುತ್ತಿದ್ದರು. ರೆಹಮಾನ್ ಸರ್ ಅವರು ಹಾಡಿರುವ ʼರುಕ್ಮಣಿ ರುಕ್ಮಣಿ ಶಾದಿ ಕೆ ಬಾದ್ ಕ್ಯಾ ಕ್ಯಾ ಹುವಾʼ (ಮದುವೆಯ ನಂತರ ಏನಾಯಿತು, ರುಕ್ಮಣಿ?).. ಎಂಬ ಹಾಡನ್ನು ಜನರೇ ಒಪ್ಪಿಕೊಂಡಿದ್ದರು. ನಾನು ಅದನ್ನು ಕೇಳುತ್ತಾ ಬೆಳೆದಿದ್ದೇನೆ, ಆದರೆ ಸ್ವತಃ ನಾನೇ ಅಂತಹ ಸಾಹಿತ್ಯವನ್ನು ಮಾಡಿದಾಗ, ಜನರು ವಿರೋಧಿಸಲು ಪ್ರಾರಂಭಿಸಿದರು. ಈಗೀಗ ಅಂತೂ ಅದು ಇನ್ನೂ ಕೆಟ್ಟದಾಗಿದೆ ಎಂದು ರಾಪರ್ ಪಿಟಿಐಗೆ ತಿಳಿಸಿದರು.

2013 ರ ಬಿಡುಗಡೆಯಾದ ಚೆನ್ನೈ ಎಕ್ಸ್‌ಪ್ರೆಸ್‌ನಲ್ಲಿ ಲುಂಗಿ ಡ್ಯಾನ್ಸ್ ಹಾಡಿನಲ್ಲಿ ಶಾರುಖ್ ಮತ್ತು ದೀಪಿಕಾ ಅವರೊಂದಿಗೆ ನಾನು ಡ್ಯಾನ್ಸ್‌ ಮಾಡಿದ್ದೆ. ಆ ಹಾಡನ್ನು ಎಲ್ಲರೂ ಎಲ್ಲರೂ ಅರ್ಥಮಾಡಿಕೊಂಡಿದ್ದರು. ಅಲ್ಲದೆ, ಶಾಯರಿಗಳನ್ನು ಅಂದಿನ ಜನ ಕೊಳಕು ಎಂದು ನೋಡಲಿಲ್ಲ. ಈಗಿನ ಕಾಲದಲ್ಲಿ ‘ಚೋಲಿ ಕೆ ಪೀಚೆ ಕ್ಯಾ ಹೈ’ನಂತಹ ಹಾಡುಗಳನ್ನು ಹಾಕಿದ್ರೆ, ಕೋಪದಿಂದ ಪ್ರಶ್ನೆ ಮಾಡ್ತಾರೆ ಅಂತ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News