208 ಕೋಟಿ ರೂ. ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ರ‍್ಯಾಪರ್ ಯಾರು ಗೊತ್ತಾ..!

Yo Yo Honey Singh vs Badshah : ರಾಪ್ ಹಾಡುಗಳು ಯುವ ಸಂಸ್ಕೃತಿಯ ಭಾಗವಾಗುತ್ತಿದೆ. ಅಲ್ಲದೆ, ಇಂದು ಖ್ಯಾತ ನಟರ ಸಿನಿಮಾಗಳಲ್ಲಿ ಈ ಶೈಲಿಯ ಹಾಡುಗಳನ್ನು ಬಳಸಲಾಗುತ್ತಿದೆ. ಸಧ್ಯ ಭಾರತದ ರ‍್ಯಾಪರ್‌ಗಳ ಪೈಕಿ ಓರ್ವ ಗಾಯಕ ಅತ್ಯಂತ ಶ್ರೀಮಂತ ರ‍್ಯಾಪ್‌ ಸಿಂಗರ್‌ ಪಟ್ಟಿಯಲ್ಲಿ ಮೊದಲಿದ್ದಾರೆ. ಹಾಗಿದ್ರೆ ಅವರು ಯಾರು.? ಅಂತ ತಿಳಿಯೋಣ ಬನ್ನಿ..

Written by - Krishna N K | Last Updated : Oct 5, 2023, 04:24 PM IST
  • ಅತ್ಯಂತ ಪ್ರಭಾವಿ ರ‍್ಯಾಪರ್‌ಗಳಲ್ಲಿ ಹನಿಸಿಂಗ್‌ ಕೂಡ ಒಬ್ಬರು.
  • ಈ ಗಾಯಕ ಅಲ್ಪಾವಧಿಯಲ್ಲಿಯೇ ಖ್ಯಾತಿಯನ್ನು ಪಡೆದರು.
  • ಹನಿ ಮುಂಬರುವ ಕಲಾಸ್ಟಾರ್‌ ಹಾಡು ಅಕ್ಟೋಬರ್‌ 15 ರಂದು ರಿಲೀಸ್‌ ಆಗಲಿದೆ.
208 ಕೋಟಿ ರೂ. ಆಸ್ತಿ ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ರ‍್ಯಾಪರ್ ಯಾರು ಗೊತ್ತಾ..! title=

Honey Singh Kala star : ಭಾರತದಲ್ಲಿ ರಾಪ್ ಸಂಸ್ಕೃತಿ ವೇಗವಾಗಿ ಬೆಳೆಯುತ್ತಿದೆ. ಕಳೆದ ಕೆಲವು ವರ್ಷಗಳಿಂದ ರ‍್ಯಾಪರ್‌ಗಳು ಭಾರತೀಯ ಸಂಗೀತ ಪ್ರಕಾರದಲ್ಲಿ ವ್ಯಾಪಕ ಬೆಳವಣಿಗೆ ಕಂಡಿದ್ದಾರೆ. ಇಂದಿನ ಸಿನಿಮಾಗಳಲ್ಲಿ ರ‍್ಯಾಪ ಸಾಂಗ್‌ಗಳನ್ನು ಸಹ ಕಾಣಬಹುದು. ಯೋ ಯೋ ಹನಿ ಸಿಂಗ್, ಬಾದ್‌ಶಾ ಮತ್ತು ದಿವಂಗತ ಸಿಧು ಮೂಸೆವಾಲಾ, ರ್ಯಾಪ್ಟರ್‌, ಸೇರಿದಂತೆ ಅನೇಕ ಖ್ಯಾತ ರ‍್ಯಾಪರ್‌ಗಳು ದೇಶದಲ್ಲಿದ್ದಾರೆ.

ರ‍್ಯಾಪ್‌ ಅಂದ ಬಂದಾಗ ನಮಗೆ ತಕ್ಷಣ ನೆನೆಪಾಗುವುದು ಯೋ ಯೋ ಹನಿ ಸಿಂಗ್. ಹಿಪ್ ಹಾಪ್ ಜೊತೆಗೆ ಪಾಪ್ ಸಂಗೀತವನ್ನು ಬೆರೆಸಿದ ಕೀರ್ತಿಗೆ ಹನಿ ಸಿಂಗ್‌ಗೆ ಸಲ್ಲುತ್ತದೆ. ಅಲ್ಲದೆ, ಇವರು ಭಾರತೀಯ ರ‍್ಯಾಪ್‌ ಸಂಗೀತದಲ್ಲಿ ಕ್ರಾಂತಿಕಾರಿ ವ್ಯಕ್ತಿ ಎಂದು ಹೇಳಬಹುದು.

ಇದನ್ನೂ ಓದಿ :  ರಣಬೀರ್ ಕಪೂರ್, ಟೈಗರ್ ಶ್ರಾಫ್, ಸನ್ನಿ ಲಿಯೋನ್ ಸೇರಿ ಹಲವು ತಾರೆಯರಿಗೆ ಇಡಿ ಸಮನ್ಸ್

ಹನಿ ಸಿಂಗ್ ನಿಜವಾದ ಹೆಸರು ಹಿರ್ದೇಶ್ ಸಿಂಗ್, ಇವರು ಹೋಶಿಯಾರ್‌ಪುರ (ಪಂಜಾಬ್) ಮೂಲದವರು. ಮಾರ್ಚ್ 15, 1983 ರಂದು ಪಂಜಾಬಿ ಕುಟುಂಬದಲ್ಲಿ ಜನಿಸಿದರು. 'ಬ್ರೌನ್ ರಂಗ್‌', 'ಬ್ಲೂ ಐಸ್', 'ಲವ್ ಡೋಸ್', ದೇಸಿ ಕಲಾಕಾರ್' ಹನಿ ಸಿಂಗ್‌ ಅವರ ಕೆಲವು ಪ್ರಸಿದ್ಧ ಹಾಡುಗಳು.

ಅತ್ಯಂತ ಪ್ರಭಾವಿ ರ‍್ಯಾಪರ್‌ಗಳಲ್ಲಿ ಹನಿಸಿಂಗ್‌ ಕೂಡ ಒಬ್ಬರು. ಈ ಗಾಯಕ ಅಲ್ಪಾವಧಿಯಲ್ಲಿಯೇ ಖ್ಯಾತಿಯನ್ನು ಪಡೆದರು. ಪಂಜಾಬಿ ಹಾಡುಗಳ ಮೂಲಕ ಗಾಯಕರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅಲ್ಲದೆ, ಮೊದಲು ಅತಿರೇಕದ ಸಾಹಿತ್ಯದಿಂದ ಕುಖ್ಯಾತರಾಗಿದ್ದರು.

ಇದನ್ನೂ ಓದಿ : ನನ್ನ ಪತ್ನಿಗೆ ಮಂತ್ರಿಯೊಬ್ಬರ ಜೊತೆ ಅಫೇರ್‌ ಇತ್ತು, ಅದಕ್ಕೆ ಆಕೆಯನ್ನು ಕೊಂದೆ : ಸಂಜಯ್‌ ದತ್‌

ಇನ್ನು ವರದಿಗಳ ಪ್ರಕಾರ, ಯೋ ಯೋ ಹನಿ ಸಿಂಗ್ ಅವರ ನಿವ್ವಳ ಮೌಲ್ಯ $25 ಮಿಲಿಯನ್ (208 ಕೋಟಿ) ಎಂದು ಹೇಳಲಾಗುತ್ತಿದೆ. ಈ ಪೈಕಿ ಬಾದ್‌ ಶಾ, ರ್ಯಾಪ್ಟರ್‌ ಸೇರಿದಂತೆ ಹಲವು ಸ್ಟಾರ್‌ ರ‍್ಯಾಪರ್‌ಗಳಿಗಿಂತ ಹನಿಸಿಂಗ್‌ ಹೆಚ್ಚು ಶ್ರೀಮಂತರು ಎಂದು ವರದಿ ಇದೆ. ಹನಿ ಸಿಂಗ್‌ ಸಂಗೀತ ನಿರ್ದೇಶನ ಚನೈ ಎಕ್ಸಪ್ರೇಸ್‌ ಲುಂಗಿ ಡ್ಯಾನ್ಸ್‌ ಸಖತ್‌ ಹಿಟ್‌ ಆಗಿತ್ತು. ಸಧ್ಯ ಹನಿ ಮುಂಬರುವ ಕಲಾಸ್ಟಾರ್‌ ಹಾಡು ಅಕ್ಟೋಬರ್‌ 15 ರಂದು ರಿಲೀಸ್‌ ಆಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News